ತಿಪಟೂರು

ಇಂದು ಹಾಲೇನಹಳ್ಳಿ ಗ್ರಾಮದಲ್ಲಿ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ : ಜಿಲ್ಲಾಧಿಕಾರಿ ನೆಡೆಯಿಂದ ಸಮಸ್ಯೆಗಳಿಗೆ ಮುಕ್ತಿ ದೊರಕುವುದೇ…?

ತಿಪಟೂರು : ಸ್ವಚ್ಛ ಭಾರತ್ ಮಿಷನ್ ಯೋಜನೆಯ ಮೂಲಕ ಇಡೀ ಭಾರತ ದೇಶವನ್ನು ಸ್ಚಚ್ಛವಾಗಿಡುವ ಮೂಲಕ ಸ್ವತಃ ದೇಶದ ಪ್ರದಾನಿಯಾದ ನರೇಂದ್ರ ಮೋದಿಯವರು ಪೊರಕೆ ಹಿಡಿದು ಅಭಿಯಾನಕ್ಕೆ ಚಾಲನೆ ನೀಡಿದರೂ ಸಹಸ್ವಚ್ಛ ಭಾರತ್ ಮಿಷನ್ ಯೋಜನೆಯ ಮೂಲಕ ಇಡೀ ಭಾರತ ದೇಶವನ್ನು ಸ್ಚಚ್ಛವಾಗಿಡುವ ಮೂಲಕ ಸ್ವತಃ ದೇಶದ ಪ್ರದಾನಿಗಳು ಪೊರಕೆ ಹಿಡಿದು ಅಭಿಯಾನಕ್ಕೆ ಚಾಲನೆ ನೀಡಿದರು, ಆದರ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಕೆಲಸ ನಿರ್ವಹಿಸಲು ಸೂಚನೆ ನೀಡಿದ್ದರೂ ಹೊನ್ನವಳ್ಳಿ ಹೋಬಳಿಯ ಮಣಕಿಕೆರೆ ಗ್ರಾಮ ಪಂಚಾಯಿತಿಯ ಹಾಲೇನಹಳ್ಳಿ ಗ್ರಾಮವು ಸ್ವಚ್ಚತೆಯಿಂದ ಹಾಗೂ ಚರಂಡಿ ವ್ಯವಸ್ಯೆಯಿಂದ ಬಹು ದೂರದಲ್ಲಿದೆ. ಆದರ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಕೆಲಸ ನಿರ್ವಹಿಸಲು ಸೂಚನೆ ನೀಡಿದ್ದರೂ ಹೊನ್ನವಳ್ಳಿ ಹೋಬಳಿಯ ಮಣಕಿಕೆರೆ ಗ್ರಾಮ ಪಂಚಾಯಿತಿಯ ಹಾಲೇನಹಳ್ಳಿ ಗ್ರಾಮವು ಸ್ವಚ್ಚತೆಯಿಂದ ಹಾಗೂ ಚರಂಡಿ ವ್ಯವಸ್ಯೆಯಿಂದ ಬಹು ದೂರದಲ್ಲಿದೆ. ರಾಜ್ಯಸರ್ಕಾರದ ಮಹಾತ್ವಾಕಾಂಕ್ಷೆ ಕಾರ್ಯಕ್ರಮದಲ್ಲಿ ಒಂದಾದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಎಂಬ ಕಾರ್ಯಕ್ರಮಕ್ಕೆ ಈ ಬಾರಿ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲೇನಹಳ್ಳಿ ಗ್ರಾಮಕ್ಕೆ ಇಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಭೇಟಿ ನೀಡಿ ವಾಸ್ತವ್ಯ ಹೂಡಲಿದ್ದಾರೆ.

ಹಾಲೇನಹಳ್ಳಿ ಗ್ರಾಮದಲ್ಲಿ ಸುಮಾರು 320 ಕ್ಕೂ ಹೆಚ್ಚು ಮನೆಗಳಿದ್ದು ಒಟ್ಟು ಜನಸಂಖ್ಯೆಯನ್ನು 1800 ಹೊಂದಿದೆ. ಇಷ್ಟು ಜನಸಂಖ್ಯೆ ಹೊಂದಿದ್ದರೂ ಮೂಲಭೂತ ಸೌಕರ್ಯಗಳಿಂದ ಗ್ರಾಮ ವಂಚಿತವಾಗಿದೆ. ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಅಂದರೆ 1 ರಿಂದ 7ನೇ ತರಗತಿವರಗಿನ ಶಾಲೆ ಇದ್ದು ಮೇಲ್ಚಾವಣಿ ಹಾಳಾಗಿ ಹೋಗಿದೆ. 1800 ಜನಸಂಖ್ಯೆ ಹೊಂದಿದ್ದರೂ ಆರೋಗ್ಯ ಸಮಸ್ಯೆಗಳು ಸಂಭವಿಸಿದರೆ ಹಾಲ್ಕುರಿಕೆ, ತಿಪಟೂರು ನಗರವನ್ನು ಆಶ್ರಯಿಸುವ ಅಗತ್ಯವಿದೆ. 320ಕ್ಕೂ ಹೆಚ್ಚು ಕುಟುಂಬಳಿದ್ದು ಪಡಿತರ ಆಹಾರಕ್ಕಾಗಿ 5 ಕಿ.ಮೀ ಹಾಲ್ಕುರಿಕೆಗೆ ತೆರಳಿ ಪಡೆದುಕೊಳ್ಳಬೇಕಿದೆ. ಈ ಬಾರಿ ಉತ್ತಮ ಮಳೆ ಆಗಿದ್ದು ಹಾಲ್ಕುರಿಕೆ ಕೆರೆಗೆ ಹೆಚ್ಚಿನ ನೀರು ಸಂಗ್ರಹವಾಗಿರುವುದರಿಂದ ಗ್ರಾಮದ ಒಳಭಾಗದಲ್ಲಿನ ರಸ್ತೆಗಳು ಕೊಳಚೆಯಿಂದ ಕೂಡಿದ್ದು ಸಿಸಿ ರಸ್ತೆಯ ಅಗತ್ಯವಿದೆ. ಇನ್ನೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ತ್ವರಿತವಾಗಿ ಸಿಸಿ ರಸ್ತೆ, ಬಾಕ್ಸ್ ಚರಂಡಿಯ ಅಗತ್ಯವಿದೆ ಎನ್ನುತ್ತಾರೆ ಗ್ರಾಮಸ್ಥರು.

ಕಾರಲ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿ :
ಮಣಕೀಕೆರೆ, ಈರಲಗೆರೆ, ಕಲ್ಕೆರೆ ಗ್ರಾಮಗಳಿಗೆ ಮಳೆ ಬಂದಾಗ ಬರುವಂತಹ ನೀರು ಹರಿಯುತ್ತಿದ್ದು ಹಾಲೇನಹಳ್ಳಿ ಗ್ರಾಮದಲ್ಲಿ ಕಾರಲ ಹಳ್ಳದ ಮೂಲಕ ಹಾಲ್ಕುರಿಕೆ ಕೆರೆಗೆ ತಲುಪಲು ಹಳ್ಳ ಹಿಂದಿನಿಂದಲೂ ಇದ್ದು ಹಾಲೇನಹಳ್ಳಿ ಗೇಟ್ ನಿಂದ ಹಾಲೇನಹಳ್ಳಿ ಗ್ರಾಮಕ್ಕೆ ತೆರಳುವ ಮಧ್ಯೆ ಹಳ್ಳದ ಹಂತಕ್ಕೆ ಸೇತುವೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಹೆಚ್ಚಿನ ಮಳೆ ಬಂದಾಗ ಗ್ರಾಮದ ಸಂಪರ್ಕ ಕಡಿತಗೊಳ್ಳುತ್ತದೆ. ಕಳೆದ ವಾರದಲ್ಲಿ ಬಿದ್ದ ಭಾರಿ ಮಳೆಯಿಂದ ಗ್ರಾಮಸ್ಥರು ಸಮಸ್ಯೆ ಎದುರಿಸಿದ ನಿದರ್ಶನವಿದೆ. ಅದಕ್ಕಾಗಿ ಹಳ್ಳ ಹರಿಯುವ ಬಳಿಯಲ್ಲಿ ಸ್ವಲ್ಪ ಎತ್ತರದ ಸೇತುವೆ ನಿರ್ಮಾಣದ ಇಂಗಿತವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಈ ಹಳ್ಳದಿಂದಾಗಿ ಇತ್ತೀಚಿಗೆ ಡೈರಿಗೆ ಹಾಲನ್ನು ಸರಬರಾಜು ಮಾಡಲು ಬಂದ ಉತ್ಪಾದಕ ನೀರನಲ್ಲಿ ಬೈಸಿಕಲ್ ಸಮೇತ ಕೊಚ್ಚಿಹೊಗಿದ್ದ ಘಟನೆಯೂ ಸಹ ಸಂಭಂವಿಸಿದೆ.
ಈ ಗ್ರಾಮಕ್ಕೆ ಸರಿಯಾದ ನಾಮಫಲಕವಿಲ್ಲದೆ ರಾಜ್ಯ ರಸ್ತೆ ಸಾರಿಗೆಯಲ್ಲಿ ಸಂಚರಿಸುವ ವಾಹನಗಳ ನಿಲುಗಡೆಯೂ ಒಂದೆಡೆ ನಿಲ್ಲದೆ ಪ್ರಯಾಣಿಕರು ಪರದಾಟ ಒಂದೆಡೆ ಆದರೆ ಪ್ರಯಾಣಿಕರ ತಂಗುದಾಣುವೂ ಇಲ್ಲದೆಯಿರುವುದು ದುರದೃಷ್ಟಕರವಾಗಿದೆ.
ಒಟ್ಟಿನಲ್ಲಿ ಬಹು ನಿರೀಕ್ಷೆಯನ್ನು ಇಟ್ಟುಕೊಂಡಿರುವ ಗ್ರಾಮಸ್ಥರ ಅಗತ್ಯತೆಗಳನ್ನು ಅಧಿಕಾರಿಗಳು ಹೇಗೆ ಬಗೆಹರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದು ಕಾದು ನೋಡಬೇಕಿದೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker