ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ, ನೇಕಾರರನ್ನು ಪ್ರೋತ್ಸಾಹಿಸಿ : ಡಾ. ಕೆ.ವಿದ್ಯಾಕುಮಾರಿ
ತುಮಕೂರು: ನಾಗರಿಕರು ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೇಕಾರರನ್ನು ಪ್ರೋತ್ಸಾಹಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ.ವಿದ್ಯಾಕುಮಾರಿ ತಿಳಿಸಿದರು.
ನಗರದ ಶ್ರೀ ಶೃಂಗೇರಿ ಶಂಕರಮಠ ಆವರಣದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 14 ದಿನಗಳ ವಿಶೇಷ ಕೈಮಗ್ಗ ಮೇಳ ವಸ್ತçಸಿರಿ-2021ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಮೇಳದಲ್ಲಿ ಜಿಲ್ಲೆಯ ನೇಕಾರರ ಸಹಕಾರ ಸಂಘಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಬಾಗಲಕೋಟೆ, ಹಾವೇರಿ, ಬಳ್ಳಾರಿ, ದಾವಣಗೆರೆ, ಮಂಡ್ಯ, ಹಾಸನ, ಹಾವೇರಿ, ಕಲಬುರಗಿ, ಕೋಲಾರ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಶಿವಮೊಗ್ಗ, ಧಾರವಾಡ, ಗದಗ ಜಿಲ್ಲೆಗಳ ನೇಕಾರ ಸಹಕಾರ ಸಂಘಗಳು ಹಾಗೂ ಹೊರ ರಾಜ್ಯಗಳಾದ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ನೇಕಾರರ ಸಹಕಾರ ಸಂಘ/ಸAಸ್ಥೆಗಳು ಸೇರಿದಂತೆ ಒಟ್ಟು 63 ಮಳಿಗೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕೈಮಗ್ಗ ಉತ್ಪನ್ನಗಳಾದ ಅಪ್ಪಟ ರೇಷ್ಮೆ ಮೊಳಕಾಲ್ಮೂರು ಸೀರೆ, ವೈ.ಎನ್.ಹೊಸಕೋಟೆ ರೇಷ್ಮೆ ಸೀರೆ, ಕಲ್ಲೂರು ರೇಷ್ಮೆ ಸೀರೆ, ಕಾಟನ್ ಕಾರ್ಪೆಟ್, ಉಲ್ಲನ್ ಕಾರ್ಪೆಟ್, ಟವೆಲ್, ಚೂಡಿದಾರ ಬಟ್ಟೆ ಹಾಗೂ ಇತರೆ ವೈವಿಧ್ಯಮಯ ಕೈಮಗ್ಗ ಉತ್ಪನ್ನಗಳನ್ನು ಶೇ.20ರಷ್ಟು ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಜನರು ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಉಪನಿರ್ದೇಶಕಿ ಡಿ.ಸುಮಲತ ಮನವಿ ಮಾಡಿದ್ದಾರೆ.