ಸರ್ವಾಧಿಕಾರಿ ಮಾಧುಸ್ವಾಮಿಯಿಂದ ಜಿಲ್ಲೆಯಲ್ಲಿ ಬಿಜೆಪಿ ಒಂದು ಸೀಟು ಬರೋಲ್ಲ : ಸಂಸದ ಬಸವರಾಜು ಪಿಸು ಮಾತು
ತುಮಕೂರು: ಕಾನೂನು ಸಂಸದೀಯ ಸಚಿವ ಮಾಧುಸ್ವಾಮಿ ದಕ್ಷಿಣ ಕೊರಿಯಾದ ಸರ್ವಾಧಿಕಾರಿ ಇದ್ದಂತೆ ಅವನಿಂದ ಜಿಲ್ಲೆಯಲ್ಲಿ ಒಂದು ಸೀಟು ಬರೋಲ್ಲ ಅಂತ ಸಂಸದ ಜಿ.ಎಸ್.ಬಸವರಾಜು ಸಚಿವ ಬೈರತಿ ಬಸವರಾಜು ಅವರಿಗೆ ಪಿಸುಗುಟ್ಟಿದ್ದಾರೆ.
ತುಮಕೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಅವರೊಂದಿಗೆ ಸುದ್ದಿಗೋಷ್ಠಿ ಆರಂಭಕ್ಕೂ ಮಾತನಾಡುತ್ತಿದ್ದ ಸಂಸದ ಜಿ.ಎಸ್.ಬಸವರಾಜು ಮೈಕ್ ಮುಂದೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬಗ್ಗೆ ದೂರು ಹೇಳಿದ್ದಾರೆ.
ಆ ಮಂತ್ರಿಯಿಂದ ನಮ್ಮ ಜಿಲ್ಲೆನೇ ಹಾಳಾಗಿ ಹೋಗಿದೆ. ಒಂದ್ ಸೀಟು ಬರೋದು ಕಷ್ಟ ಆಗಿದೆ, ಬರೀ ಹೊಡಿ, ಬಡಿ, ಕಡಿ ಅಂತಾನೆ, ನಮ್ಮದೆ ಸಮುದಾಯದ ಇಇಗೆ ಹೆಂಡತಿ ಸೀರೆ ಹೊಗೆಯೋಕೆ ನಾಲಾಯಕ್ಕೂ ಅಂತಾರೆ, ಅವ್ರು ನಮ್ಮವರು ಗೊಳಾಡ್ತಾರೆ, ಮೊನ್ನೆ ಎರಡು ಸಾವಿರ ಕೋಟಿ ಅನುದಾನ ತಗೊಂಡು ಹೋಗಿದ್ದಾರೆ, ತಾಲೂಕಿಗೆ ನಮ್ಮನ್ನ ಕರೆಯೋದು ಇಲ್ಲ, ಹೇಳೋದಿಲ್ಲ, ನಿಮ್ಮ ಇಲಾಖೆಗೆ ಬಂದ್ರೆ ಏನು ಮಾಡಿಕೊಡಬೇಡಿ ಅಂತೆಲ್ಲ ದೂರು ಹೇಳಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿ ಬಯಲಾಗಿದೆ.
ಜಿಲ್ಲೆಯ ಬಿಜೆಪಿಯಲ್ಲಿ ಯಾವುದು ಸರಿಯಲ್ಲ ಎನ್ನುವುದು ಪದೇ ಪದೇ ಬೆಳಕಿಗೆ ಬರುತ್ತಿದ್ದು, ಈಗ ಸಂಸದ ಮತ್ತು ಸಚಿವರ ನಡುವಿನ ಮನಸ್ತಾಪ ಬೆಳಕಿಗೆ ಬಂದಿದೆ. ಈ ಮೊದಲು ಜಿಲ್ಲಾಧ್ಯಕ್ಷರಾಗಿದ್ದ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ, ಮದಲೂರು ಕೆರೆಗೆ ನೀರು ಹರಿಸುವುದು ಮತ್ತು ಹೆಬ್ಬೂರು, ಗೂಳೂರು ಏತನೀರಾವರಿ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ವಿರುದ್ದ ಪಕ್ಷದ ಹೈಕಮಾಂಡ್‌ಗೆ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ಆಗದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಸಂಸದರೂ ಸಹ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ.