ತಾಲೂಕು ಜೆಡಿಎಸ್ ಘಟಕದಲ್ಲಿ ಬಿರುಕು : ನಿಷ್ಠಾವಂತ ಕಾರ್ಯಕರ್ತರ ನಿರ್ಲಕ್ಷ್ಯ, ಪಂಚರತ್ನ ರಥಯಾತ್ರೆಗೆ ಸಾವಿರಾರು ಕಾರ್ಯಕರ್ತರು ಗೈರು : ಚನ್ನಕೇಶವರೆಡ್ಡಿ
ಪಾವಗಡ : ತಾಲೂಕಿನಲ್ಲಿ ಭಾನುವಾರ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯೋಜನೆ ರಥಯಾತ್ರೆ ಕಾರ್ಯಕ್ರಮಕ್ಕೆ ಪಕ್ಷದ ಹಿರಿಯ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗಿದ್ದು ಸಾವಿರಾರು ಸಂಖ್ಯೆಯ ನಿಷ್ಠಾವಂತ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಪಕ್ಷದ ಹಿರಿಯ ಮುಖಂಡ, ಜಿ.ಪಂ ಮಾಜಿ ಸದಸ್ಯ ಚನ್ನಕೇಶವ ರೆಡ್ಡಿ ತಿಳಿಸಿದರು.
ಶನಿವಾರ ಪಟ್ಟಣದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ತಾಲೂಕಿನಲ್ಲಿ ಜಾತಿ, ಧರ್ಮಗಳ ಭೇದವಿಲ್ಲದೆ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಪಕ್ಷವನ್ನು ಸಂಘಟಿಸಿದ್ದರ ಫಲವಾಗಿ ಜೆಡಿಎಸ್ ತಾಲೂಕಿನಲ್ಲಿ ಅಧಿಕಾರಕ್ಕೆ ಬಂದಿತ್ತು, ಇತ್ತೀಚೆಗೆ ಪಕ್ಷದ ನಿಯಮಗಳನ್ನು ಗಾಳಿಗೆ ತೂರಿ ಕೆಲವರ ಪ್ರತಿಷ್ಠೆಗಾಗಿ ಪ್ರಭಾವಿ ಮುಖಂಡರನ್ನು ನಿರ್ಲಕ್ಷಿಸಿ ವರಿಷ್ಠರ ದಾರಿ ತಪ್ಪಿಸುತ್ತಿರುವುದು ವಿಪರ್ಯಾಸ ಎಂದರು.
ಹಿರಿಯ ಮುಖಂಡ ಟೈಲರ್ ಕರಿಯಣ್ಣ ಮಾತನಾಡಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸಧೃಡವಾಗಿದೆ, ಆದರೆ ಕಾರ್ಯಕರ್ತರ ನಿರ್ಲಕ್ಷ ಹಾಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಅವಕಾಶ ನೀಡಲಾಗುತ್ತಿದೆ, ಕಳೆದ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥಿಯೊಂದಿಗೆ ಶಾಮೀಲಾಗಿ ಮತ ಹಾಕಿಸಿದವರಿಂದ ಕುತಂತ್ರ ಪ್ರಾರಂಭವಾಗಿದೆ, ಕೂಡಲೆ ವರಿಷ್ಠರು ಮಾಹಿತಿ ಸಂಗ್ರಹಿಸಿ ತಾಲೂಕು ಜೆಡಿಎಸ್ ಘಟಕದಲ್ಲಿರುವ ಒಳಜಗಳಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಚಿಂತಲರೆಡ್ಡಿ ಮಾತನಾಡಿ ಜೆಡಿಎಸ್ ತಾಲೂಕು ಘಟಕದಲ್ಲಿ ಪಕ್ಷ ಹೊಡೆಯಲು ಹುನ್ನಾರ ನಡೆದಿದೆ, ಕೆಲವರು ಅಧಿಕಾರ ಮತ್ತು ಹಣದ ದಾಹದಿಂದ ವಿತ್ರವಾಗಿ ವರ್ತಿಸುತ್ತಿದ್ದಾರೆ, ಸ್ವಯಂ ಘೋಷಿತ ಅಭ್ಯರ್ಥಿ ತಿಮ್ಮರಾಯಪ್ಪ ರವರ ಕೊಡುಗೆ ಪಕ್ಷಕ್ಕೆ ಏನಿದೆ, ಎಲ್ಲಾ ಕಾರ್ಯಕರ್ತರನ್ನು ಹೊಂದಾಣಿಕೆ ಮಾಡಿಕೊಳ್ಳಲಾಗದೆ ಗುಂಪುಗಾರಿಕೆ ಮಾಡಿದರೆ ನಷ್ಟ ಯಾರಿಗೆ ಎಂದು ಪ್ರಶ್ನಿಸಿದರು.
ವಕೀಲ ಭಗವಂತಪ್ಪ ಮಾತನಾಡಿ ಪಕ್ಷ ಮತ್ತು ಕಾರ್ಯಕರ್ತರು ಸದೃಡವಾಗಿದ್ದಾರೆ, ಆದರೆ ಅಭ್ಯರ್ಥಿ ಬದಲಾವಣೆ ಮಾಡಿದರೆ ಮಾತ್ರ ಜೆಡಿಎಸ್ ತಾಲೂಕಿನಲ್ಲಿ ಉಳಿಯಲಿದೆ, ಈಗಾಗಲೇ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಸೂಚನೆಯಂತೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತೀರ್ಮಾನಿಸಲಾಗಿದೆ, ಶೀರ್ಘದಲ್ಲೇ ವರಿಷ್ಠರ ಭೇಟಿ ಮಾಡಿ ವರದಿ ನೀಡುವುದಾಗಿ ತಿಳಿಸಿದರು.
ಈ ವೇಳೆ ಜೆಡಿಎಸ್ ಪಕ್ಷದ ಎಸ್.ಹನುಮಂತರಾಯಪ್ಪ, ರಾಮಾಂಜಿನಪ್ಪ, ಟೈಲರ್ ಕರಿಯಣ್ಣ, ನಾಗಭೂಷಣ, ಚಿಂತಲರೆಡ್ಡಿ, ಚನ್ನಕೇಶವರೆಡ್ಡಿ, ಅಕ್ಕಲಪ್ಪ, ಮಂಜುನಾಥ್, ಪಾತಲಿಂಗಪ್ಪ, ವೆಂಕಟರಮಣಪ್ಪ, ಅಶ್ವಥ್ ಸೇರಿದಂತೆ ಮತ್ತಿತರರು ಇದ್ದರು.