ಜೂ. 25 ರಂದು ರಾಜ್ಯ ಮಟ್ಟದ ಕುಂಚಿಟಿಗ ಸಮುದಾಯದ ಜಾಗೃತಿ ಸಮಾವೇಶ : ಜಿಲ್ಲಾಧ್ಯಕ್ಷ ಆರ್. ಕಾಮರಾಜು
ಕೊರಟಗೆರೆ : ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಸುವರ್ಣ ಮಹೋತ್ಸವ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಬಿ. ರಂಗಣ್ಣನವರ ಪುತ್ಥಳಿ ಅನಾವರಣ ಸೇರಿದಂತೆ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಜೂ. 25 ರಂದು ತುಮಕೂರಿನಲ್ಲಿ ಹಮ್ಮಿಕೊಂಡಿದ್ದು ಎಲ್ಲಾ ಸಮುದಾಯ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಂಘದ ಜಿಲ್ಲಾಧ್ಯಕ್ಷ ಆರ್. ಕಾಮರಾಜು ತಿಳಿಸಿದರು.
ಪಟ್ಟಣದ ಕುಂಚಶ್ರೀ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸೋಮವಾರ ಸಮಾವೇಶದ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಸಮಾವೇಶವು ಪಕ್ಷಾತೀತವಾಗಿ ಆಯೋಜನೆಗೊಳ್ಳುತ್ತಿದ್ದು ಯಾವುದೇ ರಾಜಕೀಯದಿಂದ ಹೊರತಾಗಿ ಸಮುದಾಯದ ಕರ‍್ಯಕ್ರಮವಾಗಿ ಆಯೋಜನೆಗೊಂಡಿದ್ದ ಕರ‍್ಯಕ್ರಮದಲ್ಲಿ ಬಹುತೇಕ ಸಮುದಾಯದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸರು ಹಾಗೂ ಜಿಲ್ಲೆಯ ಹಾಲಿ, ಮಾಜಿ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಕರ‍್ಯಕ್ರಮಲ್ಲಿ ಸಮುದಾಯದ 3 ಜನ ಪ್ರತಿಭಾವಂತರಾದ ಕಲ್ಪಶ್ರೀ, ಅರುಣಾ, ಬೆನಕ ಪ್ರದಾದ್ ಈ ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ಅವರಿಗೆ ವಿಶೇಷ ಅಭಿನಂಧನೆ ಮತ್ತು ಸಮುದಾಯ ಮಕ್ಕಳಿಗೆ ಅವರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ,ಕಾರ‍್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಾಲಾನಂದ ಶ್ರೀ, ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಹನುಮಂತನಾಥಶ್ರೀ, ಪಟ್ಟನಾಯಕನಹಳ್ಳಿ ನಂಜಾವದೂತ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕಾರ‍್ಯಕ್ರಮ ನಡೆಯಲಿದೆ.
ಅದೇ ರೀತಿ ಹೊಸದಾಗಿ ಹಲವು ಕಾಮಗಾರಿಗಳ ಶಿಲಾನ್ಯಾಸ, ಕುಂಚಶ್ರೀ ಪ್ಯಾಲೇಸ್ ಸೇರಿದಂತೆ ಹಲವು ಕಟ್ಟಡಗಳ ಉದ್ಘಾಟನೆ ಸೇರಿದಂತೆ ಹಲವು ಕಾರ‍್ಯಕ್ರಮಳು ನಡೆಯಲಿದ್ದು ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ತಾಲೂಕು ಕುಂಚಿಟಿಗ ಸಂಘದ ಅಧ್ಯಕ್ಷ ಶಿವರಾಮಯ್ಯ ಮಾತನಾಡಿ ಜಿಲ್ಲಾ ಸಂಘವು ಇಡೀ ರಾಜ್ಯಕ್ಕೆ ಮಾದರಿ ಸಂಘವಾಗಿದ್ದು ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದು ಇನ್ನೂ ಸಮುದಾಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿದ್ಯಾರ್ಥಿ /ವಿದ್ಯಾರ್ಥಿನಿರ ನಿಯಲವನ್ನು ಹೆಚ್ಚಿನ ಜನರಿಗೆ ಅನುಕೂಲವಾಗುವಂತಹ ಕಟ್ಟಡ ನಿರ್ಮಿಸಬೇಕು ಇದಕ್ಕೆ ತಾಲೂಕು ಸಂಘದ ಬೆಂಬಲವೂ ಇರಲಿದೆ ಎಂದರು.
ಸುದ್ದಿಘೋಷ್ಠಿಯಲ್ಲಿ ಕೊರಟಗೆರೆ ತಾಲೂಕು ಕುಂಚಿಟಿಗ ಸಂಘದ ಅಧ್ಯಕ್ಷ ಜಿ.ಆರ್ ಶಿವರಾಮಯ್ಯ, ಕುಂಚಿಟಿಗ ವಿದ್ಯಾಭಿವೃದ್ಧಿ ಸಂಘ ಕಾರ್ಯಕಾರಿ ರಾಜಕುಮಾರ್, ನಿರ್ದೇಶಕರಾದ ಸುನಂದ ಪಿ.ಕುಮಾರ್, ಗುಂಡಿನಪಾಳ್ಯ ಶ್ರೀನಿವಾಸ್, ಮುರುಳಯ್ಯ, ವೆಂಕಟಶಾಮಪ್ಪ, ಉದಯ್, ದೊಡ್ಡವೀಯ್ಯ, ರಾಜಣ್ಣ, ಚೌಡಪ್ಪ, ಮಂಜಣ್ಣ, ಜಗಧೀಶ್ ಗೌಡ, ಮಾಜಿ ಜಿ.ಪಂ ಸದಸ್ಯ ಟಿ.ಡಿ ಪ್ರಸನ್ನಕುಮಾರ್, ಗ್ರಾ.ಪಂ ಅಧ್ಯಕ್ಷ ಭಕ್ತರಹಳ್ಳಿ ಸಿದ್ದಲಿಂಗಪ್ಪ,ಕುಂಚಶ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜು, ಮಾಜಿ ಕಸಾಪ ಅಧ್ಯಕ್ಷ ಎಸ್.ಕೆ ನಾಗರಾಜು, ಮುಖಂಡರಾದ ಕಾಕಿ ಮಲ್ಲಯ್ಯ, ಅರವಿಂದ್ ಸೇರಿದಂತೆ ಇತರರು ಇದ್ದರು.