
ಮಧುಗಿರಿ : ಕೇಂದ್ರ ಸರಕಾರ ಜನ ವಿರೋಧಿ ಕೃಷಿ ಕಾಯ್ದೆಯನ್ನು
ವಿರೋಧಿಸಿ ಸೆ.27 ರಂದು ಭಾರತ್ ಬಂದ್ ಗೆ ಮಧುಗಿರಿ ತಾಲೂಕಿನ
ರೈತ, ದಲಿತ, ಕನ್ನಡ ಪರ ಸಂಘಟನೆಗಳು ಕರೆ ನೀಡಲಾಗಿದೆ ಎಂದು
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ
ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನದ್ದೇಶಿಸಿ
ಮಾತನಾಡಿದ ಅವರು, ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣ,
ಎಪಿಎಂಸಿ ಕಾಯ್ದೆ, ಕೃಷಿ ಕಾಯ್ದೆ ಮಸೂದೆಯನ್ನು ವಾಪಸ್ಸು
ಪಡೆಯಬೇಕು. ಎತ್ತಿನ ಹೊಳೆ ಯೋಜನೆಯ ಭೂ ಸಂತ್ರಸ್ತರಿಗೆ
ಪರಿಹಾರ ನೀಡಬೇಕು, ಬೆಳೆ ವಿಮೆ ಹಣವನ್ನು ರೈತರಿಗೆ ನೀಡಬೇಕು.
ಸಕಾಲಕ್ಕೆ ಮಳೆಯಾಗದೆ ಶೇ 60 ರಷ್ಟು ಬೆಳೆಗಳು ಬಾಡಿಹೋಗಿದ್ದು
ಸರಕಾರ ಮಧುಗಿರಿ ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು
ಘೋಷಣೆ ಮಾಡಿಬೇಕು. ಎಕರೆಗೆ 20 ಸಾವಿರ ಪರಿಹಾರ ನೀಡಬೇಕು.
ಪಡಿತರ ಅಕ್ಕಿ, ರಾಗಿಯನ್ನು ಮುಂದಿನ ವರ್ಷದ ವರೆಗೂ ಇದೆ ಪ್ರಮಾ
ಣದಲ್ಲಿ ವಿತರಿಸಬೇಕು. ಭೂ ರಹಿತ ಬಡವರಿಗೆ ಬಗರ್ ಹುಕುಂ ಸಮಿತಿ
ತುರ್ತಾಗಿ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು
ರೈತ ಸಂಘದ ದೊಡ್ಡಮಾಳಯ್ಯ, ಭೂಮಿಹೋರಾಟ ಸಮಿತಿಯ
ಹಂದ್ರಾಳು ನಾಗಭೂಷಣ್, ಶೂದ್ರ ಸೇನೆಯ ಟಿ.ಎಚ್. ದಿಲೀಪ್,
ಅಂಗನವಾಡಿ ಕಾರ್ಯಕರ್ತೆಯರ ಸಂಘದ ಎಸ್.ಡಿ. ಪಾರ್ವತಮ್ಮ
ಇದ್ದರು.