
ತುಮಕೂರು : ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನವೆಂಬರ್ 13 ರ ಶನಿವಾರ ಬೆಳಗ್ಗೆ 10 ಗಂಟೆಗೆ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ಆಚರಿಸಲು ಭಾನುವಾರ ನಡೆದ ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ನಗರದ ಬಾಳನಕಟ್ಟೆಯಲ್ಲಿರುವ ಹರ್ತಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಒನಕೆ ಓಬವ್ವ ಜಯಂತಿ ಆಚರಣೆ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿದ್ದ ಛಲವಾದಿ ಕಲೆ ಮತ್ತು ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳಾದ ಹೆಚ್.ಬಿ.ಪುಟ್ಟಬೋರಯ್ಯ,ಲೇಪಾಕ್ಷಯ್ಯ,ಎಸ್.ರಾಜಣ್ಣ,ಎನ್.ಜಗನ್ನಾಥ್,ರುದ್ರೇಶಯ್ಯ, ಸಿ.ಭಾನುಪ್ರಕಾಶ್,ಹೆಚ್.ಎಸ್.ಪರಮೇಶ್,ಶಿವಕುಮಾರ್,ಗುರುಪ್ರಸಾದ್,ಟಿ.ಆರ್.ನಾಗೇಶ್,ರಾಜಯ್ಯ,ವಿರೂಪಾಕ್ಷಯ್ಯ,ದೊಡ್ಡಹನುಮಂತಪ್ಪ,ಸಂಜೀವಪ್ಪ,ರಾಮಚಂದ್ರಪ್ಪ,ಡಿ.ಎನ್.ಭೈರೇಶ್,ಮಂಜಪ್ಪ,ಡಿ.ಎನ್.ರವಿ,ಗಡ್ಡದರಂಗನಾಥ್,ಎನ್.ಕೆ.ನಿಧಿಕುಮಾರ್,ಸಿದ್ದಲಿಂಗಯ್ಯ,ಜಿ.ಆರ್.ಗಿರೀಶ್,ಛಲವಾದಿ ಶೇಖರ್,ಟಿ.ಎನ್.ಪುಟ್ಟರಾಜು,ಯೋಗೇಂದ್ರಕುಮಾರ್,ಜಿ.ಆರ್.ಸುರೇಶ್, ಗೋವಿಂದರಾಜು, ಐ.ಆರ್. ವಿಶ್ವನಾಥ್, ಮಹೇಶ್‌ಕುಮಾರ್, ಟಿ.ಶಿವರಾಜು, ಮಹೇಶ್‌ಕುಮಾರ್,ಶಂಕರ್, ಎಸ್.ಕುಮಾರ್, ನರಸಿಂಹಮೂರ್ತಿ ಡಿ.ಆರ್, ಟಿ.ಗಿರಿಯಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ಹೈದರಾಲಿ ಸೈನ್ಯಕ್ಕೆ ಸಿಂಹಸ್ವಪ್ನವಾಗಿ ಕಾಡಿದ ಒನಕೆ ಓಬವ್ವನ ಯಶೋಗಾಥೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,ಹೇಗಾದರೂ ಮಾಡಿ ಚಿತ್ರದುರ್ಗದ ಕೋಟೆಯನ್ನು ತಮ್ಮ ವಶಕ್ಕೆ ಪಡೆಯಬೇಕೆಂದು ಹುನ್ನಾರ ನಡೆಸಿ,ಕಳ್ಳಗಿಂಡಿಯ ಮೂಲಕ ಕೋಟೆ ಪ್ರವೇಶಿಸಿದ ಹೈದರಾಲಿಯ ಸೈನಿಕರನ್ನು ತನ್ನ ಚಾಕಚಕ್ಯತೆ ಮತ್ತು ಧೈರ್ಯದಿಂದ ಹೊಡೆದಿರುಳಿಸಿ,ಕೋಟೆಯನ್ನು ಕಾಪಾಡಿದ ವೀರ ವನಿತೆ ಒನಕೆ ಓಬವ್ವ ಛಲವಾದಿ ಸಮುದಾಯದ ಮಹಿಳೆ ಯಾಗಿದ್ದು,ಈಕೆಯ ಧೈರ್ಯ ಮತ್ತು ಸಾಹಸವನ್ನು ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ನವೆಂಬರ್ 13 ನೇ ಶನಿವಾರ ದಂದು ಒನಕೆ ಓಬವ್ವ ಜಯಂತಿ ಆಚರಿಸಲು ನಿರ್ಧರಿಸಲಾಯಿತು.
ಈ ವೇಳೆ ಸಮಾಜದ ಗಣ್ಯರಾದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಸಿವಿಲ್ ಸೇವೆಗೆ ಮೊದಲ ಬಾರಿಗೆ ಆಯ್ಕೆಯಾಗಿ,ನಿವೃತ್ತರಾಗಿರುವ ಡಾ.ಕೆ.ಶಿವರಾಮ್,ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್.ಛಲವಾದಿ ಸೇರಿದಂತೆ ಇತರೆ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು.
ಇದೇ ವೇಳೆ ಛಲವಾದಿ ಸಮುದಾಯದಲ್ಲಿ ಹುಟ್ಟಿ,ಕಲೆ,ಸಾಂಸ್ಕೃತಿಕ,ಶೈಕ್ಷಣಿಕ,ಹೋರಾಟ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಗುರುತಿಸಿ,ಒನಕೆ ಓಬವ್ವ ಪ್ರಶಸ್ತಿ ನೀಡಿ ಗೌರವಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಒನಕೆ ಓಬವ್ವ ಕುಟುಂಬದ ವಂಶಸ್ಥರನ್ನು ಆಹ್ವಾನಿಸಿ ಗೌರವಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಛಲವಾದಿ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ನಾಡಿನ ವೀರ ವನಿತೆಗೆ ಗೌರವ ಸಲ್ಲಿಸುವಂತೆ ಹೆಚ್ಚಿನ ಪ್ರಚಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.