ಕುಣಿಗಲ್ : ಪೌರಕಾರ್ಮಿಕರಿಗೆ ಇಷ್ಟರಲ್ಲೇ ಉಚಿತ ಖಾಲಿ ನಿವೇಶನವನ್ನು ಹಂಚಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಎಸ್. ಕೆ. ನಾಗೇಂದ್ರ ಭರವಸೆ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪೌರ ಕಾರ್ಮಿಕರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪುರಸಭಾ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ಒ0ದು ದಿನ ಕೆಲಸ ನಿರ್ವಹಿಸದೇ ಇದ್ದರೆ ಜನರಿಗೆ ಕುಡಿಯಲು ನೀರು ಸಿಗುವುದಿಲ್ಲ ಹಾಗೂ ಕಸ ಕಡ್ಡಿಗಳು ಹೆಚ್ಚಾಗಿ ಪಟ್ಟಣದ ಶುಚಿತ್ವವೇ ಮಾಯವಾಗುತ್ತದೆ
ಬೆಳಿಗ್ಗೆ ಎದ್ದರೆ ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆಯನ್ನು ಮಾಡುವ ಇವರ ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ಶ್ಲಾಘಿಸಿದರು. ಸಭೆಯಲ್ಲಿ ಗೌರವದಿಂದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ರವಿ ಕುಮಾರ್, ಇಂಜಿನಿಯರ್ ಗಳಾದ ಚಂದ್ರಶೇಖರ್, ಸುಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ ಪುರಸಭೆ ಸದಸ್ಯರಾದ ರಂಗಸ್ವಾಮಿ, ಅರುಣ್ ಕುಮಾರ್, ಕೋಟೆ ನಾಗಣ್ಣ, ಉದಯ್ ,ಶ್ರೀನಿವಾಸ್, ದೇವರಾಜ್, ಒಳಗೊಂಡಂತೆ ಪುರಸಭೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.