ಕುಣಿಗಲ್
ಕುರಿ ಮೇಕೆಗಳ ಮೇಲೆ ಚಿರತೆ ದಾಳಿ,ಭಯಭೀತರಾದ ಚನ್ನಯ್ಯನ ಪಾಳ್ಯದ ಜನ
ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಚನ್ನಯ್ಯನ ಪಾಳ್ಯ ಗ್ರಾಮದ ಸಿದ್ದಗಂಗಯ್ಯ ಎಂಬುವವರ ದನದ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ ಎರಡು ಕುರಿಗಳನ್ನು ಶುಕ್ರವಾರ ತಡರಾತ್ರಿ ಚಿರತೆ ರಕ್ತ ಹೀರಿ ಪರಾರಿಯಾಗಿದೆ .
ಚನ್ನಯ್ಯನಪಾಳ್ಯ, ಯಡೇಹಳ್ಳಿ,ಸೀಗೆಪಾಳ್ಯ, ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿ ಕಂಡುಬಂದಿದ್ದು ಗ್ರಾಮದಲ್ಲಿ ಕಳೆದೊಂದು ವಾರದ ಅವಧಿಯಲ್ಲಿ ರೈತರ ಸುಮಾರು ಹತ್ತಕ್ಕೂ ಹೆಚ್ಚು ಕುರಿ ಮೇಕೆ ನಾಯಿಗಳ ಮೇಲೆ ದಾಳಿ ನಡೆಸಿದ್ದು ಚಿರತೆಯು ಗ್ರಾಮಸ್ಥರ ನಿದ್ದೆಗೇಡಿಸಿದೆ ಮರಿಗಳೊಂದಿಗೆ ಬೀಡು ಬಿಟ್ಟಿರುವ ಚಿರತೆಯನ್ನು ಸೆರೆ ಹಿಡಿಯಲು ಹುಲಿಯೂರುದುರ್ಗ ವಲಯ ಅರಣ್ಯಧಿಕಾರಿ ಮಹಮದ್ ಮನ್ಸೂರ್ ಸ್ಥಳ ಪರಿಶೀಲನೆಗೆ ಹೋದಂತ ವೇಳೆ ಚಿರತೆಯ ಉಪಟಳದಿಂದ ಭಯಭೀತರಾದ ಹಲವಾರು ಗ್ರಾಮಸ್ಥರು ಚಿರತೆಯನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ.