ತುಮಕೂರುದೇಶರಾಜ್ಯ

ಏಪ್ರಿಲ್ 10 ರಂದು ಡಾ.ಜಿ.ಪರಮೇಶ್ವರ್ ಅವರ ”ಸವ್ಯಸಾಚಿ”ಗೌರವ ಗ್ರಂಥ ಬಿಡುಗಡೆ ಸಮಾರಂಭ

ತುಮಕೂರು: ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರಒಕ್ಕೂಟ, ಸಿದ್ಧಾರ್ಥ ನಗರ, ತುಮಕೂರು ವತಿಯಿಂದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಮಾಜಿ ಉಪಮುಖ್ಯಮಂತ್ರಿ ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಡಾ.ಜಿ.ಪರಮೇಶ್ವರ ಅವರ ಕುರಿತ ಪ್ರೊ.ಮಾದೇವ್ ಭರಣಿ ಸಂಪಾದಿತ“ಸವ್ಯಸಾಚಿ”ಗೌರವಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭವನ್ನು ದಿನಾಂಕ  ಏಪ್ರಿಲ್ 10 ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಶ್ರೀ ಸಿದ್ಧಾರ್ಥ ಮೆಡಿಕಲ್‌ಕಾಲೇಜು ಆವರಣ ಅಗಳಕೋಟೆ, ತುಮಕೂರು ಇಲ್ಲಿ  ಆಯೋಜಿಸಲಾಗಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟದ ಅಧ್ಯಕ್ಷರಾದ ಡಾ.ಎಂ.ಜೆಡ್.ಕುರಿಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಡಾ.ಕೆ.ಸಿರಿ ಸುಮೇಧಾಥೇರಾ, ಅಧ್ಯಕ್ಷರು,ಇಂಡೋ ಶ್ರೀಲಂಕಾ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಅಸೋಸಿಯೇಷನ್, ಹೈಪ್ರೀಸ್ಟ್ಜಂಬೂದ್ವೀಪ, ಶ್ರೀಲಂಕಾ ಬುದ್ದಿಸ್ಟ್ಟೆಂಪಲ್, ಸಮಥ್, ವಾರಣಾಸಿ, ಭಾರತ ಇವರು ಉದ್ಘಾಟಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ, ನಾಟಕಕಾರ, ಕಾದಂಬರಿಕಾರರುಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಡಾ.ಚಂದ್ರಶೇಖರಕಂಬಾರ ಅವರು‘ಸವ್ಯಸಾಚಿ’ ಗೌರವಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ.

ಶ್ರೀ ವಿರೇಶಾನಂದ ಸರಸ್ವತಿ ಸ್ವಾಮಿಗಳು, ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ಹಾಗೂ  ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ತುಮಕೂರು ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಚಿಂತಕರು, ಸಿನಿಮಾ ನಿರ್ದೇಶಕರು ಹಾಗೂ ಪ್ರಸಿದ್ಧ ಬಂಡಾಯ ಸಾಹಿತಿಗಳಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀ ಮಾರುತಿ ಡಿ. ಮಾಲೆ, ಅಧ್ಯಕ್ಷರು, ಶ್ರೀಮತಿ ಕನ್ನಿಕಾ ಪರಮೇಶ್ವರಿ, ಆಡಳಿತ ಮಂಡಳಿ ಸದಸ್ಯರು, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ತುಮಕೂರು ಇವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದರು.

ಆಸನ ಮತ್ತು ಊಟದ ವ್ಯವಸ್ಥೆ : ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರಒಕ್ಕೂಟ ಆಯೋಜಿಸಿದ ಕಾರ್ಯಕ್ರಮದಲ್ಲಿ ನೌಕರರು ಮತ್ತು ಸಾರ್ವಜನಿಕರು ಭಾಗವಹಿಸಲು ಒಟ್ಟು 5ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಎರಡು ರೀತಿಯ ವೇದಿಕೆಗಳಿಗೆ ಸಕಲ ಸಿದ್ಧತೆ ಬರದಿಂದ ಸಾಗುತ್ತಿದೆ.ಒಂದು ವೇದಿಕೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದರೆ, ಇನ್ನೊಂದು ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಂದಂತಹ ಎಲ್ಲಾ ಅತಿಥಿಗಳಿಗೆ ಡಾ.ಎಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟದ ಉಪಾಧ್ಯಕ್ಷ ಡಾ.ಪ್ರಭಾಕರ್‌ ತಿಳಿಸಿದರು.

ಗ್ರಂಥಕುರಿತು: ಪ್ರೊ.ಮಾದೇವ್ ಭರಣಿ ಸಂಪಾದಿತ“ಸವ್ಯಸಾಚಿ”ಗೌರವ ಗ್ರಂಥದಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಹತ್ತಿರದಿಂದ ನೋಡಿದ ಸಾಮಾಜಿಕ ಹೋರಾಟಗಾರರು, ರಾಜ್ಯದ ಉದ್ದಗಲಕ್ಕುಇರುವ ಪತ್ರಕರ್ತರು, ಅಧಿಕಾರಿಗಳು, ಶಾಸಕರು, ಸಂಸದರು, ಸಚಿವರು, ಕಲೆ, ಸಾಹಿತ್ಯ ಸೇರಿದಂತೆ ರಾಜಕೀಯವಾಗಿ, ಶೈಕ್ಷಣಿಕವಾಗಿ ಎಲ್ಲಾಆಯಾಮದಲ್ಲಿ ನೋಡಿದ ಹಲವಾರು ಗಣ್ಯರು ಜಾತ್ಯಾತೀತವಾಗಿ ಪಕ್ಷಾತೀತವಾಗಿ ಲೇಖನಗಳು ಗ್ರಂಥದಲ್ಲಿ ಒಳಗೊಂಡಿದೆ. ಗ್ರಂಥವು1 ಕೆ.ಜಿ.200ಗ್ರಾಂ ತೂಕ ಹೊಂದಿದ್ದು, 476 ಪುಟಗಳಿದ್ದು, ನಾಲ್ಕು ಭಾಗಗಳಿವೆಎಂದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಸಂಪಾದಕರು ಪ್ರೊ.ಮಾದೇವ್ ಭರಣಿವಿವರವಾಗಿ ತಿಳಿಸಿದರು.

ಸುಗಮ ಸಂಗೀತ: ಖ್ಯಾತಗಾಯಕಿ, ಸಂಗೀತಾಕಟ್ಟಿ ಮತ್ತು ಬಳಗದಿಂದ ಏಪ್ರಿಲ್ 10, ರಂದು ಭಾನುವಾರ ಬೆಳಿಗ್ಗೆ: 8.30 ರಿಂದ 10.30 ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ.

ಸ್ವರ ಮಾಧುರ್ಯಗೀತಗಾಯನ ವೈಭವ:
`ಶಿಕ್ಷಣ ಭೀಷ್ಮ’ ಡಾ.ಹೆಚ್.ಎಂ.ಗಂಗಾಧರಯ್ಯರವರ ಕುರಿತು ಡಾ.ಲಕ್ಷ್ಮಣದಾಸ್, ಹರಿಕಥಾ ವಿದ್ವಾನ್, ಕೇಂದ್ರ ಸಂಗೀತ- ನಾಟಕಅಕಾಡೆಮಿರಾಷ್ಟç ಪ್ರಶಸ್ತಿ ಪುರಸ್ಕೃತರು ಜನಕಥಾಕೀರ್ತನ ವನ್ನು ಏಪ್ರಿಲ್ 9 ರಂದು ಸಂಜೆ 6.30 ರಿಂದ 10.30 ರವರೆಗೆ ನಡೆಸಿಕೊಡಲಿದ್ದಾರೆ.ಇದೇ ಸಂದರ್ಭದಲ್ಲಿ ಪ್ರಸಿದ್ಧ ಗಾಯಕಕೆಂಕೆರೆ ಮಲ್ಲಿಕಾರ್ಜುನ ಅವರಿಂದ ಜಾನಪದ ಝೇಂಕಾರ(ತುಮಕೂರುಜಿಲ್ಲೆಯ 101 ಜಾನಪದಗಾಯಕ ವೃಂದದೊಂದಿಗೆ) ನಡೆಯಲಿದೆ.

ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಾಳಿತಾಧಿಕಾರಿ ನಂಜುಂಡಪ್ಪ, ಶ್ರೀ ಸಿದ್ಧಾರ್ಥ ಡೆಂಟಲ್‌ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್‌ ಕುಡುವ, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್.ಕುಮಾರ್, ಸಾಹೇ ವಿಶ್ವವಿದ್ಯಾನಿಲಯಕುಲಾಧಿಪತಿ ಸಲಹೆಗಾರರಾದ ವಿವೇಕ್ ವೀರಯ್ಯ ಪತ್ರಿಕಾಗೋಷ್ಠಿಯಲ್ಲಿ ಭಾವಗಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker