ರಾಜಕೀಯವಾಗಿ ನನ್ನಿಂದ ಲಾಭ ಪಡೆದು ನನಗೆ ದ್ರೋಹ ಬಗೆದವರಿಗೆ ತಕ್ಕ ಪಾಠ ಕಲಿಸಿ : ಹೆಚ್.ಡಿ.ದೇವೇಗೌಡ

ತುರುವೇಕೆರೆ: ಜೆ.ಡಿ.ಎಸ್. ಪಕ್ಷಕ್ಕೆ ವಿಶೇಷ ರಾಜಕೀಯ ಶಕ್ತಿ ತುಂಬುತ್ತಾ ಮುನ್ನೆಡೆಸುತ್ತಿರುವ ತುಮಕೂರು ಜಿಲ್ಲೆಯನ್ನು ನಾನು ಎಂದಿಗೂ ಮರೆಯಲಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.
ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್‌ನಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ತುಮಕೂರಿನಿಂದ ಸಂಸತ್ ಚುನಾವಣೆಗೆ ಸ್ಪರ್ದಿಸಲು ನನಗೆ ಇಷ್ಟವಿರಲಿಲ್ಲ. ಆದರೂ ಕಾಂಗ್ರೇಸ್‌ನವರು ನನ್ನನ್ನು ಒಪ್ಪಿಸಿ ಕಣಕ್ಕಿಳಿಸುವ ಮೂಲಕ ಚಕ್ರವ್ಯೂಹಕ್ಕೆ ಸಿಲುಕಿಸಿ ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಿದರು. ನಾನು ಹೋರಾಟದಿಂದ ಬಂದವನು ನನ್ನ ರೈತ ಹಾಗೂ ಶೋಷಿತರ ಪರವಾದ ಹೋರಾಟವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಕೆ.ಎನ್.ರಾಜಣ್ಣ ನನ್ನಿಂದ ರಾಜಕೀಯ ಲಾಭ ಪಡೆದು ಸಂಸತ್ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದೆ ಎಂದು ಬೀಗುತ್ತಿದ್ದಾರೆ. ನಮ್ಮ ಪಕ್ಷದ ವಿಧಾನಪರಿಷತ್ ಅಭ್ಯರ್ಥಿ ಅನಿಲ್‌ಕುಮಾರ್‌ರವರನ್ನು ಗೆಲ್ಲಿಸುವ ಮೂಲಕ ನನಗೆ ದ್ರೋಹ ಬಗೆದವರಿಗೆ ತಕ್ಕ ಪಾಠ ಕಲಿಸಿ ಎಂದು ಮತದಾರರನ್ನು ಮನವಿ ಮಾಡಿದರು.
ತುಮಕೂರು ಜಿಲ್ಲೆಗೆ ಹೇಮಾವತಿ ತರಲು ಮಾಡಿದ ಹೋರಾಟ ನನ್ನದಾಗಿತ್ತು. ತುರುವೇಕೆರೆಗೂ ನನಗೂ ಅವಿನಾಭಾವ ಸಂಬಂಧವಿದೆ. ತುರುವೇಕೆರೆ ಕ್ಷೇತ್ರದ ಜನತೆ ಜೆ.ಡಿ.ಎಸ್.ನ್ನು ಬೆಂಬಲಕ್ಕಿದ್ದಾರೆ. ಸಂಸತ್ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡಿದ ತುರುವೇಕೆರೆ ಕ್ಷೇತ್ರದ ಜನತೆಗೆ ನಾನು ಆಭಾರಿಯಾಗಿರುತ್ತೇನೆ. ಕುಮಾರಸ್ವಾಮಿ ರಾಜ್ಯ ಪ್ರವಾಸಲದಲಿದ್ದಾರೆ ನಾನು ತುಮಕೂರಿನ ಎಲ್ಲಾ ತಾಲೂಕುಗಳ ಪ್ರವಾಸ ಮಾಡುವ ಅನಿಲ್‌ಕುಮಾರ್ ಪರ ಮತಯಾಚನೆ ಮಾಡುವ ಜವಾಬ್ದಾರಿ ನನ್ನದಾಗಿದೆ ಎಂಧರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರನ್ನು ಪ್ರಧಾನಿ ಮೋದಿಯವರೇ ಅತ್ಯಂತ ಗೌರವದಿಂದ ಕಾಣುತ್ತಾರೆ. ದೇವೇಗೌಡರಿಂದ ಉಪಕಾರ ಪಡೆದ ಕೆ.ಎನ್.ರಾಜಣ್ಣ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಅತ್ಯಂತ ನೋವಿನ ಸಂಗತಿ. ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಡಿ.ಸಿ.ಸಿ. ಬ್ಯಾಂಕ್‌ನಿಂದ ಸಾಲ ಕೊಡಿಸುವುದಾಗಿ ಗಿಮಿಕ್ ಮಾಡುತ್ತಿದ್ದಾರೆ . ಸಾಲವನ್ನು ರಾಜಣ್ಣ ಮನೆಯಿಂಧ ತಂಧು ಕೊಡುತ್ತಾರಾ ಎಂಬುದನ್ನು ಜಿಲ್ಲೆಯ ಜನತೆ ಅರಿಯಬೇಕು ಎಂದರು.
ಅಭ್ಯರ್ಥಿ ಅನಿಲ್‌ಕುಮಾರ್ ಮಾತನಾಡಿ ಮಾಜಿ ಪ್ರಧಾನಿಗಳಾದ ದೇವೇಗೌಢರು ನನ್ನ ಪರವಾಗಿ ಮತಯಾಚನೆ ಮಾಡುತ್ತಿರುವುದು ನನ್ನ ಸುಕೃತ ಎಂದು ಭಾವಿಸಿದ್ದೇನೆ. ಜಿಲ್ಲೆಯ ಮತದಾರ ಬಂಧುಗಳು ನನಗೆ ಮತ ನೀಡಿ ಗೆಲ್ಲಿಸಿ ಸೇವೆ ಮಾಡಲು ಅವಕಾಶ ಕಲ್ಪಸಿಕೊಡಬೇಕೆಂದು ಮನವಿ ಮಾಡಿದರು.
ನಮ್ಮದೇ ಗೆಲುವು ;-
ಶಾಸಕ ಗೌರಿಶಂಕರ್ ಮಾತನಾಡಿ ಸದ್ಯ ಎದುರಾಗಿರುವ ವಿಧಾನಪರಿಷತ್ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಮಾಜಿ ಪ್ರಧಾನಿ ಸೋಲಿಸಿದವ ನಾನು ಎನ್ನುವವರಿಗೆ ಜಿಲ್ಲೆಯ ಮತದಾರ ತಕ್ಕ ಉತ್ತರ ನೀಡಲಿದ್ದಾನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಅನಿಲ್‌ಕುಮಾರ್ ಜಯ ಸಾಧಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಜೆ.ಡಿ.ಎಸ್. ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಗಣ್ಯರುಗಳು ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಡಾ.ಬಾಬಾಸಾಹೇಬ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ರಾಜ್ಯ ಯುವ ಜೆ.ಡಿ.ಎಸ್. ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್, ಜಿಲ್ಲಾಧ್ಯಕ್ಷ ಆಂಜನಪ್ಪ, ಜೆ.ಡಿಎಸ್. ತಾಲೂಕು ಅಧ್ಯಕ್ಷ ಸ್ವಾಮಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಪ್ರುಲ್ಲಾಖಾನ್,ಸಿ.ಎಸ್.ಪುರ ಮೂರ್ತಿ, ಎ.ಬಿ.ಜಗದೀಶ್, ರಾಜೀವ್ ಕೃಷ್ಣಪ್ಪ, ಗ್ರಾ.ಪಂ. ಅದ್ಯಕ್ಷೆ ಬೇಬಿ ತ್ಯಾಗರಾಜ್, ಎ.ಪಿ.ಎಂ.ಸಿ. ಸದಸ್ಯ ವಿಜಯೇಂದ್ರ , ಎಂ.ಎನ್.ಚಂದ್ರೇಗೌಡ, ಬೆಳ್ಳಿಲೋಕೇಶ್, ಲೀಲಾವತಿ ಗಿಡ್ಡಯ್ಯ, ಸೇರಿದಂತೆ ಅನೇಕರು ಹಾಜರಿದ್ದರು.