ಕೊರಟಗೆರೆ

ಕೊರಟಗೆರೆ ಆರಕ್ಷಕ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲು : ಮೂವರ ಬಂಧನ, 30 ಲಕ್ಷ 20 ಸಾವಿರ ರೂ ಹಣ ವಶ

ಪ್ರಕರಣ ಭೇದಿಸಿದ ತಂಡಕ್ಕೆ ಎಸ್.ಪಿ. ರಾಹುಲ್ ಕುಮಾರ್ ಶಹಾಪುರ್ ವಾಡ್ ಅಭಿನಂಧನೆ

ಕೊರಟಗೆರೆ : ಪಟ್ಟಣದಲ್ಲಿ ಎತ್ತಿನ ಹೊಳೆಯ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮ್ಯಾನೇಜರ್ ಅವಿನಾಶ್ ರವರ ಬಾಡಿಗೆ ಮನೆಯಲ್ಲಿ ಕಳೆದ ಶನಿವಾರ 35 ಲಕ್ಷ 20 ಸಾವಿರ ಹಣವು ದರೋಡೆ ಮಾಡಿದ್ದ ಮೂರು ಜನ ಆರೋಪಿಗಳನ್ನು ಕೊರಟಗೆರೆ ಪೋಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಣ ಕಳವು ಮಾಡಿದ್ದ ಬಂಧಿತ ಆರೋಪಿಗಳಾದ ಕೊರಟಗೆರೆ ನಿವಾಸಿ ಮಂಜುನಾಥ್(38) ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿ ಸಿದ್ದರಾಜು(32).ಮತ್ತು ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ವಡ್ಡರಹಟ್ಟಿ ಲಕ್ಷ್ಮೀ ನಾರಾಯಣ್ ಅಲಿಯಾಸ್ ನಾರಾಯಣ್(34) ಮೂವರು ಬಂಧಿತ ಆರೋಪಿಗಳಾಗಿದ್ದಾರೆ.
ಮೊದಲನೇ ಆರೋಪಿ‌ ಮಂಜುನಾಥ್ ಪಿರ್ಯಾದಿಯ ಅವಿನಾಶ್‌ ರವರ ತವೆರಾ ಕಾರು ಚಾಲಕನಾಗಿ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದನು.
ಆರೋಪಿ ಮಂಜುನಾಥ್  ಎರಡನೇ ಆರೋಪಿ ಸಿದ್ದರಾಜುವಿನ ಜೊತೆಗೆ ಸೇರಿಕೊಂಡು ಅವಿನಾಶ್ ಮನೆಯ ಕೀಗಳನ್ನು ಕಳುಹಿಸಿ ಅದೇ ತರಹದ ನಕಲೀ ಕೀಗಳನ್ನು ಕೊರಟಗೆರೆಯಲ್ಲಿ ತಯಾರು ಮಾಡಿಸಿ ಆ ಕೀಗಳನ್ನು ಎರಡನೇ ಆರೋಪಿ ಸಿದ್ದರಾಜುಗೆ ನೀಡಿದ್ದನು.
ಎರಡನೇ ಆರೋಪಿ ಸಿದ್ದರಾಜು ಕಡೆಯಿಂದ 35,20,000 ಹಣವನ್ನು ಕಳವು ಮಾಡಿ ಕೊರಟಗೆರೆ ಪಟ್ಟಣದ ಹೊರವಲಯದಲ್ಲಿ ನಾಲ್ಕನೇ ಆರೋಪಿ ಕೃತ್ಯಕ್ಕೆ ತಂದಿದ್ದ ವಾಹನದಲ್ಲಿ ಕುಳಿತುಕೊಂಡು ಎಲ್ಲರೂ ಹಂಚಿ ಕೊಂಡಿದ್ದಾರೆ ಎನ್ನಲಾಗಿದೆ.
ತುಮಕೂರು ಜಿಲ್ಲಾ ಪೋಲೀಸ್ ಅಧೀಕ್ಷಕರಾದ ರಾಹುಲ್ ಕುಮಾರ್ ಶಹಾಪುರ್ ವಾಡ್ ನಿರ್ದೇಶನದಂತೆ ಮಧುಗಿರಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಹಾಗೂ ಕೊರಟಗೆರೆ ಸಿಪಿಐ ಸುರೇಶ್ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗುತ್ತು.ಈ ತಂಡವು ಬಹಳಷ್ಟು ಶ್ರಮವಹಿಸಿ ಆರೋಪಿಗಳನ್ನು ಕೇವಲ 5 ದಿನದಲ್ಲಿ ಪತ್ತೆಮಾಡಿ ಬಂಧಿತ ಆರೋಪಿಗಳಿಂದ. 30ಲಕ್ಷ 20 ಸಾವಿರ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ‌ಒಪ್ಪಿಸಲಾಗಿದೆ.

ತುಮಕೂರು ಅಡಿಷನಲ್ ಎಸ್ಪಿ ಉದ್ದೇಶ್ ಮಾರ್ಗದರ್ಶನದಂತೆ ಮಧುಗಿರಿ ಡಿವೈಎಸ್ಪಿ ವೇಂಕಟೇಶ್ ನಾಯ್ಡು ರವರ ತಂಡದ ನೇತೃತ್ವದಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿಯಾಗಿದ್ದಾರೆ ಈ ತಂಡಡದಲ್ಲಿ ಮೋಹನ್, ನರಸಿಂಹರಾಜು, ಸೈಯದ್ ರಿಪತ್ ಅಲಿ ಟೆಕ್ನಿಕಲ್ ಸೆಲ್ ನಟರಾಜು, ಜಗನ್ನಾಥ್ ಗಂಗಾಧರ್, ರಂಗನಾಥ್, ಶಶಿಕುಮಾರ್ ರಾಜ್ ಕುಮಾರ್ ರವರ ತಂಡಕ್ಕೆ ಜಿಲ್ಲಾ ಪೋಲೀಸ್ ಅಧೀಕ್ಷಕಾರಾದ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಭಿನಂಧಿಸಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker