ಜೂ 10 ರಂದು ಡಾ.ಹನುಮಂತನಾಥಸ್ವಾಮಿರವರ ಜನ್ಮದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ಶಿಬಿರ
ಕೊರಟಗೆರೆ : ಜಿಲ್ಲೆಯ ಎಲ್ಲಾ ತಾಲೂಕುಗಳ ಕುಂಚಿಟಿಗರ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂ 10 ರಂದು ಕೊರಟಗೆರೆ ತಾಲೂಕಿನ ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥಸ್ವಾಮೀಜಿ ರವರ 40ನೇ ಜನ್ಮ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಜಿ.ಪಂ.ಸದಸ್ಯ ಹಾಗೂ ಸಮುದಾಯದ ಮುಖಂಡ ಶಿವರಾಮಯ್ಯ ತಿಳಿಸಿದ್ದಾರೆ.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ 9 ವರ್ಷಗಳಿಂದ ಕೊರಟಗರೆ ತಾಲೂಕಿನಲ್ಲಿ ಮಠ ಸ್ಥಾಪಿಸಿ ಸಮುದಾಯದ ಸಂಘಟನೆಯೊಂದಿಗೆ ಸಮುದಾಯದ ಉಪಜಾತಿಗಳನ್ನು ಒಂದುಗೂಡಿಸಿ ಎಲ್ಲಾ ಸಮುದಾಯಗಳಿಗೂ ಶ್ರೀಕ್ಷೇತ್ರದಲ್ಲಿ ಲಕ್ಷ್ಮಿನರಸಿಂಹ ದೇವಾಲಯ ದೊಂದಿಗೆ ತಾಲೂಕಿನಲ್ಲಿ ಶಿಥಿಲಾವಸ್ಥೆ ಯಲ್ಲಿದ್ದ ನೂರಾರು ದೇವಾಲಯಗಳನ್ನು ಜಿರ್ಣೋದ್ದಾರ ಮಾಡಿ ಧಾರ್ಮಿಕ ಪ್ರಚಾರದಿಂದ ಜನತೆಯಲ್ಲಿ ಸೌರ್ಹಾಥತೆ ಬೆಳೆಸಿ ಶ್ರೀ ಮಠದಲ್ಲಿ ಬಡ ವಿಧ್ಯಾರ್ಥಿಗಳಿಗೆ ವಿದ್ಯಾಧಾನ, ಅನ್ನ ದಾಸೋಹ ನಡೆಸುತ್ತಾ ಜಾತ್ಯಾತೀತವಾಗಿ ಸ್ಥಭಕ್ತರನ್ನು ಹೊಂದಿರುವ ಡಾ. ಶ್ರೀ ಹುನಂತನಾಥಸ್ವಾಮಿ ರವರ 40ನೇ ಜನ್ಮ ದಿನಾಚರಣೆ ಅಂಗವಾಗಿ ಜೂ.10 ರಂದು ಶ್ರೀ ಮಠದಲ್ಲಿ ಉಚಿತ ಆರೋಗ್ಯ ಶಿಬಿರ, ರಕ್ತಧಾನ ಶಿಬಿರ, ಕಣ್ಣು ಪರೀಕ್ಷೆ ಮತ್ತು ಚಿಕಿತ್ಸಾ ಶಿಬಿರದೊಂದಿಗೆ ಬಡ ಕುಟುಂಬಗಳಿಗೆ ಹಾಗೂ ಪೌರಕಾರ್ಮಿಕರಿಗೆ ಆಹಾರ ಕಿಟ್ಟ ವಿತರಣೆ ಮತ್ತು ಸಸಿನೆಡುವ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಜಿಲ್ಲೆಯ ಸ್ಥಭಕ್ತರು ಜೂ.10 ರಂದು ಶ್ರೀ ಮಠಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೆಕೆಂದು ಹಾಗೂ ಆರೋಗ್ಯ ಶಿಭಿರದ ಪ್ರಯೋಜನ ಪಡೆಯುವಂತೆ ಮನವಿ ಮಾಡಿದ್ದಾರೆ.
ಜೂ.10 ರಂದು ನಡೆಯುವ ಡಾ.ಶ್ರೀ ಹನುಮಂತನಾಥಸ್ವಾಮೀಜಿ ರವರ 40ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಪ್ರಸ್ತವರ್ಷ ಐ.ಎ.ಎಸ್ ಪಾಸಾದ ಸಮುದಾಯದ 4 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ವಿಶೇಷ ಕಾರ್ಯಕ್ರಮ ಏರ್ಪಡಿಸಾಲಗಿದೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಮುದಾಯದ ಮುಖಂಡರು ಗಳಾದ ರಂಗನರಸಪ್ಪ, ಕಾಮರಾಜು, ಲಕ್ಷ್ಮಿಕಾಂತಯ್ಯ, ರಮೇಶ್, ಜಗನ್ನಾಥ್, ಸಾಕರಾಜು, ಶಿವಣ್ಣ, ಕಾಂತರಾಜು, ಮುರುಡಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.