ಕುಣಿಗಲ್
ಬಸ್ ಚಾಲಕ ನಾಸೀರ್ ಪಾಷಾ ಕುಟುಂಬಕ್ಕೆ ಉಚಿತ ಹತ್ತು ಲಕ್ಷ ರೂ ಗಳ ಪರಿಹಾರ ನೀಡಿದ ಶಾಸಕ ಜಮೀರ್ ಅಹ್ಮದ್ ಕುಟುಂಬ
ಕುಣಿಗಲ್ : ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ರವರ ತಾಯಿ ಸೌಹಾರ ಬಿ ರವರು ನ್ಯಾಷನಲ್ ಟ್ರಾವಲ್ಸ್ ನಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸಿ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದ ಚಾಲಕ ನಾಸೀರ್ ಪಾಷಾ ಕುಟುಂಬಸ್ಥರಿಗೆ ಹತ್ತು ಲಕ್ಷ ರೂ ಗಳ ನಗದು ಪರಿಹಾರವನ್ನು ಉಚಿತವಾಗಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಮಾಜಕ್ಕೆ ಮಾದರಿಯಾದರು.
ಪಟ್ಟಣದ ಗುಜ್ಜರಿ ಮೊಹಲ್ಲಾದ ವಾಸಿಯಾಗಿದ್ದ ನಾಸೀರ್ ಪಾಷಾ( 50)
ಶಾಸಕ ಜಮೀರ್ ಅಹ್ಮದ್ ಖಾನ್ ರವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ನಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲಚಾಲಕನಾಗಿ ನಿರಂತರ ಸೇವೆ ಸಲ್ಲಿಸಿದ್ದರು. ಇವರು ಇತ್ತೀಚಿನ ತಿಂಗಳಲ್ಲಿ ಬಾಂಬೆಯಿಂದ ಬೆಂಗಳೂರಿಗೆ ನ್ಯಾಷನಲ್ ಟ್ರಾವೆಲ್ಸ್ ಬಸ್ಸನ್ನು ಚಾಲನೆ ಮಾಡಿಕೊಂಡು ಬರುವ ಸಂದರ್ಭದಲ್ಲಿ ಬೆಳಗಾಂ ಸಮೀಪ ಇವರು ಚಲಾಯಿಸುತ್ತಿದ್ದ ಬಸ್ ಕಾರಣಾಂತರದಿಂದ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಅಂದಿನ ದಿನದಿಂದ ಇವರನ್ನೇ ನಂಬಿದ್ದ ಕುಟುಂಬ ಶೋಕದ ಮಡುವಿನಲ್ಲಿ ಸಿಲುಕಿಕೊಂಡಿತ್ತು. ಇದನ್ನು ತೀಕ್ಷಣವಾಗಿ ಅರಿತ ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ನ್ಯಾಷನಲ್ ಟ್ರಾವೆಲ್ಸ್ ಬಸ್ ಮಾಲೀಕ ಅವರ ತಾಯಿಯವರಾದ ಸೌಹಾರ ಬಿ ಹಾಗೂ ತಮ್ಮ ಶಕೀಲ್ ಅಹ್ಮದ್ ಖಾನ್ ಅವರನ್ನು ಬಸ್ ಅಪಘಾತದಲ್ಲಿ ಮೃತಪಟ್ಟಿದ್ದ ಕುಣಿಗಲ್ ಪಟ್ಟಣದ ಗುಜ್ಜರಿ ಮೊಹಲ್ಲಾದ ನಿವಾಸಿ ನಾಸೀರ್ ಪಾಷಾ ಅವರ ಮನೆಗೆ ಮಂಗಳವಾರ ಖುದ್ದು ಕಳುಹಿಸಿಕೊಟ್ಟು ,ಮೃತ ನಾಸೀರ್ ಪಾಷಾ ತಂದೆ ಸೈಯದ್ ಮತ್ತು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಹತ್ತು ಲಕ್ಷ ರೂ ಗಳ ನಗದು ಹಣವನ್ನು ಉಚಿತವಾಗಿ ಪರಿಹಾರವಾಗಿ ನೀಡಿ ಸಮಾಜಕ್ಕೆ ಮಾದರಿಯಾದರು.
ಪರಿಹಾರದ ಉಚಿತ ಹಣವನ್ನು ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅಬ್ದುಲ್ ಹಮೀದ್, ಸದಾಕತ್, ಪುರಸಭೆ ಸದಸ್ಯ ಸಮಿ,ಒಳಗೊಂಡಂತೆ ನೂರಾರು ಮುಸಲ್ಮಾನ್ ಬಂಧುಗಳು ಉಪಸ್ಥಿತರಿದ್ದರು.