ತುಮಕೂರು

ಆದಿಜಾಂಬವ ಅಭಿವೃಧ್ದಿ ನಿಗಮದಿಂದ ಕುಟುಂಬದ ಜೀವನೋಪಾಯಕ್ಕೆ ಸಾಕ್ಷಿಯಾದ ಸಮೃಧ್ದಿ ಯೋಜನೆ : ಟಿ.ಕುಮಾರ್

ತುಮಕೂರು : ಕರ್ನಾಟಕ ಆದಿಜಾಂಬವ ಅಭಿವೃಧ್ದಿ ನಿಗಮದಿಂದ ಸಿದ್ದರಾಜು ಬಿನ್ ಕೆಂಪಯ್ಯ, ತುಮಕೂರು ಜಿಲ್ಲೆ ಇವರಿಗೆ ಸಮೃಧ್ದಿ ಯೋಜನೆಯಡಿ ಕೆ.ಎಂ.ಎಫ್.ಇವರ ಸಹಯೋಗದೊಂದಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಟಿ.ಕುಮಾರ್ ಇವರು (ನಂದಿನಿ ಮಿಲ್ಕ್ ಪಾರ್ಲರ್) ಮಳಿಗೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆದಿಜಾಂಬವ ಅಭಿವೃಧ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಡಿ.ಜಯರಾಮಣ್ಣ ಹಾಗೂ ನಿಗಮದ ತಾಲ್ಲೂಕು ಅಭಿವೃಧ್ದಿ ಅಧಿಕಾರಿಗಳು ರಾಜಶೇಖರ್, ಮಧುಸೂಧನ್ ಹಾಗೂ ಮಲ್ಲೇಶ್ ಉಪಸ್ಥಿತರಿದ್ದರು.

ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಸಮೃಧ್ದಿ ಯೋಜನೆಯು ಕುಟುಂಬದ ನೆಮ್ಮದಿ ಜೀವನಕ್ಕೆ ಸಾಕ್ಷಿಯಾಗಿದೆ. ನಿಗಮವು ಪ್ರಾಂಚೈಸಿಗಳ ಜೊತೆಗೆ ಕರಾರು ಒಪ್ಪಂದ ಮಾಡಿಕೊಂಡು ಈ ಘಟಕವನ್ನು ನವೀನ ರೀತಿಯಲ್ಲಿ ನಿರ್ವಹಿಸಿ ಫಲಾನುಭವಿಯ ವಶಕ್ಕೆ ಒಪ್ಪಿಸುತ್ತದೆ. ಫಲಾನುಭವಿಯು ಈ ಸದುಪಯೋಗವನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ನಂತರ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮಾತನಾಡುತ್ತಾ ಕೆ.ಎಂ.ಎಫ್.ಸಂಸ್ಥೆಯು ಉತ್ತಮ ಗುಣಮಟ್ಟ ಹಾಗೂ ಜನರಿಗೆ ಮೆಚ್ಚುಗೆಯಾದ ರುಚಿಯುಳ್ಳ ಸ್ವಾದಭರಿತವಾದ ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಆರ್ಥಿಕ ಪರಿಸ್ಥಿತಿಯಲ್ಲಿ ಫಲಾನುಭವಿಯು ಈ ಮಳಿಗೆಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡು ನೆಮ್ಮದಿ ಕುಟುಂಬ ಜೀವನ ನಡೆಸಬಹುದಾಗಿರುತ್ತದೆ. ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮಳಿಗೆಯನ್ನು ಉದ್ಘಾಟಿಸಲು ಆಗಮಿಸಿದ ವ್ಯವಸ್ಥಾಪಕ ನಿರ್ದೇಶಕರಾದ ಟಿ.ಕುಮಾರ್ ಇವರನ್ನು ಅಧಿಕಾರಿಗಳು ಹಾಗೂ ಫಲಾನುಭವಿಗಳು ಸನ್ಮಾಸಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker