ತಿಪಟೂರು

ಬಾಲ್ಯ ವಿವಾಹ ತಡೆಯುವವರು ಯಾರು…? ತಿಪಟೂರಿನಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ : ಒಂದು ತಿಂಗಳಲ್ಲಿ 4 ಪ್ರಕರಣಗಳು

ತಿಪಟೂರು : ಆಧುನಿಕ ಪ್ರಪಂಚದ ಮನುಷ್ಯನ ಜೀವನ ಶೈಲಿ ಅತಿ ವೇಗದ ಓಟವನ್ನು ಪ್ರಾರಂಭಿಸುತ್ತಾ ಜೀವನ ಹಲವು ತೊಂದರೆಗಳಿಗೆ ಸಿಲುಕಿಸಿಕೊಳ್ಳವ ನಿಟ್ಟಿನಲ್ಲಿ ಸಾಗುತ್ತಾ ತನ್ನ ಅಂತ್ಯವನ್ನು ತಾನೇ ತೆಗೆದುಕೊಳ್ಳುತ್ತಾ ಮತ್ತೋಬ್ಬರ ಜೀವನಕ್ಕೂ ಮಾರಕವಾಗುತ್ತಾ ನೆಡೆಯುತ್ತಿದ್ದಾನೆ.
ಸರ್ಕಾರಗಳು ಮಕ್ಕಳ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆಗಳು, ಸಮಿತಿಗಳು, ಆಯೋಗಗಳನನ್ನು ರಚನೆ ಮಾಡಿದರೂ ಸಹ ಮಕ್ಕಳ ಹಾಗೂ ಮಹಿಳೆಯರ ಮೇಲೆ ನೆಡೆಯುತ್ತಿರುವ ದೌರ್ಜನ್ಯಗಳು, ಕಳ್ಳ ಸಾಗಾಣಿಕೆ, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಇವುಗಳ ಬಗ್ಗೆ ಅರಿವು-ಜಾಗೃತಿ ಮೂಡಿಸುವವರು ಯಾರು ಎಂಬ ಯಕ್ಷಪ್ರಶ್ನೆ ಸರ್ಕಾರಕ್ಕೂ ಹಾಗೂ ಸಾರ್ವಜನಿಕರಿಗೂ ಕಾಡುತ್ತಿದೆ.
ಇತ್ತೀಚೀನ ದಿನಗಳಲ್ಲಿ ತಾಲ್ಲೂಕಿನಲ್ಲಿ ಬಾಲ್ಯ ವಿವಾಹದ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದ್ದು ರಂಗಾಪುರ ಗ್ರಾಮ ಪಂಚಾಯಿತಿಯ ಹೊಸಹಳ್ಳಿ, ಹುಣಸೇಘಟ್ಟ ಗ್ರಾಮ ಪಂಚಾಯಿತಿ ಕುರುಬರಹಳ್ಳಿ, ಹೊನ್ನವಳ್ಳಿ ಗ್ರಾಮ ಪಂಚಾಯಿತಿ, ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಕರೀಕೆರೆ ಗ್ರಾಮದಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಬೆಳಕಿಗೆ ಬಂದಿದ್ದು ಅವುಗಳನ್ನು ತಡೆಯುವಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಆರಕ್ಷಕ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹರ ಸಾಹಸ ಪಡಬೇಕಾಯಿತು.
ಕಳೆದ ಸುಮಾರು 2013-14 ಸಾಲಿನಿಂದ 2021-22 ಅಂತ್ಯಕ್ಕೆ ತಾಲ್ಲೂಕಿನಲ್ಲಿ ಸುಮಾರು 123 ಬಾಲ್ಯ ವಿವಾಹದ ಪ್ರಕರಣಗಳು ಬೆಳಕಿಗೆ ಬಂದಿದ್ದು ಅಚ್ಚರಿ ಮೂಡಿಸಿದೆ. ಇಂತಹ ಪ್ರಕರಣಗಳನ್ನು ಎಲ್ಲೂ ಕಾಣದಂತೆ ನಿಗವಹಿಸುವ ಕ್ರಮ ಹಾಗೂ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬರಬೇಕಾಗಿದೆ.
2013-14 ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಸಮಿತಿಯ ಶಿಫಾರಸ್ಸು ಅನ್ಚಯ ಮಕ್ಕಳ ಕಳ್ಳ ಸಾಗಾಣಿಕೆ, ದೌರ್ಜನ್ಯ, ಲೈಂಗಿಕ ಕಿರುಕುಳದ ಆಧಾರದ ಮೇಲೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ, ಗೋಡೆಬರಹಗಳು, ಮಕ್ಕಳ-ಮಹಿಳೆ-ಪೋಲೀಸ್ ಸಹಾಯವಾಣಿ ವ್ಯಾಪಕ ಪ್ರಚಾರ, ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗಳಲ್ಲಿ ತಿಳುವಳಿಕೆ ಮೂಡಿಸುವುದು ಹಾಗೂ 2006 ಬಾಲ್ಯ ವಿವಾಹ ನಿಷೇಧ ಕಾಯಿದೆ ಅಂಶಗಳನ್ನು ಜಾರಿಗೊಳಿಸುವಂತೆ ಶಿಪಾರಸ್ಸು ಮಾಡಲಾಗಿದೆ ಅದರೂ ಸಹ ತಿಂಗಳಿಗೊಮ್ಮೆ ಇಂತಹ ಪ್ರಕರಣಗಳು ಕಾಣದಂತೆ ನೆಡೆಯುತ್ತಿದೆ.
ಬಾಲ್ಯ ವಿವಾಹದ ದುಷ್ಪಾರಿಣಾಮಗಳು
ವಯಸ್ಸಿಗೆ ಮೀರಿದ ಜವಾಬ್ದಾರಿ, ದೈಹಿಕ ಬೆಳವಣಿಗೆ ಕುಂಠಿತ, ಗರ್ಭಾಪಾತಗಳು ಹೆಚ್ಚುಗಾವುದು, ವಿಕಲಾಂಗ ಮಕ್ಕಳ ಜನನ, ಅಕಾಲಿಕ ಮರಣ ಪ್ರಕರಣಗಳು, ಲೈಂಗಿಕ ದೌರ್ಜನ್ಯ ಬಲತ್ಕಾರ ಪ್ರಕರಣಗಳಿಗೆ ಒಳಾಗುವುದು, ಮಾನಸಿಕ ಸ್ಥೆöÊರ್ಯ ಕಳೆದುಕೊಳ್ಳಬಹುದು, ಖಿನ್ನತೆಗೆ ಒಳಾಗುವುದು, ಶಿಕ್ಷಣದಿಂದ ಹೊರಗುಳಿಯುವುದು, ದಂಪತಿಗಳಲ್ಲಿ ಸಾಮರಸ್ಯ ಕಡಿಮೆ ಆಗಬಹುದು, ಎಳೆ ವಯಸ್ಸಿಗೆ ವಿಧವೆಯಾಗುವುದು.
ಬಾಲ್ಯ ವಿವಾಹಕ್ಕೆ ಕಾರಣಗಳು
ಬಡತನ, ಶಿಕ್ಷಣದ ಕೊರತೆ, ರಕ್ತ ಸಂಬಂಧಗಳನ್ನು ಉಳಿಸಿಕೊಳ್ಳುವ ಒತ್ತಡ, ಹೆತ್ತವರು ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುವುದು, ಹಿರಿಯರ ಆಸೆ ನೇರವೇರಿಸುವುದು, ಸಮಗ್ರ ಅರಿವು ಇಲ್ಲದೆಯಿರುವುದು, ಮೂಡನಂಭಿಕೆ, ಸಂಪ್ರದಾಯಗಳ ಆಚರಣೆ , ಆರ್ಧಿಕ ಮುಗ್ಗಟ್ಟು, ಅನಕ್ಷರತೆ,

ಪ್ರಾಥಮಿಕ-ಪ್ರೌಢ ವ್ಯವಸ್ಥೆಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಮಾಹಿತಿಗಳನ್ನು ದೃಶ್ಯಗಳ ಮೂಲಕ ಮಕ್ಕಳಿಗೆ ತಿಳಿಸಿ, ಗ್ರಾಮ ಮಟ್ಟದಿಂದ ತಾಲ್ಲೂಕು ಮಟ್ಟದವರೆಗೆ ಅರಿವು ಮೂಡಿಸಬೇಕು. ಮಕ್ಕಳ ಸಹಾಯವಾಣಿ 1098, ಮಹಿಳೆಯರ ಸಹಾಯವಾಣಿ 181, ಪೊಲೀಸ್ ಸಹಾಯವಾಣಿ 112, ಇವುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯಬೇಕು.
-ಓಂಕಾರಪ್ಪ ಸಿಡಿಪಿಒ ಅದಿಕಾರಿ.

ಕೋಟ್ : ಕುರುಕಲು ತಿಂಡಿಗಳ ಅತಿಯಾದ ಸೇವನೆಯಿಂದ, ಮೊಬೈಲ್ ಬಳಕೆಯಿಂದ, ಆಡಂಬರದ ಜೀವನ ಶೈಲಿಯಿಂದ ಹೆಣ್ಣು ಮಕ್ಕಳು ಬೇಗ ಋತುಮತಿಯಾಗುತ್ತಿದ್ದು ಪೋಷಕರು ತಮ್ಮ ಜವಾಬ್ದಾರಿ ತಪ್ಪಿಸಿಕೊಳ್ಳಲು ಬಾಲ್ಯ ವಿವಾಹಕ್ಕೆ ಕಾರಣ. ಯೋಗ, ಧ್ಯಾನ, ಪ್ರಣಾಯಾಮ, ದೇಶಿಯ ಆರೋಗ್ಯ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು.
-ಡಾ.ಸುಮುನಾ ಆಯುಷ್ಯ ವೈದ್ಯಾಧಿಕಾರಿ ಕೊನೇಹಳ್ಳಿ.

ವರದಿ : ಪ್ರಶಾಂತ್ ಕರೀಕೆರೆ

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker