ಜಿಲ್ಲೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ತುಮಕೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪರವಾದ ಅಲೆ ಇದೆ,ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ, ಎಲ್ಲ ಕಡೆಯೂ ಜೆಡಿಎಸ್ ಗೆ ಬೆಂಬಲ ಸಿಕ್ಕಿದ್ದು,ಜೆಡಿಎಸ್ ಬೆಂಬಲಿತ ಮತ್ತು ಸದಸ್ಯರನ್ನು ಭೇಟಿ ಮಾಡಿ ಮತಯಾಚಿಸಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ಆರು ಸ್ಥಾನದಲ್ಲಿ ಸ್ಪರ್ಧಿಸಿದ್ದು,ಎಲ್ಲ ಸ್ಥಾನದಲ್ಲಿ ಗೆಲುವು ಸಾಧಿಸಲು ಮುಖಂಡರು ಶ್ರಮಿಸುತ್ತಿದ್ದಾರೆ, ತುಮಕೂರು ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದು,ಇಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮುಖಂಡರುಗಳಿಗೆ ಸೂಚಿಸಿರು ವುದಾಗಿ ತಿಳಿಸಿದರು.
ಜೆಡಿಎಸ್ ಮತಗಳಿಂತ ಹೆಚ್ಚಿನ ಮತಗಳನ್ನು ಬೇರೆ ಪಕ್ಷಗಳು ಹೊಂದಿರುವ ಉತ್ತರ ಕರ್ನಾಟಕ ಭಾಗದಲ್ಲಿ ಸ್ಪರ್ಧಿಸಿಲ್ಲ, ಜೆಡಿಎಸ್ ಸ್ಪರ್ಧಿಸಲಿಲ್ಲದ ಕಡೆ ಯಾರಿಗೆ ಮತ ನೀಡುವ ಬಗ್ಗೆ ಕುಮಾರಸ್ವಾಮಿ ಅವರು ಭಾನುವಾರ ತೀರ್ಮಾನ ಕೈಗೊಳ್ಳಲಿದ್ದಾರೆ, ಚುನಾವಣೆಯಲ್ಲಿ ಗೆಲ್ಲಲ್ಲು ಶಕ್ತಿ ಇಲ್ಲದ ಕಡೆ ಅಭ್ಯರ್ಥಿ ನಿಲ್ಲಿಸುವ ಬದಲಿಗೆ ಶಕ್ತಿ ಇರುವ ಕಡೆ ಪೈಪೋಟಿ ನೀಡಲು ತೀರ್ಮಾನಿಸಿರುವುದಾಗಿ ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ,ಈ ಚುನಾವಣೆಯಲ್ಲಿ ಗೆಲ್ಲಲ್ಲು ಹೋರಾಟ ಮಾಡುತ್ತಿದ್ದೇನೆ,ಪಕ್ಷ ಸಂಘಟಿಸುವ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಗೆ ತಯಾರಿ ಮಾಡುತ್ತಿದ್ದು,ಅನಿಲ್ ಕುಮಾರ್ ಆಯ್ಕೆ ಮಾಡುವ ಮುಂಚೆಯೇ ಎಲ್ಲ ಮುಖಂಡರೊAದಿಗೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದು,ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಚುನಾವಣೆಯಲ್ಲಿ ಜೆಡಿಎಸ್ ಯಾವ ಟೀಂ ಎನ್ನುವುದು ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ,ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೋಲಿಸಲು ಶ್ರಮ ಹಾಕುತ್ತಿದ್ದು,ಸೋಲಿಸುವ ಮೂಲಕ ಜೆಡಿಎಸ್ ಭದ್ರ ಪಡಿಸುತ್ತೇನೆ,ನಾನು ಎಲ್ಲಿಯೂ ಹೋಗುವುದಿಲ್ಲ ಇಲ್ಲಿಯೇ ಇರುತ್ತೇನೆ ನೋಡೋಣ.ಪ್ರಾದೇಶಿಕ ಪಕ್ಷವನ್ನು ಕೊಲ್ಲಬೇಕು ಅಂತ,ಜೆಡಿಎಸ್ ಶಕ್ತಿಯನ್ನು ಕುಗ್ಗಿಸಲಾಯಿತು,ಪಕ್ಷವನ್ನು ಹಾಳು ಮಾಡಿದರು,139 ಸ್ಥಾನಗಳಲ್ಲಿ ಗೆದ್ದು, ಪ್ರಾದೇಶಿಕ ಸಾಮರ್ಥ್ಯ ಸಾಬೀತುಪಡಿಸಿದ್ದೇನೆ,ಇಂತಹ ಪಕ್ಷ ಹಾಳಾಗಲು ಯಾರು ಕಾರಣ,23ಕ್ಕೆ ಜೆಡಿಎಸ್ ಇರಲ್ಲ ಅಂದವರಿಗೆ ಉತ್ತರ ನೀಡಲು ಪಕ್ಷ ಸಂಘಟಿಸುತ್ತೇನೆ ಎಂದರು.
2019 ರ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ನಾನು ಸೀಟು ಕೇಳಲಿಲ್ಲ,ಕಾಂಗ್ರೆಸ್ ಪಕ್ಷದ ಹಿರಿಯರ ತೀರ್ಮಾನ ದಂತೆ ಕಾಂಗ್ರೆಸ್ ಮುಖಂಡರು ನನ್ನನು ಇಲ್ಲಿಗೆ ಕರೆತಂದು ಸೋಲಿಸಿದರು.ಮಧುಗಿರಿಯಲ್ಲಿ ಭಾಷಣ ಮುಗಿಸಿ ಬಂದು, ರಾಜಣ್ಣ ಮನೆಯಲ್ಲಿ ಸಭೆ ಮಾಡಿದ್ರು, ನಾನೇನು ಮೋಸ ಮಾಡಿದ್ದೆ ರಾಜಣ್ಣನಿಗೆ, ದೊಡ್ಡೇರಿಯಲ್ಲಿ ಅವರನ್ನು ಗೆಲ್ಲಿಸಿದ್ದೆ. ಆದರೆ ನನನ್ನು ಸೋಲಿಸಲು ಏನೇನು ಕುತಂತ್ರ ಮಾಡಿ ನನಗೆ ಅವಮಾನ ಮಾಡಿದರು. ಅಹಿಂದ ಎಲ್ಲಿದೆ. ಒಕ್ಕಲಿಗ, ಲಿಂಗಾಯತ ಎಂದು ನನಗೆ ಅವಮಾನ ಮಾಡಿದರು, ಎಲ್ಲ ಟೀಕೆ ಸಹಿಸಿಕೊಂಡು ಇದ್ದೇನೆ.ನನ್ನ ತಾಳ್ಮೆಗೂ ಮಿತಿ ಇದೆ ಎಂದು ದೇವೇಗೌಡರು ಅಕ್ರೋಶ ವ್ಯಕ್ತಪಡಿಸಿದರು.
ಇಂದಿನ ಎಂ.ಎಲ್.ಸಿ ಚುನಾವಣೆಯೇ ಅಲ್ಲ ಮುಂದಿನ 2023 ರ ವಿಧಾನಸಭೆ ಮತ್ಚುತು 2024 ರ ಲೋಕಸಭಾ ನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿಯೇ ಇರುತ್ತೇನೆ, ಹೋರಾಟ ಮಾಡುತ್ತೇನೆ ಎಲ್ಲರು ಸಹಕಾರ ನೀಡಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಅನಿಲ್ ಕುಮಾರ್,ಶಾಸಕ ಗೌರಿಶಂಕರ್,ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಾ ಧ್ಯಕ್ಷ ಟಿ.ಆರ್. ನಾಗರಾಜು,ತಾಲೂಕು ಅಧ್ಯಕ್ಷ ರಾಮ ಚಂದ್ರಯ್ಯ, ಮುಖಂಡರಾದ ಸಿರಾಕ್ ರವೀಶ್, ಹಾಲ ನೂರು ಅನಂತಕುಮಾರ್, ಹಿರೇಹಳ್ಳಿ ಮಹೇಶ್, ಪಾಲ ನೇತ್ರಯ್ಯ, ಹೆಗ್ಗೆರೆ ಆಜಂ, ರೆಹಮಾನ್ ಇತರರಿದ್ದರು.