ಮಕ್ಕಳಿಗೆ ಮನೆಗಳಲ್ಲಿ ಅರ್ಚನೆ-ಅರ್ಪಣೆ-ಅನುಭಾವಗಳನ್ನು ಕಲಿಸಿ : ಮಾಡಾಳು ಶ್ರೀಗಳು
ತಿಪಟೂರು : ಪೋಷಕರು ಮಕ್ಕಳಿಗೆ ತಮ್ಮ ತಮ್ಮ ಮನೆಗಳಲ್ಲಿ ಅರ್ಚನೆ, ಅರ್ಪಣೆ, ಅನುಭಾವ ಅಂದರೆ ಪೂಜೆ-ಪ್ರಸಾದ-ವಿಚಾರಗಳನ್ನು ಹಂಚಿಕೊಳ್ಳುವುದನ್ನು ಕಲಿಸಬೇಕು ಎಂದು ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಜಿ ತಿಳಿಸಿದರು.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿಯಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಶಿವಕುಮಾರ್ ರಚನೆಯ ಕಲ್ಪ ಕುಸುಮ ಎಂಬ ಕಾವ್ಯ ಸಂಕಲನ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಇಂದು ಮನುಷ್ಯರು ವಿವಿಧ ಬಗೆಯ ರೀತಿಯಲ್ಲಿ ಮನೆಗಳನ್ನು ದೇವಾಸ್ಥಾನಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಆದರೆ ನೆಮ್ಮದಿ ಸಮಾಧಾನವನ್ನು ಪಡೆದುಕೊಳ್ಳಲು ಸಾದ್ಯವಾಗುತ್ತಿಲ್ಲ, ಮನೆ-ಮಠಗಳನ್ನು ರಚನೆ ಮಾಡಿದ್ದೆವೆ ಆದರೆ ಮನಸ್ಸು-ಮನಸ್ಸುಗಳನ್ನು ಬೆಸೆಯುವ ಕೆಲಸವು ಆಗುತ್ತಿಲ್ಲ ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಪೂಜಿಸುವ ಹಂಚಿ ತಿನ್ನುವ, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮನಸ್ಸುಗಳನ್ನು ಬರದಿದ್ದರೆ ಲಕ್ಷ ಸಂಪಾದನೆ ಏತಕ್ಕೂ ಪ್ರಯೋಜನವಿಲ್ಲ, ಮಕ್ಕಳಿಗೆ ಪ್ರೀತಿ-ವಿಶ್ವಾಸ-ನಂಬಿಕೆ ಬರುವಂತೆ ಬೆಳಸಿ ಎಂದು ತಿಳಿಸದರು.
ಕಷ್ಟಪಟ್ಟು ದುಡಿಯಲು ಎಲ್ಲರೂ ನಿರತರಾಗಿ ತಮ್ಮ ತಮ್ಮ ಆರೋಗ್ಯಗಳನ್ನು ಹಾಳು ಮಾಡಿಕೊಂಡು ದುಡಿದ ಹಣವನ್ನು ಆಸ್ವತ್ರೆಗೆ ಸುರಿಯುತ್ತಿರಾ ಆದ್ದರಿಂದ ಉತ್ತಮವಾದ ಆರೋಗ್ಯಕರವಾದ ಆಹಾರವನ್ನು ಹಾಗೂ ನಾಟಿ ಹಸುವಿನ ಹಾಲನ್ನು ಉಪಯೋಗಿಸಿ ಮಕ್ಕಳನ್ನು ಸಧೃಡವಾಗಿ ಬೆಳಸಿ ಎಂದರು.
ಕರ‍್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಪರಮೇಶ್ವರಯ್ಯ, ಕಸಾಪ ಅಧ್ಯಕ್ಷ ಬಸವರಾಜು, ಸರ್ಕಾರಿ ಬಾಲಕರ ಕಾಲೇಜಿನ ಪ್ರಾಶುಂಪಾಲರಾದ ಎಮ್.ಡಿ. ಶಿವಕುಮಾರ್, ನಿವೃತ್ತ ಶಿಕ್ಷಕರು ಸೋಮಶೇಖರ್‌ಮಡೇನೂರು, ಶತಾಯಿಷಿ ರುದ್ರಮ್ಮ, ಬಾಲಕಿಯರ ಕಾಲೇಜಿನ ಪ್ರಾಂಶುಪಾಲರಾದ ಚನ್ನೇಗೌಡ, ಹವ್ಯಾಸಿ ಕವಿ ಶಿವಕುಮಾರ್‌ಸಾರ್ಥವಳ್ಳಿ, ಕಸಾಪ ಕಾರ್ಯದರ್ಶಿ ಮಂಜಪ್ಪ, ಮತ್ತಿತ್ತರು ಹಾಜರಿದ್ದರು.