ತುಮಕೂರು
ಐಎಂಎ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ತುಮಕೂರು : ಜಿಲ್ಲೆಯ ಭಾರತೀಯ ವೈದ್ಯಕೀಯ ಸಂಘ(ಐಎಂಎ), ಮಹಿಳಾ ವಿಭಾಗದ ವತಿಯಿಂದ ನಗರದ ಐಎಂಎ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ನೆಲಮಂಗಲದ ಧರಿತ್ರಿ ವಿಶೇಷ ಮಕ್ಕಳ ಶಾಲೆಯ ಶಿಕ್ಷಕಿ ರಾಧಾ ಅವರನ್ನು ಸನ್ಮಾನಿಸಲಾಯಿತು. ಐಎಂಎ ಅಧ್ಯಕ್ಷ ಡಾ: ಸಂಜಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಡಾ: ಜಿ.ಕೆ. ಸನತ್ ಕುಮಾರ್, ಖಜಾಂಚಿ ಡಾ: ಮಹೇಶ್, ಮಹಿಳಾ ವಿಭಾಗದ ಅಧ್ಯಕ್ಷೆ ಡಾ: ಗಿರಿಜಾ ಸಂಜಯ್, ಕಾರ್ಯದರ್ಶಿ ಡಾ: ನಳಿನ, ಮೈಕ್ರೋಬಾಯಾಲಜಿಸ್ಟ್ ಡಿ.ಎಸ್.ವಿದ್ಯಾ, ಮತ್ತಿತರರು ಉಪಸ್ಥಿತರಿದ್ದರು.