ಕೊರಟಗೆರೆ : ಪಟ್ಟಣದ ಕೊರಟಗೆರೆ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ನೂತನ ಅದ್ಯಕ್ಷರಾಗಿ ಕೆ.ಟಿ.ರಂಗನಾಥ್ ಮತ್ತು ಉಪಾದ್ಯಕ್ಷರಾಗಿ ಕೆ.ಹೆಚ್.ಶಾಂತಕುಮಾರ್ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದಲ್ಲಿ ಒಟ್ಟು 13 ಮಂದಿ ನಿರ್ದೇಶಕರಿದ್ದು ಗುರುವಾರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಕೆ.ಟಿ.ರಂಗನಾಥ್ 7 ಮತಗಳನ್ನು ಪಡೆದು ಉಮೇಶ್‌ರವರ ವಿರುದ್ದ ಒಂದು ಮತದ ಅಂತರದಲ್ಲಿ ಆಯ್ಕೆಯಾದರು, ಉಪಾದ್ಯಕ್ಷ ಸ್ಥಾನಕ್ಕೆ ಕೆ.ಹೆಚ್.ಶಾಂತಕುಮಾರ್‌ರವರು 7 ಮತಗಳನ್ನು ಪಡೆದು ಮುದ್ದಮ್ಮ ವಿರುದ್ದ 1 ಮತದ ಅಂತರದಿಂದ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ರಾಮಯ್ಯ ಕಾರ್ಯನಿರ್ವಹಿಸಿದರು.
ನಂತರ ನೂತನ ಅದ್ಯಕ್ಷ ಕೆ.ಟಿ.ರಂಗನಾಥ್ ಮಾತನಾಡಿ, ಎಲ್ಲಾ ನಿರ್ದೇಶಕರ, ಉಪಾದ್ಯಕ್ಷರ, ಸದಸ್ಯರ ಮತ್ತು ಅಧಿಕಾರಿಗಳ ಸಹಕಾರದಿಂದ ಸಹಕಾರ ಸಂಘವನ್ನು ಉತ್ತಮ ನಿಟ್ಟಿನಲ್ಲಿ ನಡೆಸಿಕೊಂಡು ಹೋಗಲಾಗುವುದು, ಹಾಲು ಉತ್ಪಾದಕರಿಗೆ ಸರಿಯಾದ ಸಮಯಕ್ಕೆ ದರ ನೀಡಿಕೆಯೋಂದಿಗೆ ಸಹಕಾರ ಸಂಘದಿಂದ ಬರುವ ಎಲ್ಲಾ ಸೌಲಭ್ಯ ಮತ್ತು ಸವಲತ್ತುಗಳನ್ನು ತಲುಪಿಸಲು ಶ್ರಮಿಸಲಾಗುವುದು ಎಂದರು.
ನೂತನ ಉಪಾಧ್ಯಕ್ಷ ಶಾಂತಕುಮರ್ ಮಾತನಾಡಿ ಸಂಘದ ಅಭಿವೃಧಿಗೆ ಅಧ್ಯಕ್ಷರಿಗೆ ಎಲ್ಲಾರೀತಿ ಸಹಕಾರ ನೀಡಲಾಗುವುದು ಎಂದರು.
ನಿರ್ದೇಶಕರುಗಳಾದ ಸಿದ್ದಲಿಂಗಯ್ಯ, ಲಕ್ಷೀಕಾಂತ, ಕಿರಣ್, ರವಿಕುಮಾರ್, ಶ್ರೀನಿವಾಸ, ಬಾಬು. ನಾಗಣ್ಣ, ಶಾಂತಣ್ಣ, ನಾಗಮ್ಮ , ಕಾರ್ಯದರ್ಶಿ ಸುರೇಶ್, ಸಿಬ್ಬಂದಿ ಪ್ರಕಾಶ್, ಉಪಸ್ಥಿತರಿದ್ದರು, ನೂತನಅದ್ಯಕ್ಷ, ಉಪಾದ್ಯಕ್ಷರಿಗೆ ಪಟ್ಟಣ ಪಂಚಾಯತಿ ಸದಸ್ಯ ಲಕ್ಷೀನಾರಾಯಣ, ಮುಖಂಡರುಗಳಾದ ಆಟೋಕುಮಾರ್, ನಾಗರಾಜು, ಹೇಮಂತ್, ರಾಜು, ನಾಗಣ್ಣ, ರಮೇಶ್, ಗೋಪಣ್ಣ, ಕೋಟೆ ನಾಗರಾಜು, ಮಹೇಶ್,ಅಮರ್, ಸೇರಿದಂತೆ ಇತರರಿದ್ದರು.