ಕೊರಟಗೆರೆ

ಧಾರ್ಮಿಕ ಕಾರ್ಯಕ್ರಮಗಳಿಂದ ನಾಡಿನಲ್ಲಿ ಶಾಂತಿ ನಮ್ಮೆದಿ : ಡಾ.ಶ್ರೀ ಹನುಮಂತನಾಥಸ್ವಾಮೀಜಿ

ಗೊರವನಹಳ್ಳಿ ಮಹಾಲಕ್ಷ್ಮೀದೇವಾಲಯದಲ್ಲಿ ಭಕ್ತರಿಂದ ದ್ವಜಸ್ಥಂಭ ಪ್ರತಿಷ್ಠಾಪನೆ

ಕೊರಟಗೆರೆ : ದಾನಿಗಳ ಸಹಕಾರದಿಂದ ದೇವಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಸುವ ಮೂಲಕ ನಾಡಿನಲ್ಲಿ ಶಾಂತಿ ನೆಮ್ಮದಿ ನೆಲೆಸುವುದರೊಂದಿಗೆ ಸುಭಿಕ್ಷೆಯಾಗುತ್ತದೆ ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಶ್ರೀ ನರಸಿಂಹಗಿರಿ ಸುಕ್ಷೇತ್ರದ ಪೀಠಾಧ್ಯಕ್ಷರಾದ ಡಾ.ಶ್ರೀ ಹನುಮಂತನಾಥಸ್ವಾಮಿ ತಿಳಿಸಿದರು.
ಅವರು ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಹಾಗೂ ಬೆಂಗಳೂರು ವಾಸಿ ದಾನಿಗಳಾದ ಬಾಲಕೃಷ್ಣ ರವರು ಏರ್ಪಡಿಸಿದ್ದ ದ್ವಜಸ್ಥಂಭ ಪ್ರತಿಷ್ಠಾಪನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಆಚರಣೆಯಲ್ಲಿ ಅರ್ಥಪೂರ್ಣ ಆರೋಗ್ಯಕರ ಪರಿಕಲ್ಪನೆಯಿದೆ ಮನುಷ್ಯನು ಧಾರ್ಮಿಕತೆಯಿಂದ ಇದ್ದರೆ ಮಾನಸಿಕವಾಗಿ ಸದೃಡನಾಡಿ ದೇವತಾಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರೆ ಎಂತಹ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾನೆ ಈ ನಿಟ್ಟಿನಲ್ಲಿ ದಾನಿಗಳಾದ ಬಾಲಕೃಷ್ಣರವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ದೇವತಾ ಕಾರ್ಯದೊಂದಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸುವ ಮೂಲಕ ಸಮಾಜಮುಖಿ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕುಣಿಗಲ್ ಹರೇಶಂಕರಮಠದ ಶ್ರೀ ಸಿದ್ದರಾಮಚೈತನ್ಯಸ್ವಾಮೀಜಿ ಮಾತನಾಡಿ, ದೇವರ ಕೃಪೆ ಪ್ರೇರಣೆ ಇಲ್ಲದೆ ಮನುಷ್ಯನ ಜೀವನದಲ್ಲಿ ಏನೂ ನಡೆಯುವುದಿಲ್ಲ ಮನುಕುಲದ ವಿಕಾಸಕ್ಕೆ ಭಗವಂತನ ಆಶೀರ್ವಾದ ಅತ್ಯಗತ್ಯ ದೇವರೆಂಬ ಅಗೊಚರ ಶಕ್ತಿಯಿಂದ ನಾವು ಬದುಕುತ್ತಿದ್ದವೆ, ನಾವು ಉತ್ತಮ ಜೀವನ ನಡೆಸ ಬೇಕಾದರೆ ಪ್ರತಿಯೊಬ್ಬ ಮನುಷ್ಯನು ದೇವಾಲಯಗಳಿಗೆ ಬೇಟಿ ನೀಡಿ ದೇವರ ದ್ಯಾನ ಮಾಡುವ ಮೂಲಕ ಶಾಂತಿ ನೆಮ್ಮದಿ ಪಡೆಯುವಂತೆ ತಿಳಿಸಿ ಶ್ರೀಮಹಾಲಕ್ಷ್ಮೀ ಸನ್ನಿದಿಯಲ್ಲಿ ವಿವಾಹವಾದ ನವ ಜೋಡಿಗಳಿಗೆ ಆಶ್ರೀರ್ವದಿಸಿದರು.
ಶ್ರೀ ಮಹಾಲಕ್ಷ್ಮೀ ದೇವಾಲಯ ಟ್ರಸ್ಟ್ ನ ಅಧ್ಯಕ್ಷ ಬಿ.ಜಿ.ವಾಸುದೇವ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಸರ್ಕಾರ ಮತ್ತು ಟ್ರಸ್ಟ್ ನಡುವಿನ ವಿವಾದವಿದ್ದು ಇತ್ತೀಚೆಗೆ ಮತ್ತೆ ಟ್ರಸ್ಟ್ ಆಡಳಿತಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಭಕ್ತಾದಿಗಳ ಸಹಕಾರ ದಿಂದ ದೇವಾಲಯದ ಅಭಿವೃದ್ದಿಯೊಂದಿಗೆ ಮೊದಲಿನಂತೆ ಸಾಮಾಜಿಕ ಸೇವೆಗಳಿಗೆ ಶ್ರಮಿಸುವುದಾಗಿ ತಿಳಿಸಿದ ಅವರು ದೇವಾಲಯದ ಆವರಣದಲ್ಲಿ ದ್ವಜಸ್ಥಂಭ ನವಗ್ರಹ ದೇವಾಲಯ ಹಾಗೂ ಮಾರುತಿ ದೇವಾಲಯ ನಿರ್ಮಿಸಿ ಪ್ರಾಣಪ್ರತಿಷ್ಠಾಪನೆ ಕಾರ್ಯದೊಂದಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಮಾಡಿದ ಧಾನಿ ಬಾಲಕೃಷ್ಣರವರಿಗೆ ಅಬಿನಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಗಣಪತಿ ಪೂಜೆ, ಪುಣ್ಯಾಹವಾಚನ, ಪ್ರಾಯಶ್ವಿತ ಸಂಕಲ್ಪ, ರಕ್ಷಾಬಂಧನ, ಅಂಕುರಾರ್ಪಣೆ, ಆರಾಧನೆ ಸೇರಿದಂತೆ ವಿವಿಧ ಹೋಮ ಹವನಗಳೊಂದಿಗೆ ಉಚಿತ ಸಾಮೂಹಿಕ ವಿವಾಹ ಹಾಗೂ ದ್ವಜಸ್ಥಂಭ ಪ್ರಾಣಪ್ರತಿಷ್ಠಪನೆ ಕಾರ್ಯ ನಡೆಯಿತು.
ಈ ಸಂದರ್ಬದಲ್ಲಿ ದ್ವಜಸ್ಥಂಭದ ದಾನಿ ಬಾಲಕೃಷ್ಣ ಮತ್ತು ಅವರು ಕುಟುಂಬವರ್ಗ, ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಚಿಕ್ಕನರಸಯ್ಯ, ಖಜಾಂಚಿ ಜಿ.ಎಲ್.ಮಂಜುನಾಥ್, ಧಮ್ಮದರ್ಶಿಗಳಾದ ಡಾ. ಟಿ.ಎಸ್.ಲಕ್ಷ್ಮೀಕಾಂತ, ಟಿ.ಆರ್.ನಟರಾಜು, ಎಸ್.ಶ್ರೀಪ್ರಸಾದ್, ರವಿರಾಜೇಅರಸ್, ಆರ್.ಮುರಳೀಕೃಷ್ಣ, ಓಂಕಾರೇಶ್, ಆರ್.ಜಗದೀಶ್, ರಾಮಲಿಂಗಯ್ಯ, ನರಸರಾಜು, ಲಕ್ಷ್ಮೀನರಸಯ್ಯ, ಎನ್.ಜಿ.ನಾಗರಜು, ಗುತ್ತಿಗೆದಾರ ಎ.ಡಿ.ಬಲರಾಮಯ್ಯ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಸೇರಿದಂತೆ ಟ್ರಸ್ಟ್ ನ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker