ತುಮಕೂರು ನಗರ
ದಿಢೀರ್ ಬೀಸಿದ ಬಿರುಸಿನ ಗಾಳಿಗೆ ಶಾಮಿಯಾನ ಕುಸಿತ ಹಲವರಿಗೆ ಗಾಯ, ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ತುಮಕೂರು : ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯವತಿಯಿಂದ ಕೆರೆ ಹೂಳೆತ್ತಿ, ಅಭಿವೃದ್ದಿ ಪಡಿಸಿ, ನಗರಪಾಲಿಕೆಗೆ ಹಸ್ತಾಂತರಿಸುವ ಕಾರ್ಯಕ್ರಮದ ವೇಳೆ ಜೋರಾಗಿ ಗಾಳಿ ಬೀಸಿ, ಹಾಕಿದ್ದ ಶಾಮಿಯಾನ ಕುಸಿದು ಬಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ನಗರದ ಟಿ.ಪಿ.ಕೈಲಾಸಂ ರಸ್ತೆಯ ಬಳಿ ಇರುವ ಗಾರೆ ನರಸಯ್ಯನ ಕಟ್ಟೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿದ್ದು,ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಸಂತಸದ ಸಮಾರಂಭದಲ್ಲಿ ಘಟನೆ ನಡೆದಿದ್ದು ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.