ಗುಬ್ಬಿ: ನರೇಗಾ ಯೋಜನೆಯ ಅವ್ಯವಹಾರ ಬಗ್ಗೆ
ಆರೋಪ ಮಾಡಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ
ಅವರು ಸಂಬಂಧಿಸಿದ ಅಧಿಕಾರಿಗಳ ವಿರುದ್ದ ದೂರು
ಸಲ್ಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸುವ ಬದಲು
16 ಗ್ರಾಮ ಪ್ರತಿನಿಧಿಸುವ ಗ್ರಾಮ ಪಂಚಾಯಿತಿ ಕ
ಚೇರಿಗೆ ಬೀಗ ಜಡಿದಿದ್ದು ಖಂಡನೀಯ ಹಾಗೂ
ಅವರ ಘನತೆಗೆ ತಕ್ಕದಲ್ಲ ಎಂದು ಮುಖಂಡ
ವಸಂತಕುಮಾರ್ ಟೀಕಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚಂಗಾವಿ
ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸುದ್ದಿಗಾರ
ರೊಂದಿಗೆ ಮಾತನಾಡಿದ ಅವರು ಮಾಜಿ ಶಾಸಕರು
ಭ್ರಷ್ಟಾ ಚಾರ ವಿರುದ್ದ ಕಾನೂನಾತ್ಮಕ ಹೋರಾಟ
ನಡೆಸಬಹುದಿತ್ತು. ನರೇಗಾ ಯೋಜನೆಯಲ್ಲಿ 45
ಸಾವಿರ ರೂಗಳ ಅವ್ಯವಹಾರದ ಪ್ರಸ್ತಾಪ ಮಾಡಿದ
ನಂತರದಲ್ಲಿ ಮೇಲಾಧಿಕಾರಿಗಳಿಗೆ ಲಿಖಿತ ದೂರು
ನೀಡಿ ತನಿಖೆಗೆ ಒಳಪಡಿಸಬಹುದಿತ್ತು ಎಂದರು.
ಸೂಕ್ತ ದಾಖಲೆ ಇದ್ದಲ್ಲಿ ಇಲಾಖೆಯ ಮುಖ್ಯಸ್ಥರಿಗೆ
ದೂರು ನೀಡುವುದು ಬಿಟ್ಟು ಪ್ರತಿಭಟನೆ ನಡೆಸಿದ್ದ
ಲ್ಲದೇ ಕಚೇರಿಗೆ ಬೀಗ ಹಾಕವುದು ಸರಿಯಲ್ಲ.
ಇಡೀ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರಿಗೂ
ಅಗೌರವ ತರುವ ವಿಚಾರ ಇದಾಗಿದೆ. ಇಲ್ಲಿ ಮಾಜಿ
ಶಾಸಕರ ಬೆಂಬಲಿಗರು ಸಹ ಇದ್ದಾರೆ. ಅವರಿಗೂ
ಈ ಘಟನೆ ತಲೆ ತಗ್ಗಿಸುವ ಹಂತಕ್ಕೆ ತೆಗೆದುಕೊಂಡು
ಹೋಗುತ್ತದೆ. ಈ ನಿಟ್ಟಿನಲ್ಲಿ ಪಂಚಾಯಿತಿಯ
ಗೌರವವನ್ನು ಉಳಿಸಿ ಬೆಳೆಸುವ ಕೆಲಸ ಪಕ್ಷಾತೀತ
ಮತ್ತು ಜಾತ್ಯಾತೀತವಾಗಿ ಸಾಗಬೇಕು ಎಂದ
ಅವರು ಕಚೇರಿಗೆ ಬೀಗ ಹಾಕುವ ಮುನ್ನ
ಯೋಚಿಸಿ ಮುಂದಿನ ಕ್ರಮವಹಿಸಬೇಕಿತ್ತು. ಮಾಜಿ
ಶಾಸಕ ಕೃಷ್ಣಪ್ಪ ಅವರು ತಮ್ಮ ಘನತೆಗೆ ತಕ್ಕನಾಗಿ
ನಡೆದುಕೊಳ್ಳಬೇಕಿತ್ತು ಎಂದರು.
ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ನಾರಾಯಣ್ ಮಾತ
ನಾಡಿ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ
ಗಳಿAದ ಯಾವುದೇ ಭ್ರಷ್ಟಾಚಾರವಾಗಿದ್ದರೂ ಕಾ
ನೂನು ಕ್ರಮಕ್ಕೆ ಆಗ್ರಹಿಸುತ್ತೇವೆ. ಲಿಖಿತ ದೂರು
ನೀಡಿದ್ದಲ್ಲಿ ಇಲಾಖಾಧಿಕಾರಿಗಳಿಂದ ಸೂಕ್ತ ತನಿಖೆ
ನಡೆಸಬಹುದಿತ್ತು. ಆದರೆ ಅವ್ಯವಹಾರದ ಬಗ್ಗೆ
ಎಂದೂ ಪ್ರಶ್ನಿಸದೆ ಏಕಾಏಕಿ ಕಚೇರಿ ಬೀಗ ಜಡಿದು
ಪ್ರತಿಭಟಿಸಿದ್ದು ಇಡೀ ಗ್ರಾಮ ಪಂಚಾಯಿತಿಗೆ ಅಪ
ಮಾನ ಎನಿಸುತ್ತದೆ. ನರೇಗಾದಲ್ಲಿ ಅವ್ಯವಹಾರ
ನಡೆದಿದ್ದಲ್ಲಿ ಸೂಕ್ತ ದಾಖಲೆ ಜತೆ ಕಾನೂನು
ಕ್ರಮವಹಿಸಲು ಇಲಾಖೆಯ ಮೇಲಾಧಿಕಾರಿಗಳು
ಇದ್ದಾರೆ. ರಾಜಕಾರಣ ಮುಂದಿಟ್ಟುಕೊAಡು ಕಚೇ
ರಿಗೆ ಬೀಗ ಹಾಕುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ
ಅವರ ಬೆಂಬಲಿಗರು ಮತ್ತು ಕೆಲ ಸದಸ್ಯರು
ಸುದ್ದಿಗೋಷ್ಠಿಯಲ್ಲೇ ಪ್ರಶ್ನಿಸಿ ಮಾತಿನ ಚಕಮಕಿ
ನಡೆಸಿದರು. ಕಚೇರಿಗೆ ಬೀಗ ಹಾಕಿದ್ದು ಗ್ರಾಮಸ್ಥರು.
ಅವ್ಯವಹಾರ ಪ್ರಶ್ನಿಸಿ ಮತದಾರರೇ ಮಾಜಿ
ಶಾಸಕರಕೃಷ್ಣಪ್ಪ ಅವರ ನೇತೃತ್ವದಲ್ಲಿ ಪ್ರತಿಭಟಿಸಿದ್ದಾರೆ.
ಸದಸ್ಯರನ್ನು ದೂರಬೇಡಿ ಎಂದು ಕಿಡಿಕಾರಿದರು.
ಸ್ಥಳದಲ್ಲಿ ಗ್ರಾಪಂ ಉಪಾಧ್ಯಕ್ಷೆ ಪದ್ಮ ಸೋಮ
ಶೇಖರ್, ಸದಸ್ಯರಾದ ಶಾಂತಮ್ಮ, ಮುನಿವೆಂಕಟಪ್ಪ,
ದೇವರಾಜು, ಮೀನಾಕ್ಷಿ, ಲತಾ, ವಾಹಿದಬಾನು,
ಕೃಷ್ಣಪ್ಪ, ಮೂರ್ತಿ, ನಾರಾಯಣ್ ಇತರರಿದ್ದರು.