ಕುಣಿಗಲ್ಬ್ರೇಕಿಂಗ್ ಸುದ್ದಿ
ಸಿಡಿಲಿನ ಬಡಿತಕ್ಕೆ ಓರ್ವ ಮಹಿಳೆ ಬಲಿ
ಕುಣಿಗಲ್ : ತಾಲ್ಲೂಕಿನ ಕಸಬಾ ಹೋಬಳಿ ಬೂದನಹಳ್ಳಿ ಗ್ರಾಮದ 65 ವರ್ಷದ ಮಹಿಳೆ ಲಕ್ಕಮ್ಮ ಗುರುವಾರ ಸಂಜೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಹಾಬಲೇಶ್ ಗ್ರಾಮ ಲೆಕ್ಕಿಗರಾದ ಭವ್ಯ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿಸಾವನ್ನಪ್ಪಿದ ವೃದ್ಧೆಯ ಕುಟುಂಬದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಬರುವಂತಹ ಪರಿಹಾರವನ್ನು ಮಂಜೂರು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ದೃಶ್ಯವನ್ನು ನೋಡಲು ಜನಸ್ತೋಮವೆe ನೆರೆದಿತ್ತು ವೃದ್ದೆಯನ್ನು ಕಳೆದುಕೊಂಡವರ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು.
ವರದಿ: ರೇಣುಕ ಪ್ರಸಾದ್