ಎಸಿಬಿ ದಾಳಿಯಾದರೂ ಪಿಎಸ್‌ಐಗೆ ರಕ್ಷಣೆ : ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂದೇಟು : ಮಲ್ಲಿಕಾರ್ಜುನ ಭಟ್ಟರಹಳ್ಳಿ ಆರೋಪ
ತುಮಕೂರು : ಭ್ರಷ್ಟಾಚಾರ ನಿಗ್ರಹ ದಳ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದರು ಸಹ ಇದುವರೆಗೆ
ಹುಳಿಯಾರು ಪಿಎಸ್‌ಐ ಅವರನ್ನು ಅಮಾನತ್ತು ಮಾಡಿಲ್ಲ ಎಂದು ಲಂಚಮುಕ್ತ ಕರ್ನಾಟಕದ ಪ್ರ ಧಾನ ಕಾರ್ಯದರ್ಶಿ
ಮಲ್ಲಿಕಾರ್ಜುನ ಭಟ್ಟರಹಳ್ಳಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎಸಿಬಿ ದಾಳಿಯಾದ ನಂತರ ಅಧಿಕಾರಿಯನ್ನು ಅಮಾನತ್ತು
ಮಾಡಬೇಕು ಎನ್ನುವುದು ನಿಯಮ.ಆದರೆ ಆರು ತಿಂಗಳಾದರೂ ಯಾವುದೇ ಕಾನೂನು ಕ್ರಮ ಜರುಗಿಲ್ಲ.
ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂತಿದ್ದಾರೆ ಎಂದು ಆ ರೋಪಿಸಿದರು.
ಎಸಿಬಿ ದಾಳಿಗೆ ಕಾರಣವಾದ ವ್ಯಕ್ತಿಯನ್ನು ಸುಳ್ಳು ಮೊಕದ್ದಮೆ ಹೊರಿಸಿ ಆತನನ್ನು ಜೈಲಿಗೆ ಕಳು ಹಿಸಿದ್ದಾರೆ,
ಭ್ರಷ್ಟಚಾರದ ಆರೋಪವಿರುವ ವರನ್ನೇ ಮುಂದುವರೆಸಿ ಸಾಕ್ಷಿ ನಾಶಕ್ಕೆ ಅವಕಾಶ ಕಲ್ಪಿಸ ಲಾಗಿದೆ, ತುರುವೇಕೆರೆ
ಸಿಪಿಐ ಅಮಾ ನತ್ತಿಗೆ ಮುತುವರ್ಜಿ ತೋರಿದ ಎಸ್ಪಿ ಅವರು ಚಿಕ್ಕನಾ ಯಕನಹಳ್ಳಿಯ ಪ್ರಕರಣದಲ್ಲಿ
ಏಕೆ ಈ ಕಾಳಜಿ ತೋ ರುತ್ತಿಲ್ಲ ಎಂಬುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದರು.
ಜಿಲ್ಲೆಯಲ್ಲಿ ಒಂದೊಂದು ತಾಲೂಕಿಗೆ ಒಂದು ಕಾನೂನಿಲ್ಲ, ಕುಣಿಗಲ್‌ನಲ್ಲಿ ಮದ್ಯ ಸೇವನೆ ಮಾಡಿ ಸೇವೆ
ಮಾಡುತ್ತಿದ್ದ ಪೊಲೀಸರನ್ನು ಪ್ರಶ್ನಿಸಿದ ಕುಣಿಗಲ್‌ನ ರಘು ಜಾಣಗೆರೆ ಮೇಲೆ ಪ್ರಕರಣ ದಾಖಲಿಸಿದ್ದಾರೆ,
ಪೊಲೀಸರನ್ನು ಪ್ರಶ್ನಿಸಿದವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ತಂತ್ರ ಮಾಡುತ್ತಿದ್ದಾರೆ ಎಂದು
ದೂರಿದರು.
ಜಿಲ್ಲೆಯಲ್ಲಿ ಎಸಿಬಿ ದಾಳಿ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ, ಜಿಲ್ಲೆಯಲ್ಲಿರುವ ಭ್ರಷ್ಟಾಚಾರ ಮತ್ತು ದುರಾ
ಡಳಿತ ಹೆಚ್ಚಾಗಿದೆ, ಜಿಲ್ಲೆಯಲ್ಲಿ ಲೋಕಾಯುಕ್ತ ನಿಷ್ಕ್ರೀಯವಾಗಿದೆ, ಅಧಿಕಾರಿ ವರ್ಗದಲ್ಲಿ ಭ್ರಷ್ಟಾಚಾರ
ಹೆಚ್ಚಳವಾಗಿದೆ,ಜಿಲ್ಲೆಯಲ್ಲಿ ಜನಸ್ನೇಹಿ ಆಡಳಿತವಿಲ್ಲ,ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು
ದೂರಿದರು.ಕೆಆರ್‌ಎಸ್ ನ ರಘು ಜಾಣಗೆರೆ ಮಾತನಾಡಿ, ಹಣಕೊಟ್ಟು ರಾಜಕಾರಣಿಗಳ ಕೈ ಕಾಲು ಹಿಡಿದು ಬರುವ
ಅಧಿಕಾರಿಗಳು ರಾಜಕಾರಣಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ,ದೂರು ಕೊಡಲು ಬರುವವರ ಮೇಲೆ
ಪ್ರಕರಣ ದಾಖಲಿಸಿ, ರಾಜಕಾರಣಿ ಗಳನ್ನು ಮೆಚ್ಚಿಸಲು ಮುಂದಾಗುತ್ತಿದ್ದಾರೆ, ಭ್ರಷ್ಟ ಅಧಿಕಾರಿ ಗಳನ್ನು ಕೆಲಸ
ಮಾಡಲು ಬಿಟ್ಟರೆ ಅವರಿಂದ ಉತ್ತಮ ಕೆಲಸ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಹಂದ್ರಾಳು ನಾಗಭೂಷಣ್ ಮಾತನಾಡಿ, ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ತೇಜಸ್ವಿನಿ ಅವರ ಮೇಲೆ
ಎಫ್‌ಐಆರ್ ದಾಖಲಾಗಿದ್ದರು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗುತ್ತಿಲ್ಲ, ತಹಶೀಲ್ದಾರ್
ದೌರ್ಜನ್ಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟರು ಕ್ರಮವಹಿಸುತ್ತಿಲ್ಲ.ಕಳೆದ ಎರಡು ತಿಂಗಳಿಂದ
ಹೋರಾಟ ಮಾಡುತ್ತಿದ್ದರು ಪೊಲೀಸರು ಎಫ್‌ಐಆರ್ ದಾಖಲಿಸಲಿಲ್ಲ, ನ್ಯಾಯಾಲಯದಲ್ಲಿ ಪಿಸಿಆರ್
ದಾಖಲಿದ ಇಪ್ಪತ್ತಾಲ್ಕು ಗಂಟೆಯೊಳಗೆ ದೂರು ದಾಖಲಿಸಿದ್ದಾರೆ. ನ್ಯಾಯಾಲಯದಲ್ಲಿ ದಾ ಖಲಿಸಿರುವ
ಪ್ರಕರಣದ ವಿಚಾರಣೆ ಫೆ. 07ರಂದು ನಡೆಯಲಿದ್ದು, ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸುವುದಾಗಿ
ಹೇಳಿದರು.ಕಾನೂನು ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಇಂತಹ ದುರಾಡಳಿತ ನಡೆಯುತ್ತಿದ್ದರು,ಅಧಿಕಾರಿ
ಗಳನ್ನು ವರ್ಗಾವಣೆ ಮಾಡಲು ಮುಂದಾಗುತ್ತಿಲ್ಲ,ಸಾರ್ವಜನಿಕ ವಿರೋಧಿ ಮನೋಭಾವನೆ, ಭ್ರಷ್ಟಾ
ಚಾರದ ಆರೋಪವಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗಜೇಂದ್ರಕುಮಾರ್ ಗೌಡ, ದಿನೇಶ್ ಬಾಬು ಸೇರಿದಂತೆ ಇತರರಿದ್ದರು.