ರೈತರಿಲ್ಲದೆ ಪ್ರಪಂಚದಲ್ಲಿ ಮನುಷ್ಯನ ಜೀವನ,ಅಸ್ತಿತ್ವ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ : ಗುರುದತ್
ಗುಬ್ಬಿ : ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿದಿನ ರೈತರ ದಿನಾಚರಣೆಗಳು ನಡೆಯಬೇಕು ಎಂದು ಸುಜೀವನ ಒಕ್ಕೂಟದ ಅಧ್ಯಕ್ಷ ಗುರುದತ್ ತಿಳಿಸಿದರು.
ತಾಲ್ಲೂಕಿನ ದ್ಯಾವಣ್ಣನಪಾಳ್ಯ ಗ್ರಾಮದ ರುದ್ರೇಶ್‌ರವರ ಜಮೀನಿನಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಸುಜೀವನ ಒಕ್ಕೂಟ ಗುಬ್ಬಿ ಮತ್ತು ಸಿಎಸ್ ಪುರ ರೈತ ಉತ್ಪಾದಕರ ಕಂಪನಿವತಿಯಿಂದ ಏರ್ಪಡಿಸಿದ್ದ ವಿಶ್ವ ರೈತರ ದಿನ ಹಾಗೂ ಬದನೆ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ರೈತರಿಗೆ ಸರ್ಕಾರ ಹಲವು ಯೋಜನೆಗಳನ್ನು ನರೇಗಾ ಯೋಜನೆಯಡಿ ತಂದಿದೆ. ಅವುಗಳನ್ನು ಬಳಸಿಕೊಂಡು ಜಮೀನನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬೇಕು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾವಯವ ಕೃಷಿ ಪರಿಕರಗಳನ್ನು ಬಳಸಿ ಕೃಷಿ ಮಾಡಿದಾಗ ಮಾತ್ರ ಮನುಷ್ಯರ ಆರೋಗ್ಯ ಕಾಪಾಡಬಹುದು ಎಂದು ತಿಳಿಸಿದರು.
ಭಾರತ ದೇಶದ ಐದನೇ ಪ್ರಧಾನಮಂತ್ರಿ ಚರಣ್‌ಸಿಂಗ್ ಚೌಧರಿರವರ ಹೆಸರಲ್ಲಿ ವಿಶ್ವ ರೈತ ದಿನಾಚರಣೆ ಮಾಡಲಾಗುತ್ತದೆ. ಇವರ ಕಡಿಮೆ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು ಸಹ ಇವರು ರೈತರ ಜೀವನ ಸುಧಾರಣೆಗೆ ಅನೇಕ ಯೋಜನೆಗಳನ್ನು ತಂದು ರೈತರ ಯಶಸ್ವಿಗೆ ಕಾರಣರಾಗಿದ್ದರು ಎಂದರು.
ನಿರ್ದೇಶಕ ಅಸ್ಲಾಂ ಪಾಷ ಮಾತನಾಡಿ, ರೈತರು ತಮ್ಮ ಜಮೀನಿಗೆ ಕಳೆನಾಶಕವನ್ನು ಒಡೆಯದೆ ಕಳೆಯನ್ನು ನಿಯಂತ್ರಣ ಮಾಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿ ರೈತ ರುದ್ರೇಶ್, ಮುಖಂಡ ಗುರುಚನ್ನಬಸಪ್ಪ, ಸಿಎಸ್ ಪುರ ರೈತ ಉತ್ಪಾದಕರ ಕಂಪನಿಯ ಸಿಬ್ಬಂದಿಗಳಾದ ಲೋಕೇಶ.ಡಿ, ವಿನೋದಮ್ಮ, ಬಿಸಿಎ ಗಂಗಮ್ಮ, ಆರ್ಥಿಕ ಸೆರ್ಪಡೆ ಅಧಿಕಾರಿ, ಶ್ರೀನಿವಾಸ್, ರಾಘವೇಂದ್ರ ಹಾಗೂ ಕೃಷಿಕ, ಮಹಿಳಾ ಸಂಘದವರು ಹಾಜರಿದ್ದರು.