ಕೊರಟಗೆರೆ : ಕೇಂದ್ರ ಮತ್ತು ರಾಜ್ಯ ಸ
ರ್ಕಾರಗಳು ತಮ್ಮ ಸ್ವಾರ್ಥಕ್ಕೆ ರೈತರನ್ನು
ಬಲಿಕೊಡುತ್ತವೆ ಎನ್ನುವುದಕ್ಕೆ ಕೊರಟಗೆರೆ
ಎ.ಪಿ.ಎಂ.ಸಿ.ಯನ್ನು ತುಮಕೂರಿಗೆ ಮರು
ವಿಲೀನ ಮಾಡಿರುವದೇ ಸಾಕ್ಷಿಎಂದು ಕರ್ನಾ
ಟಕ ರಾಜ್ಯರೈತ ಸಂಘದ ಜಿಲ್ಲಾ ಪ್ರದಾನ
ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾ
ಲೂಕು ರೈತರ ಮತ್ತು ವಿವಿಧ ಸಂಘಟನೆ
ಗಳ ಅದ್ಯಕ್ಷರು ಪದಾಧಿಕಾರಿಗಳ ಸಭೆ ನಡೆಸಿ
ಪರ್ತಕತ್ರರೊಂದಿಗೆ ಮಾತನಾಡಿ ಅಧಿ ಕಾರ
ವಿಕೇಂದ್ರಿಕರಣದ ಕಾಲದಲ್ಲಿ ರಾಜ್ಯ ಸರ್ಕಾರ
ಕೊರಟಗೆರೆ ಎ.ಪಿ.ಎಂ.ಸಿಯನ್ನು ಮತ್ತೆ
ತುಮಕೂರಿಗೆ ವಿಲಿನಗೊಳಿಸಿರುವುದು ದುರಾ
ಲೋಚನೆಯಿಂದ ಕೂಡಿದ್ದು ಕೂಡಲೇ ಮತ್ತೆ
ಕೊರಟಗೆರೆ ತಾಲ್ಲೂಕಿಗೆ ಎ.ಪಿಎಂ.ಸಿ.ಯನ್ನು
ವಾಪಸ್ ನೀಡಬೇಕು ಆಗ ಈ ಭಾಗದ
ರೈತರಿಗೆ ಅನುಕೂಲವಾಗುತ್ತದೆ ಎಂದರು.
ಎರಡು ಸರ್ಕಾರಗಳು ವಿದ್ಯುತ್ ಖಾಸಗಿಕರಣ
ನಿಲ್ಲಿಸಬೇಕು, ರೈತರಿಗೆ ಬೆಳ್ಳಿಗೆ ವ್ಯವಸಾಯಕ್ಕೆ
ನೀರಾವರಿಗೆ ವಿದ್ಯುತ್ ನೀಡಬೇಕು,ಎತ್ತಿನ
ಹೊಳೆಯಲ್ಲಿ ಯೋಜನೆ ಕಾಮಗಾರಿರಲ್ಲಿ
ಭೂಮಿ ಕಳೆದುಕೋಂಡ ರೈತರಿಗೆ ಕೂಡಲೇ
ಪರಿಹಾರ ನೀಡಬೇಕು, ರೈತರಿಗೆ 2020-
21 ಸಾಲಿನ ಬೆಳೆ ಪರಿಹಾರ ವಿಮಾ ಕಂ
ಪನಿಗಳಿಂದ ಕೊಡಿಸಬೇಕು 2021-22
ಸಾಲಿನಲ್ಲಿ ಹಿಂಗಾರು ದುರ್ಬಲವಾಗಿದ್ದು
ಬೆಳೆ ನಷ್ಟದಿಂದ ಕಂಗಲಾಗಿರುವ ರೈತನಿಗೆ
ಎಕರೆಗೆ 25000 ಪರಹಾರ ನೀಡಬೇಕು,
ಹಲವು ವರ್ಷಗಳಿಂದ ಭೂಮಿಯಿಲ್ಲದೆ ಸ
ರ್ಕಾರಿ ಭೂಮಿಯಲ್ಲಿ ಹುಳುಮೆ ಮಾಡುತ್ತಿ
ರುವವರಿಗೆ ಕೂಡಲೇ ಬಗರ್ ಹುಕುಂ ನಲ್ಲಿ
ಸಾಗುವಳಿ ನೀಡಬೇಕು, ನರೇಗಾಯೋಜನೆ
ಯಂತ್ರಗಳಿಂದ ಕಾಮಗಾರಿ ಮಾಡಿ ಸರ್ಕಾರದ
ಹಣ ಲೂಟಿ ಮಾಡುವಯೋಜನೆಯಾಗ್ಗಿದ್ದು
,ಕೂಡಲೇ ಈ ಅಕ್ರಮ ನಿಲ್ಲಿಸಿ ಕೂಲಿ ಕಾರ್ಮಿ
ಕರಿಗೆ ಕೂಲಿ ಸಿಗುವಂತ್ತಾಗಬೇಕು ಈಎಲ್ಲಾ
ಒತ್ತಾಯಗಳೊಂದಗೆ ಸೆಪ್ಟಂಬರ್ 27 ನೇ
ತಾರೀಖು ವಿವಿದ ಸಂಘಟನೆಗಳೊಂದಿಗೆ
ತಾಲೂಕಿನಲ್ಲಿ ಪ್ರತಿಭಟನೆ ಮಾಡಲಿದೆಎಂದರು.
ಜಿಲ್ಲಾ ಸಿಐಟಿಯು ಅಧ್ಯಕ್ಷ ಬಿ,ಉಮೇಶ್
ಮಾತನಾಡಿ ದೇಶದ ದೆಹಲಿ ಗಡಿಯಲ್ಲಿ
ರೈತರು ಹಲವು ತಿಂಗಳುಗಳಿಂದ ಹೋರಾಟ
ಮಾಡುತ್ತಿದ್ದಾರೆ, ರೈತ ವಿರೋಧಿ ಕೃಷಿ ಕಾಯ್ದೆ
ಹಿಂಪಡಿಯುವಂತೆ ಒತ್ತಾಯಿಸಿ ಸೆಪ್ಟಂಬರ್
27 ರಂದು ರಾಜ್ಯ ಸಂಯುಕ್ತ ಹೋರಾಟ
ಸಂಘ ರೈತ, ದಲಿತ, ಕಾರ್ಮಿಕ, ಅಂಗ
ನವಾಡಿ, ಆಶಾ, ಬಿಸಿಯೂಟ, ಸೇರಿದಂತೆ
ಎಲ್ಲರೂ ಸೇರಿ ಜನಪರ ಹೋರಾಟವನ್ನು
ಮಾಡಲಾಗುವುದು ಎಂದರು.
ಗೋಷ್ಟಿಯಲ್ಲಿ ತಾಲೂಕು ಅಧ್ಯಕ್ಷ ರಂಗಹ
ನುಮಯ್ಯ, ಕಾರ್ಯಾಧ್ಯಕ್ಷ ನಯಾಜ್
ಅಹಮದ್, ಬಹುಜನ ಪಕ್ಷದ ತಾಲ್ಲೂಕು
ಅಧ್ಯಕ್ಷ ಜಟ್ಟಿ ಅಗ್ರಹಾರ ನಾಗರಾಜು, ವಿವಿಧ
ಸಂಘಟನೆಗಳ ಶಬ್ಬೀರ್‌ಪಾಷಾ, ವನಜಾಕ್ಷಿ,
ಶಾಹಿಸ್ತಾ ಪರ್ಮಿನ್, ಆದಿಲಕ್ಷಿ, ನಾಗರತ್ನಮ್ಮ,
ಗಂಗಮ್ಮ, ರಂಗಹನುಮಯ್ಯ ಮಾರುತಿ
ಮುಡ್ಲಪ್ಪ, ಶಿವಕುಮಾರ್, ದೇವರಾಜು ಸೇರಿ
ದಂತೆ ಇತರರಿದ್ದರು.