ಕೊರಟಗೆರೆ
ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ೧ಸಾವಿರ ಕೋಟಿ ಅನುಧಾನ, ಗುಡಿಸಲು ಮುಕ್ತ ಕ್ಷೇತ್ರಕ್ಕೆ ೧೦ಸಾವಿರ ಮನೆ : ಶಾಸಕ ಡಾ.ಜಿ.ಪರಮೇಶ್ವರ್
ಕೊರಟಗೆರೆ : ಮನೆಯಲ್ಲಿ ಕುಳಿತು ಪೋಸ್ಟ್ ಮಾಡಿದ್ರೇ ಕೊರಟಗೆರೆಗೆ ಅನುಧಾನ ಬರೋದಿಲ್ಲ.. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ನಾನು ೧ಸಾವಿರ ಕೋಟಿ ಅನುಧಾನ ತಂದಿದ್ದೇನೆ.. ೩೬ಗ್ರಾಪಂಗಳ ೪೫೦ಗ್ರಾಮಗಳಿಗೂ ದಾಖಲೆ ಸಮೇತವಾಗಿ ಅಂಕಿಅಂಶದ ಉತ್ತರ ನೀಡ್ತೇನೆ. ನಿಮ್ಮೇಲ್ಲರ ಆರ್ಶಿವಾದವೇ ನನಗೇ ಕೆಲಸ ಮಾಡಲು ಶ್ರೀರಕ್ಷೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯ ಪುಟ್ಟನರಸಮ್ಮನಪಾಳ್ಯ ಮತ್ತು ಮರಚರಹಳ್ಳಿ ಗ್ರಾಮದಲ್ಲಿ ಜಿಪಂ ಇಲಾಖೆಯಿಂದ ಏರ್ಪಡಿಸಲಾಗಿದ್ದ ೧ಕೋಟಿ ೭೫ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ವೇಳೆ ಮಾತನಾಡಿದರು.
ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುವ ಉದ್ದೇಶದಿಂದ ಕೊರಟಗೆರೆಗೆ ನಾನು ೧೦ಸಾವಿರ ಮನೆಯನ್ನು ತಂದು ಕೊಟ್ಟಿದ್ದೇನೆ. ೧ವರ್ಷದಲ್ಲಿ ಕೊರಟಗೆರೆ ಕ್ಷೇತ್ರದ ೧೦೯ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ. ಮರಚರಹಳ್ಳಿ ಗ್ರಾಮದ ಅಭಿವೃದ್ದಿಗೆ ಈಗ ೧ಕೋಟಿ ೭೫ಲಕ್ಷ ಮತ್ತು ೨೦ಲಕ್ಷ ವೆಚ್ಚದ ಸಿಸಿರಸ್ತೆ-ಚರಂಡಿಗೆ ಅನುಧಾನ ನೀಡಿದ್ದೇನೆ. ನಿಮ್ಮೇಲ್ಲರ ಪ್ರತಿಮನೆಗೂ ಅಂಕಿಅಂಶ ಮತ್ತು ಪೋಟೊ ಸಮೇತ ದಾಖಲೆಯ ಉತ್ತರ ನೀಡುತ್ತೇನೆ ಎಂದು ಭರವಸೆ ನೀಡಿದರು.
ತೀತಾ ಸೇತುವೆ ಕಾಮಗಾರಿಗೆ ೧೦ಕೋಟಿಯ ರೂಪುರೇಷೆ ಸಿದ್ದವಾಗಿದೆ. ಸೇತುವೆ ಕಾಮಗಾರಿ ಪ್ರಾರಂಭಕ್ಕೆ ಅಧಿವೇಶನದ ವೇಳೆ ಒತ್ತಾಯ ಮಾಡುತ್ತೇನೆ. ಚುನಾವಣೆ ಬಂದಾಗ ಹಣಭೆಯಂತೆ ಎಲ್ರೂ ಬರ್ತಾರೆ. ನಾನು ಚುನಾವಣೆ ಪ್ರಾರಂಭದ ವೇಳೆ ಬರುವ ನಾಯಕನಲ್ಲ. ಕೊರಟಗೆರೆ ಕ್ಷೇತ್ರದ ಜನರ ಮನವಿಗೆ ಪೂರಕವಾಗಿ ಕೆಲಸ ಮಾಡುವ ನಿಮ್ಮೇಲ್ಲರ ಜನಸೇವಕ ಎಂದು ಹೇಳಿದರು.
೬೮ಕೋಟಿ ವೆಚ್ಚದ ಹೈಟೇಕ್ ಕ್ರಿಡಾಂಗಣ..
ಕಲ್ಪತರು ನಾಡಿನ ಗ್ರಾಮೀಣ ಪ್ರದೇಶದ ಉನ್ನತ ವ್ಯಾಸಂಗಕ್ಕೆ ವಿಶ್ವವಿದ್ಯಾನಿಲಯ ಮಂಜೂರು ಮತ್ತು ೬೮ಕೋಟಿ ವೆಚ್ಚದಲ್ಲಿ ತುಮಕೂರು ಜಿಲ್ಲಾ ಹೈಟೇಕ್ ಕ್ರಿಡಾಂಗಣ ಲೋಕಾರ್ಪಣೆಗೆ ಸಿದ್ದವಾಗಿದೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯು ಶಿಕ್ಷಣಕ್ರಾಂತಿ ಮಾಡಿದ್ದೇನೆ. ಗ್ರಾಮೀಣ ಪ್ರದೇಶದ ಬಡವರ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಮಾಡುವುದೇ ನನ್ನ ಪ್ರಮುಖ ದ್ಯೇಯವಾಗಿದೆ ಎಂದರು.
ಕೋಡ್ಲಹಳ್ಳಿಯ ಶಿಕ್ಷಕನ ನೀರಾವರಿಯ ಕನಸು ನನಸು ಆಗುವ ಕಾಲ ಹತ್ತಿರಬಂದಿದೆ. ಎತ್ತಿನಹೊಳೆ ಯೋಜನೆಯಿಂದ ಕೊರಟಗೆರೆ ಕ್ಷೇತ್ರದ ೧೦೯ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ. ಬಯಲು ಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದ ರೈತರಿಗೆ ಎತ್ತಿನಹೊಳೆ ಯೋಜನೆಯು ವರದಾನವಾಗಿ ಅಂರ್ತಜಲ ಅಭಿವೃದ್ದಿಗೆ ಸಹಕಾರಿ ಆಗಲಿದೆ. ಶಾಶ್ವತ ನೀರಾವರಿಯ ಕನಸನ್ನು ನನಸು ಮಾಡಿದ್ದೇನೆ ಎಂಬ ವಿಶ್ವಾಸವಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೊರಟಗೆರೆಯಲ್ಲಿ ತಿಳಿಸಿದರು.
ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿದ್ಯದಲ್ಲಿ ಸಿದ್ದರಬೆಟ್ಟ, ನೇಗಲಾಲ, ಮಾರಿಪಾಳ್ಯ ಮತ್ತು ಮರೇನಾಯಕನಹಳ್ಳಿ ಕೆರೆಗಳಿಗೆ ಶಾಸಕ ಡಾ.ಜಿ.ಪರಮೇಶ್ವರ್ ಗಂಗಾಪೂಜೆ ನೇರವೇರಿಸಿದ ನಂತರ ೬೦೦ಕ್ಕೂ ಅಧಿಕ ಮಹಿಳೆಯರಿಗೆ ಬಾಗೀನಾ ನೀಡಿದರು. ನಂತರ ಜೆಟ್ಟಿಅಗ್ರಹಾರ ಮತ್ತು ವಡ್ಡಗೆರೆಯ ದೀಪೋತ್ಸವ ಹಾಗೂ ಗೊಡ್ರಹಳ್ಳಿಯ ಹೂವಿನ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟ ಶ್ರೀಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ, ತಹಶೀಲ್ದಾರ್ ನಾಹಿದಾ ಜಮ್ ಜಮ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರಕೆರೆಶಂಕರ್, ಅಶ್ವತ್ಥ ನಾರಾಯಣ್, ಯುವಾಧ್ಯಕ್ಷ ವಿನಯಕುಮಾರ್, ಮಾಜಿ ತಾಪಂ ಅಧ್ಯಕ್ಷ ಕೆಂಪರಾಮಯ್ಯ ಸೇರಿದಂತೆ ಇತರರು ಇದ್ದರು.