ತುಮಕೂರು : ಮುಂಬರುವ ಸ್ಥಳೀಯ ಸಂಸ್ಥೆಗಳ
ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ
ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಮುದಾಯ
ದವರಿಗೆ ಅವಕಾಶ ಕಲ್ಪಿಸುವಂತೆ ತುಮಕೂರು
ಜಿಲ್ಲೆಯ ಒಕ್ಕಲಿಗರ ಸಮುದಾಯದ ಒಕ್ಕೂಟದ
ಸಂಚಾಲಕರಾದ ಯಲಚವಾಡಿ ನಾಗರಾಜು ಮನವಿ
ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ
ಪ್ರಾರಂಭವಾದ 40 ವರ್ಷಗಳಿಂದ ಇದುವರೆಗೂ
ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗ ಸಮುದಾಯಕ್ಕೆ
ಅವಕಾಶ ಕಲ್ಪಿಸಿಲ್ಲ.ಜಿಲ್ಲೆಯ ರಾಜಕೀಯ, ಆರ್ಥಿಕ,
ಸಾಮಾ ಜಿಕ, ಶೈಕ್ಷಣಿಕ,ನೀರಾವರಿ ಹೀಗೆ ಎಲ್ಲಾ
ಕ್ಷೇತ್ರದಲ್ಲಿಯೂ ಒಕ್ಕಲಿಗ ಸಮುದಾಯದ ಕೊಡುಗೆ
ಆಪಾರವಾಗಿದೆ.ನಾನು ಸೇರಿದಂತೆ ಹಲವರು
ಆಕಾಂಕ್ಷಿಗಳಿದ್ದು,ಒಕ್ಕಲಿಗರಿಗೆ ಅದ್ಯತೆ ನೀಡಬೇಕೆಂ
ಬುದು ನಮ್ಮಗಳ ಒತ್ತಾಯವಾಗಿದೆ ಎಂದರು.
ಜಿಲ್ಲೆಯ ಬೆಳವಣಿಗೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ
ಸೇರಿದ ಕೆ.ಲಕ್ಕಪ್ಪ,ಮಲ್ಲಣ್ಣ, ಮೂಡಲಗಿರಿಗೌಡ,
ಮಾಲಿಮರಿಯಪ್ಪ,ಮಾಲಿ ಮುದ್ದಣ್ಣ, ಎನ್.
ಹುಚ್ಚಮಾಸ್ತಿಗೌಡ, ಬಿ.ಭೈರಪ್ಪಾಜಿ, ವೈ.ಕೆ.ರಾಮಯ್ಯ,
ತಮ್ಮಣ್ಣಗೌಡ, ಅಂದಾನಯ್ಯ, ರಾಮಕೃಷ್ಣಯ್ಯ,
ವೀರಣ್ಣಗೌಡ, ರಂಗನಾಥಪ್ಪ ಅವರುಗಳು ಪ್ರಮುಖ
ಪಾತ್ರ ವಹಿಸಿದ್ದಾರೆ. ಹೇಮಾವತಿ ನೀರು ಹರಿಸುವ
ಸಂಬಂಧ ಇವರ ಹೋರಾಟ ಪ್ರಮುಖವಾಗಿದೆ.
ಹಾಗಾಗಿ ಈ ಬಾರಿ ಒಕ್ಕಲಿಗ ಸಮುದಾಯಕ್ಕೆ ಅವ
ಕಾಶ ಕಲ್ಪಿಸಬೇಕೆಂಬುದು ನಮ್ಮೆಲ್ಲರ ಒಕ್ಕೊರಲ
ಮನವಿಯಾಗಿದೆ ಎಂದು ಯಲಚವಾಡಿ ನಾಗರಾಜು
ತಿಳಿಸಿದರು.
ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ
ನಗರಸಭೆ,ಪುರಸಭೆ, ಪಟ್ಟಣಪಂಚಾಯಿತಿ, ಗ್ರಾಮ
ಪಂಚಾಯಿತಿ ಚುನಾವಣೆಯಲ್ಲಿ ಸುಮಾರು
2000 ಸಾವಿರಕ್ಕೂ ಒಕ್ಕಲಿಗ ಸಮುದಾಯದ
ಜನರು ಗೆಲುವು ಸಾಧಿಸಿದ್ದಾರೆ.ವಿದಾನಪರಿಷತ್
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ
ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಟಿಕೇಟ್
ನೀಡುವುದರಿಂದ ಇದು ಅವರ ಗೆಲುವಿಗೆ
ಸಹಕಾರಿಯಾಗಲಿದೆ.ಒಂದು ವೇಳೆ ಸರಕಾರ ನಮ್ಮ
ಮನವಿಗೆ ಸ್ಪಂದಿಸದೆ, ಬೇರೆಯವರಿಗೆ ಟಿಕೇಟ್
ನೀಡಿದರೂ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ.
ಆದರೆ ಎಂದಿಗೂ ಪಕ್ಷವಿರೋಧಿ ಚಟುವಟಿಕೆಯಲ್ಲಿ
ಪಾಲ್ಗೊಳ್ಳುವುದಿಲ್ಲ ಎಂದು ಯಲಚವಾಡಿ
ನಾಗರಾಜು ಸ್ಪಷ್ಟ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗ ಸಮುದಾಯದ
ಮುಖಂಡರಾದ ಬೆಂಡೋಣ್ಣೆ ಜಯರಾಮ್,
ಗೀತಾರಾಜಣ್ಣ, ಕೆ.ಎಲ್.ಪ್ರಕಾಶ್, ಹೊನ್ನಗಿರಿಗೌಡ,
ಜಯಮ್ಮ, ದೊಡ್ಡಲಿಂಗಪ್ಪ ಸೇರಿದಂತೆ ಹಲವರು
ಉಪಸ್ಥಿತರಿದ್ದರು