11.12 ಕೋಟಿ ರೂಗಳ ಕಾಮಗಾರಿಗಳಿಗೆ ಶಾಸಕ ಡಾ.ಜಿ.ಪರಮೇಶ್ವರ ಚಾಲನೆ
ಪಟ್ಟಣದ 15 ವಾರ್ಡ್ ಗಳ ಅಭಿವೃದ್ದಿಗೆ ಅಡಿಗಲ್ಲು
ಕೊರಟಗೆರೆ : ಪಟ್ಟಣದ 15 ವಾರ್ಡ್ ಗಳಲ್ಲಿ ಒಟ್ಟು11.12 ಕೋಟಿ ರೂಗಳ ವಿಶೇಷ ಅನುಧಾನದ ಕಾಮಗಾರಿಗಳಿಗೆ ಶಾಸಕ ಡಾ.ಜಿ.ಪರಮೇಶ್ವರ ಶಂಕುಸ್ಥಾಪನೆ ನೆರವೇರಿಸಿದರು.
ಪಟ್ಟಣ ಪಂಚಾಯತಿಯ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ ಶಾಸಕ ಡಾ.ಜಿ.ಪರಮೇಶ್ವರ ಪಟ್ಟಣ ಪಂಚಾಯತಿ ಮುಂಬಾಗದ ವೇದಿಕೆಯಲ್ಲಿ ಮಾತನಾಡಿ ಕ್ಷೇತ್ರದಲಿ ಅಭಿವೃದಿ ಪರ್ವ ಮುಂದುವರೆದಿದೆ, ಪಟ್ಟಣದ ಸಮಗ್ರ ಅಭಿವೃದ್ದಿಗಾಗಿ ಸರ್ಕಾರದಿಂದ ವಿಶೇಷ 16 ಕೋಟಿ ರೂಗಳ ಅನುದಾನ ಮುಂಜೂರು ಮಾಡಿಸಲಾಗಿದೆ, ಅದರಲ್ಲಿ ಇಂದು 11 ಕೋಟಿ 11 ಲಕ್ಷ 13 ಸಾವಿರ ರೂಗಳ ಕಾಮಗಾರಿಗಳಿಗೆ ಇಂದು ಎಲ್ಲಾ ವಾರ್ಡ್ಗಳಿಗೂ ಚಾಲನೆ ನೀಡಲಾಗಿದೆ,ಇದರಲ್ಲಿ ಟಿ.ಎಸ್.ಪಿ. 189.92 ಲಕ್ಷ, ಎಸ್.ಸಿ.ಎಸ್.ಪಿ.96.00 ಲಕ್ಷ, ಎಸ್.ಎಷ್.ಸಿ ವಿಶೇಷ ಅನುದಾನ 600 ಲಕ್ಷ, 14 ನೇ ಹಣಕಾಸು 38.58 ಲಕ್ಷ, 15 ನೇ ಹಣಕಾಸು 157.67 ಲಕ್ಷ, ಎಸ್.ಎಷ್.ಸಿ 29.36 ಲಕ್ಷ, ಸೇರಿಒಟ್ಟು 111.13 ಲಕ್ಷರೂಗಳ ಅನುಧಾನ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಕೊರಟಗೆರೆ ಪಟ್ಟಣದ ಅಭಿವೃದಿಗೆ ನಾನು ಶಾಸಕ, ಮಂತ್ರಿ, ಉಪಮುಖ್ಯಮಂತ್ರಿಯಾದ ಕಾಲದಿಂದಲೂ ಕೆಲಸ ಮಾಡುತ್ತಿದ್ದೇನೆ, 2008 ರಲ್ಲಿ ಶಾಸಕನಾಗಿ ಬಂದ ಕಾಲದಲ್ಲಿ ಪಟ್ಟಣ ಮುಖ್ಯರಸ್ತೆ ಅತ್ಯಂತ ಕಿರಿದಾಗಿಇದ್ದು ದಿನವೂ ಅಪಘಾತದ,ಜನರ ಪರದಾಟದ ದೂರುಗಳು ಬಂದವು ಆಗ ಅಂಗಡಿ ಕೆಲವು ಮಾಲಿಕರ ಮನ ಒಲಿಸಿ ಕೆಲವರ ವಿರೋಧದ ನಡುವೆಯೂ ರಸ್ತೆ ಅಗಲೀಕರಣ ಮಾಡಲಾಯಿತು, ಕೆಲವರು ನನ್ನ ವಿರುದ್ದ ಇದರ ರಾಜಕೀಯ ಲಾಭ ಪಡೆಯಲು ಕೆಲಸ ಮಾಡಿದರು ಅದರೂ ರಸ್ತೆ ಅಗಲಿಕರಣ ಮಾಡಲಾಯಿತು,ಜೊತೆಗೆ ಬೈಪಾಸ್‌ರಸ್ತೆಯನ್ನು ಮಾಡಿಸಲಾಯಿತು. ಈ ಮುಖ್ಯರಸ್ತೆಗೆ ಉಪಮುಖ್ಯಮಂತ್ರಿ ಕಾಲದಲ್ಲಿ 9 ಕೋಟಿ ವೈಟ್‌ಟ್ಯಾಪ್ ರಸ್ತೆ ಮುಂಜೂರು ಮಾಡಿಸಲಾಯಿತು, ದುರಾದೃಷ್ಟಕರ ನಮ್ಮ ಸರ್ಕಾರ ಪತನ ನಂತರ ಬಿಜೆಪಿ ಸರ್ಕಾರ ಅದರ ಹಣ ವಾಪಸ್ ಪಡೆದ್ದಿತ್ತು ನಿರಂತರ ಓಡಾಟ ಮಾಡಿ ಹಣ ಮತ್ತೆ ತಂದು ವೈಟ್ ಟ್ಯಾಪಿಂಗ್‌ರಸ್ತೆ ಮಾಡಿಸಲಾಗಿದೆ ಹಾಗೂ ಇನ್ನು ಮುಂದುವರಿಕೆಗೆ 7 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪಟ್ಟಣಕ್ಕೆ 6 ಕೋಟಿಗಳ ವೆಚ್ಚದಲ್ಲಿ ಪಟ್ಟಣದಿಂದ ಮಲ್ಲೇಶಪುರ, ಕಾಮರಾಜನಹಳ್ಳಿ ಸಂಪರ್ಕ ಸೇತುವೆ, ನೂತನ ಪಟ್ಟಣ ಪಂಚಾಯತಿಕಛೇರಿ, ಪಟ್ಟಣದಲ್ಲಿ ಎಲ್ಲಾ ಬಾಗದಲ್ಲೂ ಸಿಸಿ ರಸ್ತೆ,ಚರಂಡಿ, ಕುಡಿಯುವ ನೀರು, ಪಟ್ಟಣದ ಜನರಿಗೆ ಹೇಮಾವತಿ ಕುಡಿಯುವ ನೀರಿನಯೋಜನೆ, ಈ ಯೋಜನೆಯ ಎರಡುದೊಡ್ಡ ನೀರಿನ ಟ್ಯಾಂಕ್‌ಗಳ ಕಾಮಗಾರಿ ಮಾಡಲಾಗಿದೆ,ಇದರೊಂದಿಗೆ ಪಟ್ಟಣ ಜನತೆಗೆ ಆರೋಗ್ಯ ವಿಹಾರಕ್ಕೆ ಗೂಕುಲ ಕೆರೆ ಅಭಿವೃದ್ದಿ, ಪ್ರವಾಸಿ ಮಂದಿರದ ಹತ್ತಿರ ಬೃಹತ್ ಪಾರ್ಕ್ ನಿರ್ಮಾಣ, ಬಸ್ಟಾಂಡ್ ವೃತ್ತದಲ್ಲಿ 2000 ಮಂದಿ ಕುಳಿತು ಆನಂದಿಸುವ ಕಲಾಭವನ, ವಾಣಿಜ್ಯ ಮಳಿಗೆ, ಸುಸರ್ಜಿತ ಆಸ್ಪತ್ರೆ ಸೇರಿದಂತೆ ಹಲವು ಯೋಜನೆಗಳನ್ನು ಗುರಿಯನ್ನು ಹಾಕಿಕೊಂಡಿದ್ದೇನೆ, ಇಂದಿನ ಕಾಮಗಾರಿಗೆ ಪಟ್ಟಣ ಪಂಚಾಯಿತಿಯ ಅದ್ಯಕ್ಷರು, ಉಪಾದ್ಯಕ್ಷರು, ಸದಸ್ಯರು ಪಕ್ಷಾತೀತವಾಗಿ ಭಾಗವಹಿಸಿದ್ದಾರೆ, ಮುಖ್ಯಾಧಿಕಾರಿಗಳು ಸೇರಿದಂತೆಎಲ್ಲಾಆಧಿಕಾರಿ ಸಿಬ್ಬಂದಿವರ್ಗ ಶ್ರಮವಹಿಸಿದ್ದಾರೆ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಅದ್ಯಕ್ಷೆ ಕಾವ್ಯಶ್ರಿ ರಮೇಶ್ ಮಾತನಾಡಿ ಪಟ್ಟಣದ ಅಭಿವೃದ್ದಿಗೆ 11,12ಕೋಟಿ ವಿಶೇಷ ಅನುಧಾನ ನೀಡಿರುವ ಶಾಸಕ ಡಾ.ಜಿ.ಪರಮೇಶ್ವರ ಮತ್ತು ಸರ್ಕಾರಕ್ಕೆ ಪಟ್ಟಣ ಪಂಚಾಯತಿ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಮಾಜಿ ಅದ್ಯಕ್ಷ ಹಾಗೂ ಸದಸ್ಯಎ,ಡಿ,ಬಲರಾಮಯ್ಯ ಮಾತನಾಡಿ ಪಟ್ಟಣ ಅಭಿವೃದ್ದಿಗೆ ಡಾ.ಜಿ.ಪರಮೇಶ್ವರ ರವರು ನೀಡಿರುವ ಅನುಧಾನ ಕೊಡುಗೆ ಯಾವ ಜನಪ್ರತಿನಿಧಿಗಳು ನೀಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಉಪಾದ್ಯಕ್ಷೆ ಭಾರತಿ ಸಿದ್ದಮಲ್ಲಪ್ಪ,ಸದಸ್ಯರುಗಳಾದ ಕೆ.ಆರ್.ಓಬಳರಾಜು, ಪುಟ್ಟನರಸಯ್ಯ, ಲಕ್ಷೀನಾರಾಯಣ, ನಾಗರಾಜು, ನಟರಾಜು, ಪ್ರದೀಪ್‌ಕುಮಾರ್, ನಂದಿಶ್, ಹೇಮಲತಾಮಂಜುನಾಥ್, ಮಂಜುಳ ಸತ್ಯನಾರಾಯಣ, ಹುಸ್ನಫರೀಯಾಕಲಿಂ, ಅನಿತಾ, ಮುಖ್ಯಾಧಿಕಾರಿ ಭಾಗ್ಯಮ್ಮ, ಅಭಿಯಂತಕ ಮುರಳಿ,ಅರೋಗ್ಯಧಿಕಾರಿ ಮಹಮದ್ ಹುಸೇನ್, ಆರ್‌ಐ, ವೇಣುಗೋಪಾಲ್, ಸಿಬ್ಬಂದಿಗಳಾದ ಮಹೇಶ್, ತುಳಸಿಕುಮಾರಿ, ನಾಗರತ್ನಮ್ಮ, ಸಾವಿತ್ರಮ್ಮ, ಶೈಲೇಂದ್ರ, ಮಹೇಶ್ವರಿ, ವನಿತಾ, ಚೈತ್ರ, ನರಸಿಂಹ, ರತ್ನಮ್ಮ, ಸಾಕಮ್ಮ, ಮಂಜುಳಮ್ಮ ಸೆರಿದಂತೆ ಇತರರು ಹಾಜರಿದ್ದರು.