ರೋಟರಿ ಸೆಂಟ್ರಲ್ ವತಿಯಿಂದ ಶಿಕ್ಷಕರ ದಿನಾಚರಣೆ : 21ನೇ ಶತಮಾನ ಜ್ಞಾನದ ಶತಮಾನ : ಪ್ರೊ.ವೈ.ಎಸ್.ಸಿದ್ದೇಗೌಡ
ತುಮಕೂರು: ನಮ್ಮ ದೇಶವು ಇತರೆ ದೇಶಗಳ ಗಮನ ಸೆಳೆದಿದೆ ಅಂದರೆ ಅದಕ್ಕೆ ಪ್ರಮುಖ ಕಾರಣ ಭಾರತದಲ್ಲಿರುವ ರೋಟರಿ,ಇನ್ನರ್ ವೀಲ್ ನಂತಹ ಸಂಘ-ಸಂಸ್ಥೆಗಳು ಮಾಡುತ್ತಿರುವ ಮಾನವೀಯ ಸೇವೆಗಳಿಂದ,ಸಮಾಜದ ಅಭ್ಯುದಯಕ್ಕೆ ಎಲ್ಲರೂ ಒಗ್ಗಟ್ಟಾಗಿ ಸೇರಿ ಸೇವೆಯನ್ನು ಮಾಡಿದಾಗ ಮಾತ್ರ ಸಾಧ್ಯ,ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ,21ನೇ ಶತಮಾನವನ್ನು ನಮ್ಮ ಪ್ರಧಾನಿಗಳು ಜ್ಞಾನದ ಶತಮಾನ ಎಂದು ಕರೆಯುತ್ತಿದ್ದಾರೆ,ಎಲ್ಲರೂ ಶಿಕ್ಷಿತರಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಕರ್ನಲ್ ಪ್ರೊ.ವೈ.ಎಸ್.ಸಿದ್ದೇಗೌಡರವರು ಹೇಳಿದರು.
ಅವರು ಇಂದು ತುಮಕೂರು ನಗರದಲ್ಲಿ ರೋಟರಿ ಸೆಂಟ್ರಲ್3190 ಮತ್ತು ಇನ್ನರ್ ವೀಲ್ ಸೆಂಟ್ರಲ್ ಸಹಯೋಗದೊಂದಿಗೆ ನಡೆದ ಶಿಕ್ಷಕರ ದಿನಾಚರಣೆ ಮತ್ತು ರಾಷ್ಟ್ರ ನಿರ್ಮಾತೃ ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿತ್ವ ಪರಿಪೂರ್ಣನಾಗಬೇಕಾದರೆ ರೋಟರಿ ಮತ್ತು ಇನ್ನರ್ ವೀಲ್ ನಂತಹ ಸಂಸ್ಥೆಗಳು ಮುಖ್ಯವಾದುವುಗಳು,ಇದು ಜ್ಞಾನದ ಯುಗ,ಎಲ್ಲರೂ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು,ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಸಮುದಾಯಕ್ಕೆ ಶಿಕ್ಷಣ ಕೊಟ್ಟಂತೆ,ಇಡೀ ಸಮಾಜ ಸಾಕ್ಷರವಾಗುತ್ತದೆ,ಶಿಕ್ಷಕರನ್ನು ಕರೆದು ಸನ್ಮಾನಿಸುತ್ತಿರುವುದು ಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜ್ಹೋನಲ್ ಗವರ್ನರ್ ಎಸ್.ಕೆ.ಥಾಮಸ್ ರವರು ಸರ್ವಪಲ್ಲಿ ರಾಧಾಕೃಷ್ಣನ್ ರವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆ ಮಾಡಲು ಪ್ರೇರಣೆಯಾಯಿತು,ಜಾತಿ ಭೇದವಿಲ್ಲದೆ ಇಂದು ಎಲ್ಲರಿಗೂ ಶಿಕ್ಷಣ ದೊರೆಯುತ್ತಿರುವುದು ಸಮಾಜದ ಉನ್ನತಿಗೆ ಕಾರಣವಾಗಿದೆ,ಪ್ರತಿ ಶಿಕ್ಷಕ ಉತ್ತಮ ಸಮಾಜದ ನಿರ್ಮಾತೃ,ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಉತ್ತಮ ಸಮಾಜವನ್ನು ಕಟ್ಟಬಲ್ಲರು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೋ.ಎಂ.ಇ.ನಿಜಲಿಂಗಪ್ಪನವರು ಉತ್ತಮ ಶಿಕ್ಷಕ ಉತ್ತಮ ಸಮಾಜದ ಎರಡು ಕಣ್ಣುಗಳಿದ್ದಂತೆ,ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಕರಿಗೆ ಗೌರವ ನೀಡಬೇಕು,ಯಾವುದೇ ವ್ಯಕ್ತಿ ಉತ್ತಮ ಸ್ಥಾನಕ್ಕೆ ಏರಿದ್ದಾನೆ ಅಂದರೆ ಅದಕ್ಕೆ ಕಾರಣ ಆತನಿಗೆ ಪಾಠ ಮಾಡಿದ ಶಿಕ್ಷಕರು,ಭಾರತವು ಇಂದು ಶೇಕಡ 70ಕ್ಕಿಂತ ಸಾಕ್ಷರಸ್ಥರ ದೇಶವಾಗಿದೆ ಅಂದರೆ ಅದಕ್ಕೆ ಪ್ರಮುಖ ಕಾರಣ ಶಿಕ್ಷಕರು,ಯಾವುದೇ ನಿರ್ವಂಚನೆ ಇಲ್ಲದೆ ತಮ್ಮ ಕೆಲಸವನ್ನು ತಾವು ಮಾಡಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ವೇದಿಕೆಯಲ್ಲಿ ಹೆಬ್ಬೂರು ಶ್ರೀನಿವಾಸಮೂರ್ತಿ, ಇನ್ನರ್ ವೀಲ್ ಅಧ್ಯಕ್ಷರಾದ ಶ್ರೀಮತಿ ಆರ್.ಪ್ರಮೀಳಾ ಶಾಂತರಾಜ್,ಇನ್ನರ್ ವೀಲ್ ಕಾರ್ಯದರ್ಶಿ ಟಿ.ಎಸ್.ಲಲಿತಕುಮಾರಿ, ಸನ್ಮಾನಿತ ಶಿಕ್ಷಕರುಗಳಾದ ಶೇಖರ್.ಎಂ,ಶ್ರೀಮತಿ ಶಿವರಾಜಮ್ಮ,ಶಿವಕುಮಾರ್,ಶ್ರೀಮತಿ ಗೀತಾ.ಬಿಎ,ಶ್ರೀಮತಿ ಅಕ್ಕಮ್ಮ.ಎನ್,ಎಂ.ಸಿ.ಅಂಬರೀಶಯ್ಯ,ಕೆ.ವಿರೂಪಾಕ್ಷಯ್ಯ,ಶ್ರೀಮತಿ ಜಿ.ವೇದಲಕ್ಷ್ಮೀ,ಎಸ್.ಸುರೇಶ್ ಕುಮಾರ್,ತೇಜಗಿಲ್ ಭಟ್, ಮುಂತಾದವರು ಉಪಸ್ಥಿತರಿದ್ದರು.