ಕುಣಿಗಲ್
ಬಗರ್ ಹುಕುಂ : ಪಕ್ಷಾತೀತವಾಗಿ ನೈಜ ರೈತರನ್ನು ಗುರ್ತಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ : ಡಿ ಕೃಷ್ಣಕುಮಾರ್
ಕುಣಿಗಲ್ : ಸುಮಾರು ವರ್ಷಗಳಿಂದ ಸರ್ಕಾರಿ ಜಮೀನು ಉಳುಮೆ ಮಾಡುತ್ತಿರುವ ಸಂಬಂಧ ಬಗರ್ ಹುಕುಂ ಮೀಟಿಂಗ್ ಕರೆದು ಕೂಲಂಕುಷವಾಗಿ ಚರ್ಚಿಸಿ ಪಕ್ಷಾತೀತವಾಗಿ ನಿಜವಾದ ರೈತರನ್ನು ಗುರ್ತಿಸಿ ಜಮೀನನ್ನು ಮಂಜೂರು ಮಾಡಿ ಉಳುಮೆ ಚೀಟಿ ನೀಡುವಂತೆ ತಹಸೀಲ್ದಾರ್ ಮಹಾಬಲೇಶ್ವರ ಅವರಿಗೆ ತಾಲ್ಲೂಕು ಬಿಜೆಪಿ ಮುಖಂಡ ಹಾಗೂ ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ ಕೃಷ್ಣಕುಮಾರ್ ಸಲಹೆ ನೀಡಿದರು.
ಇದಕ್ಕೂ ಮುನ್ನ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರ ಹಲವಾರು ಸಮಸ್ಯೆಗಳನ್ನು ಕೇಳಿ ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಹಲವು ಸಮಸ್ಯೆಗಳನ್ನು ಬಗೆಹರಿಸಿ ಕೆಲವು ಅಹವಾಲುಗಳನ್ನು ಸ್ವೀಕರಿಸಿ ನಂತರ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಆಡಳಿತ ಯಂತ್ರ ಶಾಸಕರ ಕೈತಪ್ಪಿದೆ ಇದರಿಂದ ತಾಲ್ಲೂಕಿನ ರೈತರು ಸಣ್ಣಪುಟ್ಟ ಕೆಲಸಗಳಿಗೆ ಅಧಿಕಾರಿಗಳನ್ನು ಹುಡುಕುತ್ತಾ ತಾಲ್ಲೂಕು ಕೇಂದ್ರಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಕುಣಿಗಲ್ ದೊಡ್ಡಕೆರೆ ಹೇಮಾವತಿ ನೀರಿನಿಂದ ಭರ್ತಿಯಾಗಿದ್ದು ಕೆರೆಯ ಹಿಂಬದಿಯಲ್ಲಿರುವ ರೈತರ ತೋಟಗಳಿಗೆ ನೀರು ಬಿಡಲು ಅಧಿಕಾರಿಗಳು ಒಪ್ಪಿದರೆ ಅದಕ್ಕೆ ಶಾಸಕರು ಅಡ್ಡಗಾಲು ಹಾಕುವುದು ಎಷ್ಟು ಸರಿ ? ಸದ್ಯದ ಪರಿಸ್ಥಿತಿಯಲ್ಲಿ ಭಗವಂತನ ಕೃಪೆಯಿಂದ ತಾಲೂಕಿನಾದ್ಯಂತ ಅಷ್ಟೋ ಇಷ್ಟೋ ಮಳೆ ಬೀಳುತ್ತಿರುವುದರಿಂದ ರೈತರ ತೋಟಗಳು ಉಳಿದುಕೊಂಡಿವೆ ಇಲ್ಲದಿದ್ದರೆ ರೈತರು ಕಂಗಾಲಾಗುತ್ತಿದ್ದರು. ತಾಲ್ಲೂಕಿನ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಶಾಸಕರು ಜನತಾದಳ, ಬಿಜೆಪಿ, ಎಂದು ವಿಂಗಡಿಸಿ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರಿಗೆ ಮಾತ್ರ ಎನ್ ಎಂ ಆರ್ ತೆಗೆಯಿರಿ ಎನ್ನುವುದು ಎಷ್ಟು ಸರಿ? ಎಂದು ಆರೋಪಿಸಿದರು. ಇದಲ್ಲದೆ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಗ್ರೇಡ್ 2 ಕಾರ್ಯದರ್ಶಿಗಳಿಗೆ ಪಿಡಿಒ ಚಾರ್ಜ್ ನೀಡಿದ್ದರು ಈಗಾಗಲೇ ಅದನ್ನು ಹಿಂಪಡೆದಿದ್ದಾರೆ 15, 20, ದಿನಗಳಿಗೊಮ್ಮೆ ಪಿಡಿಒಗಳನ್ನು ಬದಲಾವಣೆ ಮಾಡುತ್ತಿರುವುದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನರೇಗಾ ಕೆಲಸಗಳು ಒಳಗೊಂಡಂತೆ ಮತ್ತಿತರ ಕೆಲಸಗಳು ನೆನೆಗುದಿಗೆ ಬಿದ್ದು ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಿಗೆ ಸಣ್ಣಪುಟ್ಟ ಕೆಲಸಗಳಿಗೆ ಅಲೆಯುವ ಸ್ಥಿತಿ ಬಂದೊದಗಿದೆ ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕೇಳಿದರೆ ಇದು ರಾಜ್ಯ ಮಟ್ಟದ ಆದೇಶ ಎನ್ನುತ್ತಾರೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ ಹೀಗಾದರೆ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯವೇ ಎಂದ ಅವರು ತಾಲೂಕಾಡಳಿತ ಬಗರ್ ಹುಕುಂ ಕಮಿಟಿಯ ಮೀಟಿಂಗ್ ಕರೆದು ಚರ್ಚಿಸಿ ನಿಜವಾದ ರೈತರನ್ನು ಗುರ್ತಿಸಿ ಉಳುಮೆ ಚೀಟಿ ನೀಡುತ್ತಿಲ್ಲ, ಕಂದಾಯ ಇಲಾಖೆ ಗ್ರಾಮಗಳಲ್ಲಿ ಸ್ಮಶಾನಕ್ಕೆ ಸಮರ್ಪಕವಾಗಿ ಜಮೀನನ್ನು ನೀಡುತ್ತಿಲ್ಲ, ಸರ್ಕಾರಿ ಕಚೇರಿಗಳಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದೆ ಇದರಿಂದರೈತರುಕಂಗಾಲಾಗಿದ್ದಾರೆ.ಶಾ ಸಕರು ಹೇಮಾವತಿ ಎಕ್ಸ್ ಪ್ರೆಸ್ ಕೆನಾನ್ ವಿಚಾರದಲ್ಲಿ ಇವರ ಸಂಬಂಧಿಕರೇ ನೀರಾವರಿ ಸಚಿವರಾಗಿದ್ದರು ಆಗ ಏಕೆ ಎಕ್ಸ್ ಪ್ರೆಸ್ ಕೆನಾಲ್ ಕೆಲಸ ಮಾಡಿಸದೆ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂದು ಹತ್ತು ಹಲವಾರು ಆರೋಪಗಳ ಸುರಿಮಳೆಗೈದ ಅವರು ಶಾಸಕರ 4 ವರ್ಷ 2ತಿಂಗಳ ಅಧಿಕಾರದ ಅವಧಿಯಲ್ಲಿ ತಾಲ್ಲೂಕಿನ ಅಭಿವೃದ್ಧಿ ಶೂನ್ಯ ಎಂದು ಆರೋಪಿಸಿದ ಅವರು ತಾಲೂಕಾಡಳಿತ ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಲರಾಮ್, ಪುರಸಭೆ ನಗರ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಒಳಗೊಂಡಂತೆ ಹಲವಾರು ಬಿಜೆಪಿ ಮುಖಂಡರು ಕಾರ್ಯಕರ್ತರು ರೈತರು ಉಪಸ್ಥಿತರಿದ್ದರು.
ವರದಿ : ರೇಣುಕ ಪ್ರಸಾದ್