
ಗುಬ್ಬಿ : ಕಕ್ಷಿದಾರರು ನ್ಯಾಯಾಲಯಗಳಿಗೆ ಅಲೆದಾಡುವ ಬದಲು ಜನತಾ ನ್ಯಾಯಾಲಯಗಳ ಮೂಲಕ ತಮ್ಮ ದಾವೆಗಳನ್ನು ಇತ್ಯರ್ಥ ಪಡಿಸಿಕೊಂಡರೆ ತುಂಬಾ ಅನುಕೂಲವಾಗುವುದು ಎಂದು ಗುಬ್ಬಿಯ ಹಿರಿಯ ಸಿವಿಲ್ ನ್ಯಾಯದಿಶೇ ಉಂಡಿ ಮಂಜುಳ ಶಿವಪ್ಪ ಹೇಳಿದರು.ಅವರು ನ್ಯಾಯಾಲಯದ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಸಾರ್ವಜನಿಕರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ದೊರಕುವ ಸೌಲಭ್ಯಗಳು,ಅವುಗಳನ್ನು ಬಳಸಿಕೊಳ್ಳುವ ರೀತಿಯ ಬಗ್ಗೆ ಅರಿವು ಮೂಡಿಸಲು ನಮ್ಮ ನ್ಯಾಯಲದ ಸುಮಾರು 15 ಪ್ಯಾನಲ್ ವಕೀಲರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.ಶುಕ್ರವಾರ ಒಂದೇ ದಿನದಲ್ಲಿ ಸುಮಾರು 46 ಕಾನೂನು ಸೇವಾ ಸಲಹಾ ಕಾರ್ಯಕ್ರಮಗಳನ್ನು ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದ್ದು,ಸದರಿ ಕಾರ್ಯಕ್ರಮಗಳಲ್ಲಿ ಸಂಬಂಧ ಪಟ್ಟ ವಕೀಲರು ಜನಸಾಮಾನ್ಯರಿಗೆ ಜನತಾನ್ಯಾಯಾಲಯಗಳ ಮಹತ್ವ ಹಾಗೂ ರಾಜಿಸಂಧಾನದ ಮೂಲಕ ದಾವೆಗಳನ್ನು ಬಗೆಹರಿಸಿಕೊಳ್ಳುವುದರಿಂದ ದೊರಕುವ ಲಾಭಗಳ ಬಗ್ಗೆ ಅರಿವುಮೂಡಿಸುವರು.
ಇದರಿಂದ ನ್ಯಾಯಾಲಯಗಳಲ್ಲಿ ದಾವೆಗಳ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಕಕ್ಷಿದಾರರ ಸಮಯ,ಹಣ ವ್ಯರ್ಥವಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ರಾಜಿ ಸಂಧಾನಗಳ ಮೂಲಕ ಬಗೆ ಹರಿಯದ ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಿ ಬಗೆಹರಿಸಿಕೊಳ್ಳಲು ಸಾಧ್ಯವಿದೆ.ಕಾನೂನು ಸೇವಾ ಪ್ರಾಧಿಕಾರದಿಂದ ಅರ್ಹರಿಗೆ ಉಚಿತ ಕಾನೂನು ನೆರವು ನೀಡಲಾಗುವುದು ಎಂದು ಹೇಳಿದರು. ಪ್ಯಾನಲ್ ವಕೀಲರು ಕಾನೂನು ಅರಿವು ಮೂಡಿಸುವ ಜೊತೆಗೆ ಕೋವಿಡ್ ಲಸಿಕೆ ಅಭಿಯಾನದ ಮಹತ್ವದ ಬಗ್ಗೆಯೂ ತಿಳುವಳಿಕೆ ನೀಡುವರು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಅಧಿಕ ಹಿರಿಯ ಸಿವಿಲ್ ನ್ಯಾಯಾದೀಶರಾದ ಶಿವರಾಜ್ ವಿ ಸಿದ್ದೇಶ್ವರ್, ಅಧಿಕ ಸಿವಿಲ್ ನ್ಯಾಯಾಧೀಶ ಪ್ರೇಮ್ ಕುಮಾರ್,ವಕೀಲ ಸಂಘದ ಅಧ್ಯಕ್ಷ ಕೆ ಜಿ ನಾರಾಯಣ್,ಪದಾಧಿಕಾರಿಗಳು ಹಾಗೂ ಪ್ಯಾನಲ್ ವಕೀಲರು ಉಪಸ್ಥಿತರಿದ್ದರು.