ಮದಲೂರು ಕೆರೆಗೆ ಪ್ರತಿ ವರ್ಷವೂ ಹೇಮಾವತಿ ನೀರು ಹರಿಯಲಿದೆ : ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ ತಾಲ್ಲೂಕು ತಾವರೆಕೆರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಚೆಕ್ ವಿತರಣೆ
ಶಿರಾ : ಶಿರಾ ತಾಲೂಕಿನ ಜೀವನಾಡಿ ಮದಲೂರು ಕೆರೆ ಸತತವಾಗಿ ಹೇಮಾವತಿ ನೀರು ಹರಿಯುತ್ತಿರುವ ಕಾರಣ ಮತ್ತೊಮ್ಮೆ ಕೋಡಿ ಬಿದ್ದಿದೆ, ನೂರಾರು ಗ್ರಾಮಗಳ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿರುವ ಮದಲೂರು ಕೆರೆಗೆ ಪ್ರತಿವರ್ಷವೂ ಹೇಮಾವತಿ ನೀರು ಹರಿಸುವಂತ ಕೆಲಸ ಸರಕಾರ ಮಾಡಲಿದೆ ಎಂದು ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಹೇಳಿದರು.
ಅವರು ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಕಂದಾಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಕೋರೋನಾ ಸೋಂಕಿನಿಂದ ಮೃತಪಟ್ಟ ಸಂಬAಧಿಕರ 45 ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಣೆ ಮಾಡಿ ಮಾತನಾಡಿದರು. ಹೇಮಾವತಿ ನೀರು ಹರಿದ ಪರಿಣಾಮ ಶಿರಾ ಭಾಗದ ಕಳ್ಳಂಬೆಳ್ಳ ಶಿರಾ ದೊಡ್ಡಕೆರೆ ಸೇರಿದಂತೆ ಮದಲೂರು ನಾಲೆ ವ್ಯಾಪ್ತಿಯ 11 ಕೆರೆ ಜೊತೆಗೆ ಹೆಚ್ಚುವರಿಯಾಗಿ ಕೊಟ್ಟ ಮತ್ತು ಲಿಂಗದಹಳ್ಳಿ ಕೆರೆಗಳು ಭರ್ತಿಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದರು.
ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ಆರ್ಥಿಕ ಚೈತನ್ಯ ನೀಡಲು ಸರಕಾರ ಬದ್ಧವಾಗಿದೆ ಸೋಂಕಿನಿಂದ ಸಾವನ್ನಪ್ಪಿದ ಪ್ರತಿ ವ್ಯಕ್ತಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಜತೆಗೆ ಕೇಂದ್ರ ಸರಕಾರ ಕೂಡ 50 ಸಾವಿರ ಪರಿಹಾರ ನೀಡಿ ನೊಂದ ಕುಟುಂಬಗಳಿಗೆ ಶಕ್ತಿ ತುಂಬುವಂಥ ಕೆಲಸ ಮಾಡಿದೆ. ಕೋವಿಡ್ ಸೋಂಕು ನಿರ್ಮೂಲನೆ ಆಯಿತು ಎಂಬ ನಿರ್ಲಕ್ಷ ಬೇಡ ಸದಾಕಾಲಕ್ಕೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಮಾಸ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಇದ್ದರೆ ಸಹಕಾರಿಯಾಗಲಿದೆ. ಪ್ರಥಮ ಹಂತವಾಗಿ ತಾಲೂಕಿನ ಸೋಂಕಿನಿಂದ ಮೃತಪಟ್ಟ 45 ಜನರಿಗೆ ಮಾತ್ರ ಪರಿಹಾರ ನೀಡಿದ್ದೇವೆ ಇನ್ನು ಹಂತಹಂತವಾಗಿ ಪರಿಹಾರ ನೀಡುವಂತ ಕೆಲಸ ಸರ್ಕಾರ ಮಾಡಲಿದೆ.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಮತಾ, ತಾವರೆಕೆರೆ ಗ್ರಾಪಂ ಅಧ್ಯಕ್ಷೆ ಅನಿತಾ ಈರಣ್ಣ, ಮುದಿಮಡು ಮಂಜುನಾಥ್, ತಾವರೆಕೆರೆ ದೇವರಾಜ್, ಸದಸ್ಯರಾದ ಟಿ.ಸಿ.ರಾಜು, ಶಿವು ತಾವರೆಕೆರೆ, ರಾಮಕೃಷ್ಣಪ್ಪ, ಲಕ್ಷ್ಮೀಕಾಂತ್, ಡಿಎಸ್‌ಎಸ್ ಹೋಬಳಿ ಅಧ್ಯಕ್ಷ ರಂಗಸ್ವಾಮಯ್ಯ, ಗುಡ್ಡದರಂಗಪ್ಪ, ಮಧು, ಸತ್ಯಭಾಮ, ಉಪತಹಸೀಲ್ದಾರ್ ಸುನಿಲ್ ಕುಮಾರ್, ಗೌಡಗೆರೆ ಕಂದಾಯ ವೃತ್ತ ನಿರೀಕ್ಷಕ ಬಿವೈ ಕಾಂತಪ್ಪ ಸೇರಿದಂತೆ ಹಲವರು ಹಾಜರಿದ್ದರು.