ಅಂಬೇಡ್ಕರ್‌ರಿಂದ ತಳಸಮುದಾಯಕ್ಕೆ ಸಮಾನ ಹಕ್ಕು : ಡಾ.ನಾಗಣ್ಣ
ಡಾ.ಬಿ.ಆರ್.ಅಂಬೇಡ್ಕರ್ 65ನೇ ಪರಿನಿರ್ವಾಣ ದಿನಾಚರಣೆ
ತುಮಕೂರು: ಅಂಬೇಡ್ಕರ್ ಅವರ ದೂರ ದೃಷ್ಠಿಯ ಫಲವಾಗಿ ದೇಶದಲ್ಲಿನ ತಳ ಸಮುದಾಯಗಳು ಸಮಾನ ಹಕ್ಕುಗಳನ್ನು ಪಡೆಯುವಂತಾಗಿದ್ದು,ಎಲ್ಲರೂ ಒಗ್ಗೂಡಿ ಹೊಸ ಸಮಾಜವನ್ನು ಸೃಷ್ಟಿಸಲು ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದು ಕುರಿ ಹುಣ್ಣೆ ನಿಗಮ ಜಿಲ್ಲಾ ವ್ಯವಸ್ಥಾಪಕ ಡಾ.ನಾಗಣ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗುಂಚಿ ಸರ್ಕಲ್‌ನಲ್ಲಿ ವಿವಿಧ ದಲಿತ, ಪ್ರಗತಿಪರ ಹಾಗೂ ಸ್ವಾಭಿಮಾನಿ ದಲಿತ ಸಂಘಟನೆ ಆಯೋಜಿಸಿದ್ದ 65ನೇ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾಗ ತಳಸಮುದಾಯಗಳು, ಇತರೆ ಸಮುದಾಯಗಳಂತೆ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಆಶಯದೊಂದಿಗೆ ರಚಿಸಿದ ಸಂವಿ ಧಾನದಿಂದಾಗಿ ಇಂದು ವಿದ್ಯೆ, ಉದ್ಯೋಗ ಸೇರಿ ದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಈ ದೇಶದ ದಲಿತರು, ಬಡವರು, ಅಲ್ಪಸಂಖ್ಯಾತರು, ಹಿಂದು ಳಿದ ವರ್ಗಗಳ ಜನರು ಅವಕಾಶಗಳನ್ನು ಪಡೆದು, ತಮ್ಮ ಪ್ರತಿಭೆ ಸಾಭೀತು ಪಡಿಸಲು ಸಾಧ್ಯವಾಗಿದೆ.ಹಾಗಾಗಿ ಯುವ ಸಮುದಾಯ ಅಂಬೇಡ್ಕರ್ ಸಮ ಸಮಾಜದ ನಿರ್ಮಾತೃ ಅವರ ಪರಿನಿರ್ವಾಣ ದಿನವನ್ನು ಸ್ಮರಣೆ ಮಾಡದೇ ಹೋದರೆ ಜೀವನ ಅಪೂರ್ಣ ಎಂದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಿವಣ್ಣ ಮಾತನಾಡಿ,ಇಂದು ಎಲ್ಲರು ಗುಲಾಮಗಿರಿಯಿಂದ ಹೊರಬಂದು ಸ್ವಾತಂತ್ರ‍್ಯವಾಗಿ ಬಾಳುತ್ತಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಸಂವಿ ಧಾನವೇ ಕಾರಣ. ಮೀಸಲಾತಿ ಕಾನೂನಿನಡಿ ಶೇಕಡಾ 50% ಬಡ ಸಮುದಾಯಕ್ಕೆ ಅನುಕೂಲವಾಗಿದೆ.ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗಿ ಬಾಳಿ ಬದುಕಬೇಕು ಆಗಲೇ ಅಂಬೇಡ್ಕರ್ ಅವರಿಗೆ ತೃಪ್ತಿ ಎಂದು ತಿಳಿಸಿದರು.
ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷರಾದ ಸಿ.ಭಾನುಪ್ರಕಾಶ್ ಮಾತನಾಡಿ,ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ದಾಂತ ಗಳನ್ನು ಅಳವಡಿಸಿಕೊಂಡು, ಪ್ರಸ್ತುತ ಯುವ ಜನಾಂಗ ಮುನ್ನೆಡೆಯಬೇಕಾಗಿದೆ.ಹೇಗೆ ಅಂಬೇಡ್ಕರ್ ಅವರು ಇತಿಹಾಸ ಅರಿಯದವರ ಇತಿಹಾಸ ಸೃಷ್ಟಿಸಲಾರ ಎಂದು ಹೇಳಿದ್ದರೋ, ಹಾಗೆಯೇ ನಮ್ಮ ಪೂರ್ವಜರು ಅನುಭವಿಸಿದ ನೋವು, ಸಂಕಷ್ಟಗಳನ್ನು ತಿಳಿದು, ಭವಿಷ್ಯದಲ್ಲಿ ಅವು ಮರು ಕಳಿಸದಂತೆ ನಾವೆಲ್ಲರೂ ಎಚ್ಚರ ವಹಿಸಬೇ ಕಾಗಿದೆ.ಇದೇ ನಾವು ನಿಜವಾಗಿಯೂ ಅಂಬೇಡ್ಕರ್ ಅವರಿಗೆ ನೀಡುವ ಗೌರವ ಎಂದರು.
ದಲಿತ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ ಮಾತನಾಡಿ,ಸಂವಿಧಾನ ಶಿಲ್ಪಿಯ ಪರಿನಿಬ್ಬಾಣ ದಿನವನ್ನು ಇಡೀ ಪ್ರಪಂಚ ಆಚರಿಸುತ್ತಿರುವುದನ್ನು ಸಹಿಸಲಾರದ ಕುಲೀನ ಮನಸ್ಸುಗಳು, 1996ರ ಡಿಸೆಂಬರ್ 06 ರಂದು ಬಾಬರಿ ಮಸೀದಿ ದ್ವಂಸಗೊಳಿಸಿ, ಅಂಬೇಡ್ಕರ್ ಅವರನ್ನು ಶೋಷಿತ ಜನರು ನೆನೆಯದಂತಹ ಪರಿಸ್ಥಿತಿ ನಿರ್ಮಿಸಿದ್ದರು.ಆದರೆ ಈ ದೇಶದ ಬಹುಸಂಖ್ಯಾತ ಜನ ಸಮುದಾಯ ಇಂದು ದೇಶ, ವಿದೇಶಗಳಲ್ಲಿ ತಾವಿ ರುವಲ್ಲಿಯೇ ಅಂಬೇಡ್ಕರ್ ಅವರನ್ನು ನೆನೆದು, ಗೌರವ ಸಲ್ಲಿಸುತ್ತಿರುವುದು ಜ್ಞಾನಕ್ಕೆ ಪೂಜ್ಯತೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಬಂಡೆಕುಮಾರ್ ಮಾತನಾಡಿ 65ನೇ ಪರಿನಿರ್ವಾಣ ದಿನಾಚರಣೆ ಎಲ್ಲಾ ಮುಖಂಡರ, ಸಮುದಾಯಗಳ ಒಗ್ಗೊಡಿಕೆಯಿಂದ ಮಾಡಲಾ ಗುತ್ತಿದ್ದು ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೊಡಿಸಿಕೊಂಡು ಹೋರಾಟದ ಮೂಲಕ ನೀಡಿದ ಚಳುವಳಿಯನ್ನ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು, ಪ್ರತಿಯೊಬ್ಬರ ಮನೆಯಲ್ಲಿ ದೇವರ ಪೋಟೋ ಬದಲಿಗೆ ಅಂಬೇಡ್ಕರ್ ಭಾವಚಿತ್ರ ಇಟ್ಟು ಪೂಜಿಸಬೇಕು ಈಗಿನ ಕಾಲಕ್ಕೆ ಅಂಬೇಡ್ಕರ್ ಅವರೆ ನಿಜವಾದ ದೇವರು ಹಾಗಾಗಿ ಎಲ್ಲಾ ಜಾತಿ ಸಮುದಾಯದ ಮುಖಂಡರು ಈತತ್ವ ಪಾಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ರಂಗಯ್ಯ, ವಕೀಲರಾದ ನಿಂಗರಾಜು, ನಿರಂಜನ್, ಎಲ್. ಐ.ಸಿ.ಮುಂಜುನಾಥ್,ನಾಗೇಶ್, ರಾಮಮೂರ್ತಿ, ಗೂಳರಿವೆ ನಾಗರಾಜು,ಹೆಗ್ಗೆರೆ ಕೃಷ್ಣಪ್ಪ, ಛಲವಾದಿ ಶೇಖರ್, ಮರಳೂರು ಕೃಷ್ಣಮೂರ್ತಿ ಕೆಂಪರಾಜು, ಗಣೇಶ್, ರಂಜನ್, ಟಿ.ಸಿ.ರಾಮಯ್ಯ, ಮಹದೇವ್, ಜಯಣ್ಣ, ಶಿವರಾಜು, ಕೆ.ಕುಮಾರ್, ಜಿ.ಆರ್.ಸುರೇಶ್, ಎ.ಸಿ.ನಾಗರಾಜು,ಅಕ್ಷರ ದಾಸೋಹ ಶಿವಣ್ಣ ಸೇರಿದಂತೆ ಹಲವಾರು ಸಂಘಟನೆ ಮುಖಂಡರು ಭಾಗವಹಿಸಿದ್ದರು