ನಾಗಲಮಡಿಕೆ ಗ್ರಾ.ಪಂ. ಅದ್ಯಕ್ಷರಾಗಿ ಅರುಣಮ್ಮ ಅವಿರೋಧ ಆಯ್ಕೆ
ಪಾವಗಡ : ತಾಲೂಕಿನ ನಾಗಲಮಡಿಕೆ ಗ್ರಾಮ ಪಂಚಾಯಿತಿಗೆ ನೂತನ ಅದ್ಯಕ್ಷರಾಗಿ ಶ್ರೀರಂಗಪುರ ಗ್ರಾಮದ ಅರುಣಮ್ಮ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ ಶ್ರೀರಂಗಪುರ ಗ್ರಾಮದ ಅರುಣಮ್ಮರವರನ್ನು ನೂತನ ಅದ್ಯಕ್ಷರಾಗಿ ಸರ್ವ ಸದಸ್ಯರು ಆಯ್ಕೆ ಮಾಡಿದ್ದರಿಂದ ಅವಿರೋಧ ಆಯ್ಕೆ ಎಂದು ತೀರ್ಮಾನಿಸಲಾಗಿತು.
ಗ್ರಾ.ಪಂ ನಲ್ಲಿ ಒಟ್ಟು 21 ಸದಸ್ಯರಿದ್ದು ಶನಿವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಗದಿತ ಸಮಯದಲ್ಲಿ ಶ್ರೀರಂಗಪುರದ ಅರುಣಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಎಂದು ಘೋಷಿಸಿದರು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ವರದರಾಜು ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ, ರಾಜ್ಯ ಉಪಾದ್ಯಕ್ಷ ತಿಮ್ಮಾರೆಡ್ಡಿ, ತಾಲೂಕು ಗೌರವಾದ್ಯಕ್ಷ ರಾಜಶೇಖರಪ್ಪ, ತಿಮ್ಮರಾಜು, ರ‍್ರಿಸ್ವಾಮಿ ಸೇರಿದಂತೆ ಗ್ರಾ.ಪಂ ಸದಸ್ಯರು, ಪಿಡಿಒ ಶಿವಕುಮಾರ್ ಸಿಬ್ಬಂದಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದು ನೂತನ ಅದ್ಯಕ್ಷೆ ಅರುಣಮ್ಮ ರವರನ್ನು ಅಭಿನಂದಿಸಿದರು.