ತಿಪಟೂರು : ತೆಂಗು ಬೆಳೆಗೆ ತಗಲುವ ಹಲವು ರೋಗಗಲ್ಲಿ ಬಿಳಿನೊಣ ರೋಗವು ಕಂಡುಬಂದಿದ್ದು ರೈತರಿಗೆ ಆತಂಕ ಮೂಡಿದೆ. ಕರ್ನಾಟಕ ರಾಜ್ಯದ ವಿವಿಧ ತೋಟಗಾರಿಕಾ ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ ಇದರ ಹತೋಟಿಯ ಬಗ್ಗೆ ಹಲವಾರು ಕ್ರಮಗಳನ್ನು ಅನುಸರಿಸಿಲು ತಿಳಿಸಿರುತ್ತಾರೆ. ಪ್ರಮುಖವಾಗಿ ಜೈವಿಕ ನಿಯಂತ್ರಣ ಕ್ರಮವು ಸೂಕ್ತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ತಿಪಟೂರು ತಾಲ್ಲೂಕಿನ ದೊಡ್ಡ ಪ್ರಮಾಣದ ಪರೋಪ ಜೀವಿಗಳ ಉತ್ಪಾದನಾ ಕೇಂದ್ರದಲ್ಲಿ ಬಿಳಿ ನೋಣ ಕೀಟಬಾದೆಗೆ ಜೈವಿಕ ಕೀಟನಾಶಕವನ್ನು ತಾಲ್ಲೂಕು ಮಟ್ಟದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಔಷಧಿಯನ್ನು ಪ್ರಯೋಗಾಲಾಯದಲ್ಲಿ ಕಂಡುಹಿಡಿದು ಈ ಭಾಗದ ರೈತರಿಗೆ ಉಚಿತವಾಗಿ ನೀಡುತ್ತಿದ್ದು ರೈತರಿಗೆ ಬಗ್ಗೆ ಕಾಳಜಿವಹಿಸಿದೆ.
ತೆಂಗಿನಮರಕ್ಕೆ ತಗಲುವ ಕೀಟಬಾದೆಯಲ್ಲಿ ಬಿಳಿನೋಣವು ತೆಂಗಿನಗರಿಯ ರಸವನ್ನು ಹೀರಿ ನಂತರ ಅಂಟು ದ್ರಾವಣವನ್ನು ಹೊರಗೆ ಬಂದು ಬೇರೆ ಕೀಟಗಳು ಬರುವಂತೆ ಮಾಡಿ ತೆಂಗಿನ ಗರಿಯ ಕೆಳಬಾಗದಲ್ಲಿ ಕಪ್ಪುಬಣ್ಣದ ಮಸಿಯಂತಹ ಪದಾರ್ಥ ಬರುವಂತೆ ಕಾಣುತ್ತದೆ ಅಂತಹ ಸುರುಳಿಯಾಕಾರದ ಬಿಳಿನೋಣವು ತೆಂಗಿನ ಕಾಯಿಯ ಇಳುವರಿಯನ್ನು ಕುಂಠಿತಗೊಳಿಸುತ್ತದೆ ಇಂತಹ ರೋಗಕ್ಕೆ ತಿಪಟೂರಿನ ತೋಟಗಾರಿಕಾ ಪರೋಪ ಜೀವಿಗಳ ಉತ್ಪಾದನಾ ಕೇಂದ್ರದಲ್ಲಿ ಐಸೇರಿಯಾ ಪ್ಯೂಮೋಸೋರೋಸಿಯಾ ಎಂಬ ಕೀಟನಾಶಕವನ್ನು ತಯಾರು ಮಾಡಿ ರೈತರಿಗೆ ತರಬೇತಿ ನೀಡಿ ಉಚಿತವಾಗಿ ಕೀಟನಾಶಕವನ್ನು ನೀಡಲಾಗುತ್ತಿದೆ.
ಐಸೇರಿಯಾ ಪ್ಯೂಮೋಸೋರೋಸಿಯಾ ಎಂಬ ಕೀಟನಾಶಕವು ಇತರೆ ಬೆಳೆಗಳಾದ ಅಡಿಕೆ, ಸೀಬೆ, ಸಪೋಟ, ಹೂವಿನ ಗಿಡಗಳಲ್ಲಿ ಕಂಡು ಬರುವ ಕೀಟಬಾದೆಗೆ ಔಷಧಿಯನ್ನು ಸಿಂಪಡಿಸಬಹುದು. ಈ ಕೀಟನಾಶಕವು ಉತ್ಪಾದನೆ ಮಾಡಲು ವಿಶ್ವವಿದ್ಯಾಲಾಯಗಳಿಂದ ಕಚ್ಚಾವಸ್ತುಗಳನ್ನು ಪಡೆದು ತಾಲ್ಲೂಕಿನ ಪ್ರಯೋಗಾಲಾಯದಲ್ಲಿ ಸಿದ್ದತೆ ಮಾಡಲಾಗಿದೆ. ಒಂದು ಕೆ.ಜಿಯ ಕೀಟನಾಶಕವನ್ನು ಉತ್ಪಾದನೆ ಮಾಡಲು ನೂರು ರೂಪಾಯಿಗಳು ವೆಚ್ಚಾವಾಗಿದ್ದು, ಆದರೆ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ರೈತರು ಸದುಪಯೋಗ ಪಡೆದು ಕೊಳ್ಳಬಹುದು.
ತಾಲ್ಲೂಕು ಮಟ್ಟದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಐಸೇರಿಯಾ ಪ್ಯೂಮೋಸೋರೋಸಿಯಾ ಕೀಟನಾಶಕ ಪ್ರಯೋಗಶಾಲೆಯಲ್ಲಿ ಉತ್ತಾದನೆ ಮಾಡುತ್ತಿದ್ದು ಯಾವ ತೆಂಗು ಬೆಳೆಗಾರರು ಸಹ ಆತಂಕಪಡುವುದು ಬೇಡವಾಗಿದ್ದು, ಇದರ ಹತೋಟಿಗೆ ಔಷದಿ ಅಂಗಡಿ ಮಳಿಗೆಗಳಲ್ಲಿ ಬೇರೆ ಬೇರೆ ಕ್ರೀಮಿನಾಶಕಗಳನ್ನು ಸಿಂಪಡಿಸುವುದು ಸರಿಯಾದ ಕ್ರಮವಲ್ಲ.
ವರದಿ : ಪ್ರಶಾಂತ್ ಕರೀಕೆರೆ