ಪಾವಗಡ : ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಂಘಟನೆಗಳ ಪಟ್ಟು
ಪಾವಗಡ : ಗಡಿನಾಡು ಪಾವಗಡ ತಾಲೂಕಿನಲ್ಲಿ ಕೊವಿಡ್ ಹಿನ್ನೆಲೆಯಲ್ಲಿ ಕಳೆದಾ ಎರಡು ವರ್ಷಗಳಿಂದ ಸರಳ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದು ಈ ವರ್ಷ ಅದ್ದೂರಿ ರಾಜ್ಯೋತ್ಸವ ಆಚರಣೆ ಮಾಡುವಂತೆ ಸಂಘ ಸಂಸ್ಥೆಗಳು ಪಟ್ಟು ಹಿಡಿದ ಘಟನೆ ನಡೆಯಿತು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪೂರ್ವ ಬಾವಿ ಸಭೆಯಲ್ಲಿ ತಹಶೀಲ್ದಾರ್ ಕೆ.ಆರ್.ನಾಗರಾಜು ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು, ತಹಶೀಲ್ದಾರ್‌ರವರು ಸರಕಾರದ ಹಾಗೂ ಜಿಲ್ಲಾಧಿಕಾರಿಗಳ ನೀಡಿರುವ ಮಾರ್ಗ ಸೂಚಿಯನ್ನ ಸಭೆಗೆ ವಿವರಿಸಿದ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪಾವಗಡದ ಸುತ್ತಲೂ ಆಂದ್ರಪ್ರದೇಶ ಸುತ್ತುವರೆದಿರುವ ಕಾರಣ ಇಲ್ಲಿ ಪ್ರತಿ ವರ್ಷವೂ ರಾಜ್ಯೋತ್ಸವವನ್ನ ಅದ್ದೂರಿಯಾಗಿ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾದ್ಯಕ್ಷರಾದ ಅಮೀರ್ ಹಾಗೂ ಅದ್ಯಕ್ಷರಾದ ಲಕ್ಷಿö್ಮನಾರಾಯಣ ಜಯ ಕರ್ನಾಟಕ ವೇದಿಕೆಯ ತಾ.ಅದ್ಯಕ್ಷರಾದ ಗೋವರ್ದನ್, ವಾಲ್ಮೀಕಿ ಜಾಗೃತಿ ವೇದಿಕೆಯ ಅದ್ಯಕ್ಷರಾದ ಲೋಕೇಶ್ ಪಾಳ್ಳೇಗಾರ್, ಕನ್ನಮೇಡಿ ಮೇಡಿ ಕೃಷ್ಣಮೂರ್ತಿ ಸಭೆಯಲ್ಲಿ ಒತ್ತಾಯಿಸಿದರು.
ಪ್ರತಿ ವರ್ಷ ನೀಡುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಕೆಲವರಿಗೆ ಮಾತ್ರ ಸೀಮಿತವಾಗಿದ್ದು ಇದರ ಮಾನದಂಡಗಳನ್ನ ಸಭೆಗೆ ತಿಳಿಸುವಂತೆ ಒತ್ತಾಯಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುವುದು ಜನತೆಗೆ ತಿಳಿಯುವುದಿಲ್ಲ, ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಹಲವು ಸೇವೆಗಳಲ್ಲಿ ತೊಡಗಿಕೊಂಡವರಿಗೆ ಇಂದಿಗೂ ತಾ,.ಆಡಳಿತ ಅಂತಹವರನ್ನ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದು ತಾಲೂಕಿನ ದುರಂತವೆಂದಾ ಅವರು ಪ್ರಶಸ್ತಿ ನೀಡುವುದಾರೆ ಪತ್ರಿಕಾ ಪ್ರಕಟಣಿ ನೀಡಿ ಅರ್ಜಿ ಕರೆದು ಅರ್ಹರಿಗೆ ಪ್ರಶಸ್ತಿ ನೀಡಿದಾಗ ಮಾತ್ರ ಪ್ರಶಸ್ತಿಗೆ ಗೌರವ ಸಿಗಲಿದೆ ಎಂದು ಸಭೆಗೆ ತಿಳಿಸಿ ಅಸದಾನ ವ್ಯಕ್ತಪಡಿಸಿದರು.
ಗಡಿನಾಡು ಪಾವಗಡದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ 26 ರಂದು ಮತ್ತೊಮ್ಮೆ ಪೂರ್ವಬಾವಿ ಸಭೆ ಕರೆಯಲಾಗುವುದೆಂದು ತಹಶೀಲ್ದಾರ್ ಕೆ.ಆರ್.ನಾಗರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಅಂತರಗಂಗೆ ಶಂಕರಪ್ಪ, ಕಸಪಾ ತಾ.ಅದ್ಯಕ್ಷರಾದ ಆರ್.ಟಿ.ಖಾನ್, ಸಾಹಿತಿ ಸಣ್ಣನಾಗಪ್ಪ, ಕೇಶವ ಚಂದ್ರದಾಸ್, ಬೇಕರಿ ನಾಗರಾಜು, ನರಸಿ ಪಾಟೀಲ್, ರೈತ ಸಂಘದ ತಾ.ಅದ್ಯಕ್ಷರಾದ ಪೂಜಾರಪ್ಪ, ಅನ್ನಪೂರ್ಣಮ್ಮ, ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.