ಗುಬ್ಬಿ : ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಜೀವಗಳಿಗೆ
ನೆರವಾಗಲು ರೂಪಿಸಿರುವ ಸಾಮಾಜಿಕ ಭದ್ರತಾ
ಯೋಜನೆ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದು
ಸರ್ಕಾರದ ಬೊಕ್ಕಸದ ಲಕ್ಷಾಂತರ ಹಣ ಗುಳುಂ
ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುಬ್ಬಿ ತಾಲ್ಲೂಕಿನ ಕಡಬಾ ಹೋಬಳಿ ಉಪ ತಹಶೀಲ್ದಾರ್
ಕಾರ್ಯಾಲಯದ ನಾಡಕಚೇರಿಯ ವ್ಯಾಪ್ತಿಯಲ್ಲಿ ಅ
ನರ್ಹ ಫಲಾನುಭವಿಗಳು ಅರ್ಹರಾಗಲು ವಯಸ್ಸಾದ
ರೀತಿಯ ಭಾವಚಿತ್ರ ಮತ್ತು ಆಧಾರ್ ಕಾರ್ಡ್ ನಲ್ಲಿ ಜನ್ಮ
ದಿನಾಂಕ ಅಳಿಸಿ ಹಣದಾಹಕ್ಕೆ ಕೆಲ ವೈದ್ಯರು
ನೀಡುವ ಸುಳ್ಳು ವಯಸ್ಸಿನ ದೃಡೀಕರಣ ದಾ
ಖಲೆ ಸೃಷ್ಟಿಸಿ ಸಂಧ್ಯಾ ಸುರಕ್ಷಾ ಯೋಜನೆ
ಹೆಸರಿನಲ್ಲಿ ತಿಂಗಳ ಮಾಸಾಶನ ಪಡೆದಿರುವ
ಅಕ್ರಮಗಳು ಸುವರ್ಣಪ್ರಗತಿಗೆ ಪತ್ರಿಕೆಗೆ ದಾಖಲೆ ಸ
ಮೇತ ಸಿಕ್ಕಿಬಿದ್ದಿದೆ.
ಬಡವರ ಬದುಕು ಗಾಳಿಗೆ ಸಿಕ್ಕ ತರಗೆಲೆ:
ಸರ್ಕಾರವು ಅಸಹಾಯಕ ಅಶಕ್ತ ವ್ಯಕ್ತಿಗಳ
ಹಾಗೂ ನಿರ್ಗತಿಕರಿಗಾಗಿ ಅನೇಕ ಸಾಮಾಜಿಕ ಭದ್ರತಾ
ಮತ್ತು ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು
ಆದರೆ ಇಲ್ಲಿನ ಅಧಿಕಾರಿಗಳು ಹಣದ ಆಮಿಷಕ್ಕೆ ಒಳ
ಗಾಗಿ ಬಡವರಿಗಾಗಿಯೇ ರೂಪಿಸಲ್ಪಟ್ಟ ಬಹುದೊಡ್ಡ
ಯೋಜನೆಯನ್ನು ದಿಕ್ಕು ತಪ್ಪಿಸಿ ಅನರ್ಹರ ಹಾಗೂ
ಸ್ಥಿತಿವಂತರ ಪಾಲಾಗುವಂತೆ ಮಾಡಿರುವುದು ಬೇಸರದ
ಸಂಗತಿಯಾಗಿದೆ.
ಸರ್ಕಾರಿ ಯೋಜನೆಗಳು ದುರುಪಯೋಗ
ಸಂಧ್ಯಾ ಸು ರಕ್ಷಾ ಯೋಜನೆಯ ವಯೋಮಿತಿ 65
ವರ್ಷ ತುಂಬಿದ ಹಿರಿಯ ನಾಗರೀಕರಿಗೆ ಮೀಸಲಿದ್ದ
ಈ ಯೋಜನೆಯ ವಯೋಮಾನ 55 ರಿಂದ 58
ವರ್ಷದ ಅನರ್ಹರ ಪಾಲಾಗಿರುವುದು ದೊರೆತಿರುವ
ದಾಖಲೆಗಳ ಮೂಲಕ ಋಜುವಾತಾಗಿದೆ.ಬಹುತೇಕ
ನೀಡಿರುವ ಆದೇಶ ಪತ್ರಗಳು ಶೇಕಡಾ 50
ರಷ್ಟು ದುರುಪಯೋಗ ಪಡಿಸಿಕೊಂಡಿರುವುದು
ಖಚಿತವಾಗಿದೆ. ಒಬ್ಬರಿಗೆ 1000 ತಿಂಗಳ
ವೇತನವಿದ್ದು ಸುಮಾರು ವರ್ಷ ಗಳಿಂದ
ವಂಚಿಸಿ ಲಕ್ಷಾಂತರ ಹಣ ಪಡೆದು ಸರ್ಕಾರದ
ಬೊಕ್ಕಸದ ಲಕ್ಷಾಂತರ ಹಣ ಗುಳುಂ ಆಗಿರುವ
ಘಟನೆ ನಡೆದಿದೆ.
ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿದ
ಅಧಿಕಾರಿಗಳು
ಅಧಿಕಾರಿಗಳು ನೈಜತೆಯನ್ನು ತಿಳಿಯಲು ಅರ್ಜಿದಾರರ
ದಾಖಲೆಗಳನ್ನು ಎಚ್ಚರಿಕೆ ಯಿಂದ ಪರಿಶೀಲಿಸಿ ಅವರಿಗೆ
ವೇತನ ನೀಡಿಕೆಯ ಪರಿಸ್ಥಿತಿ ಮತ್ತು ವೇತನ ಪಡೆಯಲು
ಇರಬೇಕಾದ ವಯಸ್ಸಿನ ಪರಿಮಿತಿಯ ಅರ್ಹತೆಗಳನ್ನು
ಪರಿಷ್ಕರಿಸಿ ವಿಚಾರಣೆ ನಡೆಸದೇ ಇಲ್ಲಿನ ಅಧಿಕಾರಿಗಳು
ಅನರ್ಹರಿಗೆ ಮಂಜೂರಾತಿ ಆದೇಶ ಪತ್ರ ನೀಡಿರುವುದು
ಕಂಡು ಬಂದಿದೆ.
ಅಕ್ರಮಕ್ಕೆ ಪೂರಕವಾದ ವಿಡಿಯೋ ಲಭ್ಯ: ಹೌದು
ಇದಕ್ಕೆ ನಿದರ್ಶನವೆಂಬಂತೆ ಅನರ್ಹ ಫಲಾನುಭವಿಯು
ಪತ್ರಿಕೆಯೊಂದಿಗೆ ನಾನು ಈ ಯೋಜನೆಯನ್ನು
ಪಡೆಯಲು ಮೊದಲೇ ಅಧಿಕಾರಿಗಳ ಒಪ್ಪಿಗೆ ಪಡೆದು
ಅವರಿಗೆ ಇಂತಿಷ್ಟು ಹಣ ನೀಡಿ ಸುಳ್ಳು ದಾಖಲೆ
ಸೃಷ್ಟಿಸಿ ನನ್ನ ಭಾವಚಿತ್ರವನ್ನು ವಯಸ್ಸಾದ ರೀತಿ ಯಲ್ಲಿ
ಕಾಣುವಂತೆ ಎಡಿಟ್ ಮಾಡಿಸಿಕೊಂಡು ಈ ಯೋಜ
ನೆಯ ಫಲಾನುಭವಿ ಆಗಿದ್ದು ಹಾಗೆಯೇ ಅಧಿಕಾರಿಗಳ
ಸಹಕಾರದಿಂದ ಸುಮಾರು ಹತ್ತು ತಿಂಗಳುಗಳಿಂದ
ವೇತನ ಪಡೆಯುತ್ತಿದ್ದು ಜೊತೆಗೆ ಅನೇಕ ಅನರ್ಹ ಅರ್ಜಿ
ದಾರ ಮಂದಿಗೆ ನಾನೇ ಇಂತಹ ಯೋಜನೆಗಳನ್ನು
ಖುದ್ದು ಮಾಡಿಸಿ ಕೊಟ್ಟಿದ್ದೇನೆ ಎಂದು ತನ್ನ ತಪ್ಪು
ಒಪ್ಪಿಕೊಂಡಿರುವ ಹೇಳಿಕೆಯ ಎಕ್ಸ್ ಕ್ಲುಸಿವ್ ವಿಡಿಯೋ
ಸುವರ್ಣಪ್ರಗತಿ ಪತ್ರಿಕೆಗೆ ಲಭ್ಯವಾಗಿದೆ.
ಮೇಲಾಧಿಕಾರಿಗಳಿಂದ ಸಮಗ್ರ ತನಿಖೆಗೆ ಒತ್ತಾಯ:
ಸೂಕ್ತ ವಿಚಾರಣೆ ನಡೆಸದೇ ಎಸ್.ಎಸ್.ವೈ.ಹಾಗೂ
ಇತರೆ ಯೋಜನೆಗಳ ವೇತನಗಳ ಬಗ್ಗೆ ಶಿಫಾರಸ್ಸು
ಮಾಡಿದಂತಹ ಅಧಿಕಾರಿ ನೌಕರರು ಅಧಿಕಾರ
ದುರುಪಯೋಗ ಪಡಿಸಿಕೊಂಡು ಲಂಚಗುಳಿತನಕ್ಕೆ
ನಿಂತಿರುವವರ ವಿರುದ್ಧ ತಾಲ್ಲೂಕು ಆಡಳಿತ ಮತ್ತು
ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಜೊತೆಗೆ ಅಕ್ರಮದ
ಜಾಲವನ್ನು ಸಮಗ್ರ ತನಿಖೆ ನಡೆಸುವಂತೆ ತಾಲ್ಲೂಕಿನ
ಪ್ರಜ್ಞಾವಂತ ನಾಗರೀಕರ ಆಶಯವಾಗಿದೆ. ವರದಿ :ದೇವರಾಜು.ಎಂ.ಎಸ್