ತುಮಕೂರು
ಶೃಂಗಾರ ಪ್ರಕಾಶನದಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ “ಶೃಂಗಾರ ಪ್ರಕಾಶನ ಪ್ರಶಸ್ತಿ” ಪುರಸ್ಕಾರ
ತುಮಕೂರು: ವಿಶ್ವ ಪುಸ್ತಕ ದಿನದ ಅಂಗವಾಗಿ ತುಮಕೂರಿನ ಚಿಕ್ಕನಾಯಕನಹಳ್ಳಿಯ ಶೃಂಗಾರ ಪ್ರಕಾಶನ ನಗರದ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನದಲ್ಲಿ ಪುಸ್ತಕ ಬಿಡುಗಡೆ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಗಣ್ಯರಿಗೆ “ಶೃಂಗಾರ ಪ್ರಕಾಶನ ಪ್ರಶಸ್ತಿ” ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮೇ ತಿಂಗಳಲ್ಲಿ ನೂರು ವಸಂತಗಳನ್ನು ಪೂರೈಸುತ್ತಿರುವ ಹಿರಿಯ ರಂಗಭೂಮಿ ಕಲಾವಿದರು, ಸ್ವತಂತ್ರ್ಯ ಹೋರಾಟಗಾರರು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶತಾಯುಷಿ ಶ್ರೀ ಚನ್ನ ಬಸಯ್ಯ ಗುಬ್ಬಿಯವರನ್ನು ಆತ್ಮೀಯವಾಗಿ ಸನ್ಮಾಸಿಸಲಾಯಿತು. ಈ ಸಂದರ್ಭದಲ್ಲಿ ಸಾಹಿತಿ ಗಣ್ಯರು, ರಂಗ ಕಲಾವಿದರು ಹಾಗೂ ಶತಾಯುಷಿಗಲನ್ನು ಸನ್ಮಾನಿಸುವ ಮೂಲಕ ಶೃಂಗಾರ ಪ್ರಕಾಶನವು ತನ್ನ ಗೌರವ ಹೆಚ್ಚಿಸಿಕೊಂಡಿತಲ್ಲದೇ, ಇಂಥಹ ಮಾನವೀಯ ಕಾಳಜಿಯ ಹಿನ್ನೆಲೆಯಲ್ಲಿ ಶೃಂಗಾರ ಪ್ರಕಾಶನವು ಸಾಹಿತ್ಯ ರಂಗಭೂಮಿ ಕಲಾವಿದರಿಂದ ಪ್ರಶಂಸೆಗೆ ಒಳಗಾದ ಸುಂದರ ಕ್ಷಣಗಳಿಗೆ ಆತ್ಮೀಯ ಸಮಾರಂಭ ಸಾಕ್ಷಿಯಾಯಿತು.
ಇದೇ ಸಂದರ್ಭದಲ್ಲಿ ವೈಧ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಡಾ ಮುದ್ದುರಂಗಪ್ಪ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಬಿ ಚಿಕ್ಕಪ್ಪಯ, ಎಂ. ಎಸ್ ನಾಗರಾಜ್, ಶ್ರೀಮತಿ ರಾಣಿ ಚಂದ್ರಶೇಖರ್, ಶ್ರೀ ವೀರಪ್ಪ ದೇವರು, ಶ್ರೀ ಆರ್ ತಿಪ್ಪೇಸ್ವಾಮಿ, ಶ್ರೀ ರಾಜೇಶ್ ಬಿ.ಎನ್, ಭರತ ನಾಟ್ಯ ಕ್ಷೇತ್ರದ ಸಾಧನೆಗಾಗಿ ವಿದೂಷಿ ಬಾಲ ವಿಷ್ವನಾಥ್, ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ವಿದ್ಯಾಶಂಕರ್ ಲರ್ನಿಂಗ್ ಸೆಂಟರ್ ನ ಶ್ರೀ ಜಿ.ವಿ ವಿದ್ಯಾಶಂಕರ್, ಧಾರ್ಮಿಕ ಕ್ಷೇತ್ರದಲ್ಲಿನ ಕೊಡುಗೆಗಾಗಿ ಶ್ರೀ ಕೆ,ವಿ ವೆಂಕಟಸುಬ್ಬನ್ ಮತ್ತು ಶ್ರೀಮತಿ ಲಕ್ಷ್ಮೀ ಅಯ್ಯಂಗಾರ್, ಪ್ರಕಾಶನ ಕ್ಷೇತ್ರದಲ್ಲಿ ಗೋಮಿನಿ ಪ್ರಕಾಶನದ ಶ್ರೀ ಗುಬ್ಬಚ್ಚಿ ಸತೀಶ್, ಅನ್ನಪೂರ್ಣ ಪಬ್ಲಿಷಿಂಗ್ ಹೌಸಿನ ಶ್ರೀ ಬಿ.ಕೆ ಸುರೇಶ್, ಶ್ರೀ ಎಮ್. ಹೆಚ್ ನಾಗರಾಜು, ಸಂಘಟನೆ ಕ್ಷೇತ್ರದಿಂದ ಶ್ರೀ ಹೆಚ್ ಎಸ್ ರಾಘವೇಂದ್ರ ಹಾಗೂ ಶ್ರೀ ಹಿರಿಯಣ್ಣ.ಕೆ. ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಡಾ. ಸಣ್ಣಹೊನ್ನಯ ಕಂಟಲಗೆರೆ ಮತ್ತು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಶ್ರೀ ರಾಕ್ ಲೈನ್ ರವಿಕುಮಾರ್, ಚಿತ್ರಕಲಾ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ ಶ್ರೀ ಕಿಶೋರ್ ಕುಮಾರ್ ರವರನ್ನು ಡಾ.ಎಂ.ವಿ ನಾಗರಾಜರಾವ್ ಹಾಗೂ ಡಾ ಕವಿತಾಕೃಷ್ಣರವರು ಆತ್ಮೀಯವಾಗಿ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಬಾಪೂಜಿ ವಿದ್ಯಾಸಾಂಸ್ಥೆಯ ಸಂಸ್ಥಾಪಕರಾದ ಶ್ರೀ ಬಾಪೂಜಿ ಬಸವಯ್ಯನವರು ಉದ್ಘಾಟಿಸಿದರು. ಹಿರೇಮಠದ ಡಾ.ಶ್ರೀ ಶ್ರೀ ಶಿವಾನಂದ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದರು. ಹಿರಿಯ ಸಾಹಿತಿ ವಿದ್ಯಾವಾಚಸ್ಪತಿ ಡಾ.ಕವಿತಾ ಕೃಷ್ಣ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಡಾ ಸಿದ್ದಲಿಂಗಯ್ಯ ಹೊಲತಾಳು, ಪ್ರೊ ದಯಾನಂದ್, ಪ್ರೊ ಕೃಷ್ಣಮೂರ್ತಿ ಬಿಳಿಗೆರೆ, ಲೇಖಕಿ ಶ್ರೀಮತಿ ಸುಶೀಲಾ ಸದಾಶಿವಯ್ಯ, ಸಾಹಿತಿ ಜಿ.ಕೆ ಕುಲಕರ್ಣಿ, ಜಿಲ್ಲ್ ಕಸಾಪ ಗೌರವ ಕಾರ್ಯದರ್ಶಿ ಶ್ರೀಮರಿಬಸಪ್ಪ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಶೃಂಗಾರ ಪ್ರಕಾಶನದ ವಿ ರಾಘವೇಂದ್ರರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲೇಖಕ ಪ್ರಕಾಶ್ ಕೆ ನಾಡಿಗ್ ಕಾರ್ಯಕ್ರಮ ನಿರೂಪಣೆ ಮಾಡಿದರು.