ಕೊರಟಗೆರೆಜಿಲ್ಲೆತುಮಕೂರು

ಕುಡುಕರ ಕಾಟದಿಂದ ತೋವಿನಕೆರೆ ಸುತ್ತಮುತ್ತಲಿನ ರೈತರ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ತೊಂದರೆ : ಕಾನೂನು ಕ್ರಮಕ್ಕೆ ರೈತರ ಆಗ್ರಹ

ಕೊರಟಗೆರೆ : ನೂರಾರು ವರ್ಷಗಳಿಂದ ಕೃಷಿ ಉತ್ಪನ್ನಗಳನ್ನು ಬಂಡೆಗಳ ಸಮತಟ್ಟು ಜಾಗದ ಮೇಲೆ ಶುಚಿ ಮಾಡುತ್ತಿದ್ದ ರೈತರಿಗೆ ಮೂರು ವರ್ಷಗಳಿಂದ ಬಂಡೆ ಮೇಲೆ ಮದ್ಯ ಕುಡಿದು ಖಾಲಿ ಬಾಟಲಿಗಳನ್ನು ಹೊಡೆದು ಚೂರುಗಳನ್ನಾಗಿ ಮಾಡುತ್ತಿರುವುದು ಧವಸ, ಧಾನ್ಯ ಸಂಸ್ಕರಣೆಗೆ ಸಮಸ್ಯೆಯನ್ನು ತಂದೊಡ್ಡಿದೆ.
ಕೃಷಿಕರು ತಾವು ಬೆಳೆದ ರಾಗಿ, ತೊಗರಿ, ಜೋಳ ,ಸೇರಿದಂತೆ ಹಲವು ಆಹಾರ ಬೆಳೆಗಳನ್ನು ನೈಸರ್ಗಿಕವಾದ ಬಂಡೆ ಮೇಲೆ ಶುಚಿ ಮಾಡಿದರೆ ಶೀಘ್ರವಾಗಿ ಶುಚಿಯಾಗಿ ಮತ್ತು ಕಲ್ಮಶ ರಹಿತವಾಗಿ ಸಿದ್ಧವಾಗುತ್ತದೆ. ಜಮೀನುಗಳಲ್ಲಿ ಕಣ ಸಿದ್ದ ಮಾಡುವ ಸಂಪ್ರದಾಯ ಕೈ ಬಿಟ್ಟ ನಂತರ ಮತ್ತು ರಸ್ತೆ ಮೇಲೆ ಸಂಸ್ಕರಣೆ ಮಾಡಿದರೆ  ಶುಚಿಯಾಗಿರುವುದಿಲ್ಲ ಎಂದು ರೈತರುಗಳ ಗಮನಕ್ಕೆ ಬಂದ ನಂತರ ಬಂಡೆಗಳ ಮೇಲೆ ಶುಚಿಗೊಳಿಸುವ ಸಂಪ್ರದಾಯ ಹೆಚ್ಚಾಯಿತು. ಬಂಡೆಗಳ ಮೇಲೆ ಜಾಗ ಕಾಯ್ದಿರಿಸಲು ಕೃಷಿಕರಲ್ಲಿ ಪೈಪೋಟಿ ಇರುತ್ತಿತ್ತು. ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲದಮರದ ಬಂಡೆ,  ಹುಚ್ಚಪ್ಪನ ಬಂಡೆ, ಜುಂಜ ರಾಮನಹಳ್ಳಿಯ ಕುಟ್ಟ ಬಂಡೆ, ಓಣಿ ಬಂಡೆ, ತಪ್ಪಸೀಮರದ ಬಂಡೆ,ಗಂಗಣ್ಣನ ಬಂಡೆ, ಹೊಲತಾಳಿನ  ಸೀಬಿನಯ್ಯನ ಬಂಡೆ, ಗೊಲ್ಲರಹಟ್ಟಿ ಬಂಡೆ, ಬಂಡೆಹಳ್ಳಿ ತಿರುವಿನ ಗುಟ್ಟೆ ಬಂಡೆ, ಶಂಭೂನಹಳ್ಳಿ ನವನಗರ ಬಂಡೆ, ಬಿಕ್ಕೆಗುಟ್ಟೆ ಬಂಡೆ, ಮನುವಿನಕುರಿಕೆ ಬಂಡೆ ಗಳ ಮೇಲೆ  ಹಲವು ಟನ್ ಗಳಷ್ಟು ಶುದ್ಧವಾದ ರಾಗಿ ಸಿದ್ಧವಾಗುತ್ತಿತ್ತು.
ಕಳೆದ ವರ್ಷ ರಾಗಿ ತೆನೆಗಳನ್ನು ಕಟಾವು ಮಾಡುವ ಸಮಯದಲ್ಲಿ ಹೆಚ್ಚು ಮಳೆ ತೆನೆ ಹಾಳಾಗಿತ್ತು. ಖಾಲಿ ಇದ್ದ ಬಂಡೆಗಳ ಮೇಲೆ ಹಗಲು-ರಾತ್ರಿ ಸಮಯದ ಪರಿವಿಲ್ಲದೆ  ಮದ್ಯ ವ್ಯಸನಿಗಳು ಕುಡಿಯಲು ಜಾಗಮಾಡಿಕೊಂಡರು. ಮಧ್ಯ ಕುಡಿದ ಕುಡುಕರು ವಿಕೃತ ಆನಂದ ಅನುಭವಿಸಲು ಖಾಲಿಯಾದ ಗಾಜಿನ ಬಾಟಲಿಗಳನ್ನು ಬಂಡೆಗಳ ಮೇಲೆ ಹೊಡೆದು ಹಾಕುತ್ತಿದ್ದರು.
ಆಹಾರ ಧಾನ್ಯದ ಜೊತೆ ಗಾಜಿನ ಚೂರು
ಬಂಡೆಗಳ ಮೇಲೆ ಶುಚಿ ಮಾಡಿದ  ರಾಗಿಗೆ ಹೆಚ್ಚಿನ ಬೇಡಿಕೆ ಇಂದು ಅಲ್ಲಿಯೇ ಹಲವು ಕ್ವಿಂಟಲ್ ಗಳಷ್ಟು   ಮಾರಾಟವಾಗುತ್ತಿತ್ತು ಆದರೆ ಬಂಡೆ ಕುಡುಕರ ತಾಣವಾದ ನಂತರ ಶುಚಿ ಮಾಡಿದ ರಾಗಿಯ ಜೊತೆ ಗಾಜಿನ ಚೂರುಗಳು ಸೇರಿಕೊಳ್ಳುತ್ತಿವೆ. ಇಂತಹ ರಾಗಿಯಿಂದ ಮಾಡಿದ ಆಹಾರ ಸೇವಿಸುವುದು ಹೇಗೆ ಎನ್ನುವ ಭಯ ಕೃಷಿಕರಲ್ಲಿ ಕಾಡುತ್ತಿದೆ.
ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೆಹಳ್ಳಿ ತಿರುವಿನಲ್ಲಿರುವ ಬಂಡೆ ಮೇಲೆ ರಾಗಿ ತೆನೆಗಳನ್ನು ರಾಶಿ ಹಾಕಿ ಶುಚಿ ಮಾಡುತ್ತಿರುವುದು ಮತ್ತು ಬಂಡೆಹಳ್ಳಿ ತಿರುವಿನಲ್ಲಿ ರಾಜರಾಗಿ ಸೂಚಿ ಮಾಡುತ್ತಿದ್ದ ಬಂಡೆಮೇಲೆ ಮದ್ಯ ಕುಡಿದು ಗಾಜುಗಳನ್ನು ಒಡೆದು ಚೂರು ಮಾಡಲಾಗಿದೆ.
ಬಂಡೆಗಳ ಮೇಲಿನ ಗಾಜಿನ ಚೂರುಗಳು ಕೃಷಿ ಉತ್ಪನ್ನಗಳ ಸಂಸ್ಕರಣೆಗೆ  ದೊಡ್ಡ  ಹೊಡೆತ  ಆಗಿದೆ ನಗರದಿಂದ ಬಂದು ಜನರು ಬಂಡೆ ಮೇಲಿನ ರಾಗಿ ಖರೀದಿ ಮಾಡುತ್ತಿದ್ದರು. ಕುಡಿದವರು  ಕಾಲಿ ಬಾಟಲ್ ಗಳನ್ನು ಒಡೆದು ಚೂರು ಚೂರು ಮಾಡುತ್ತಿರುವುದು ಸಮಸ್ಯೆಯಾಗುತ್ತಿದೆ ಇಲ್ಲಿನ  ರೈತ ವರ್ಗಕ್ಕೆ . ಇಂತಹವರ ಮೇಲೆ ಸ್ಥಳೀಯ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳಬೇಕು.
 -ರಾಮೇಗೌಡ – ಕೃಷಿಕಕುಡುಕರನ್ನು ಪ್ರಶ್ನಿಸಲು ಸ್ಥಳೀಯರು ಹೆದರುತ್ತಾರೆ. ನಾವು ಹೋಗಿ ಕೇಳಿದರೆ ನಮಗೆ ಬೇರೆ ರೀತಿಯಲ್ಲಿ ತೊಂದರೆ ನೀಡಬಹುದು ಇರುವ ಭಯವಿದೆ. ಆಹಾರದ ಶುಚಿತ್ವ ಕಾಪಾಡಲು ಮತ್ತು ಕೃಷಿಕರು ನೆಮ್ಮದಿಯಾಗಿ ಧಾನ್ಯಗಳನ್ನು ಸಂಸ್ಕರಣೆ ಮಾಡಲು ಬಿಗಿಯಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು.
–  ಸಿದ್ದಪ್ಪ ರೈತ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker