ಚಿಕ್ಕನಾಯಕನಹಳ್ಳಿಜಿಲ್ಲೆತುಮಕೂರು
ಚಿರತೆ ದಾಳಿ : ರೈತನಿಗೆ ಗಂಭೀರ ಗಾಯ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ರಾಮನಹಳ್ಳಿ
ಗ್ರಾಮದಲ್ಲಿ ಪುಟ್ಟಯ್ಯ (54) ಎಂಬ ವ್ಯಕ್ತಿ
ಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ.
ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದು ಪ್ರಾ
ಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಸಂಜೆ 4.30ರ ಸುಮಾರಿಗೆ
ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ
ದಾಳಿ ಮಾಡಿದೆ. ಪುಟ್ಟಯ್ಯ ಎಂಬುವರ ಕಣ್ಣಿನ
ಮೇಲ್ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಇದನ್ನು
ನೋಡಿದ ಕುರಿಗಾಹಿಗಳು ಜೋರಾಗಿ ಕಿರುಚಿ
ದ್ದಾರೆ. ಗಾಬರಿಗೊಂಡ ಚಿರತೆ ಪುಟ್ಟಯ್ಯನನ್ನು
ಬಿಟ್ಟು ಕಾಲ್ಕಿತ್ತಿದೆ. ತಕ್ಷಣ ಅಂಬುಲೆನ್ಸ್ ಸಹಾಯ
ದಿಂದ ತಾಲ್ಲೂಕು ಆಸ್ಪತ್ರೆಗೆ ತೆರಳಿ ಪ್ರಥಮ
ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ
ದಾಖಲಾಗಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿ ರಾಕೇಶ್ ಹಾಗು ಇಲಾಖೆ
ಸಿಬ್ಬಂದಿ ಭೇಟಿ ನೀಡಿ ಪರೀಶೀಲನೆ ನೆಡೆಸಿದ್ದಾರೆ.
ಕೆಲ ದಿನಗಳಿಂದ ಚಿರತೆ ಕಾಣಿಸಿಕೊಂಡು ಗ್ರಾಮ
ದಲ್ಲಿ ಆತಂಕ ಸೃಷ್ಟಿಸಿತ್ತು. ಚಿರತೆ ಸೆರೆಗೆ ಗ್ರಾಮಸ್ಥರು
ಆಗ್ರಹಿಸಿದ್ದಾರೆ