ಕೊರಟಗೆರೆಜಿಲ್ಲೆತುಮಕೂರು

ಪೌವತಿಖಾತೆಗೆ ಮಾಡಿ ಕೊಡಲು ಅಲೆದಾಡಿಸುವ ಕಂದಾಯ ಇಲಾಖೆಯ ವಿರುದ್ಧ ರೈತರ ಆಕ್ರೋಶ

ನೂತನ ತಹಶೀಲ್ದಾರ್ ನಾಹಿದಾ ಜಮ್ ಜಮ್ ಗಮನ ಹರಿಸುವರೇ...

ಕೊರಟಗೆರೆ : ಕಂದಾಯ ಇಲಾಖೆ ಹೋಬಳಿವಾರು ನಾಡಕಛೇರಿಗಳಲ್ಲಿ ಸಾರ್ವಜನಿಕರ ಕೆಲಸಗಳಾಗದೆ ಅಲೆದಾಡುತಿದ್ದು, ತಂದೆ ತಾಯಿ ಸತ್ತು 3-4 ವರ್ಷಗಳಾದರೂ ಪೌವತಿಖಾತೆಗೆ ಎರಡುಮೂರು ವರ್ಷಗಳಿಂದಲ್ಲೂ ಅಲೆದಾಡಿಸುತಿರುವ ಅಧಿಕಾರಿಗಳ ದೋರಣೆಗೆ ಬೇಸತ್ತು ಅಲೆದಾಡಿಸುತಿರುವ ವಿರುದ್ದ ಹಿಡಿ ಶಾಪ ಹಾಕುತಿರುವ ಘಟನೆ ಕೊರಟಗೆರೆ ತಾಲ್ಲೂಕಿನ ಕೋಳಾಲ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಪಾತಗಾನಹಳ್ಳಿಯ ನಜುಂಡಪ್ಪ ಎಂಬ ರೈತ ಕಳೆದ 2-3 ವರ್ಷಗಳಿಂದ ಪೌವತಿ ಖಾತೆಗಾಗಿ ಅಲೆದಾಡುತಿದ್ದು, ಕಂದಾಯ ಇಲಾಖೆಯ ನೌಕರರಿಗೆ ಹಣ ನೀಡಿದರೂ ಪ್ರಯೋಜನವಾಗದೆ ನಾಡ ಕಛೇರಿಗೆ ಅಲೆದಾಡುತಿದ್ದೇನೆ ಎಂದು ಕೋಳಾಲ ನಾಡ ಕಛೇರಿಯ ಕಾರ್ಯವೈಕರಿ ವಿರುದ್ದ ಬೇಸರ ವ್ಯಕ್ತಪಡಿಸುತಿದ್ದಾರೆ.
ನಂಜುಂಡ ಕಳೆದ 2 ವರ್ಷಗಳ ಹಿಂದೆ ಪೌತಿ ಖಾತೆಗೆ ಕೋಳಾಲ ನಾಡ ಕಛೇರಿಗೆ ಅರ್ಜಿ ಸಲ್ಲಿಸಿದ್ದು, ಪಾತಗಾನಹಳ್ಳಿ ಸರ್ವೆ ನಂಬರ್ 148/1 ರ 2.18, 148/3 ರಲ್ಲಿ 6 ಕಂಟೆ, 149/6 ರಲ್ಲಿ 1.19 ಕುಂಟೆ ಜಮೀನ್ನು ತಾಯಿ ಸರೋಜಮ್ಮನ ಹೆಸರಿನಿಂದ ಇಬ್ಬರು ಮಕ್ಕಳಾದ ನಂಜುಂಡಪ್ಪ ಮತ್ತು ಪವಿತ್ರ ಹೆಸರಿಗೆ ಪೌತಿ ಖಾತೆ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದರಾದರೂ, ಯಾವುದೇ ತಂಟೆ ತಕರಾರು ಇಲ್ಲದಿದ್ದರೂ ಕಂದಾಯ ಇಳಾ ಅದಿಕಾರಿಗಳು ಮೀನ ಮೇಷ ಏಣಿಸುತಿರುವುದು ಏಕೆ? ಕಂದಾಯ ಅಧಿಕಾರಿಗಳಿಗೂ ಹಣ ನೀಡಿದೆ ಅದರೂ ಖಾತೆ ಬದಲಾವಣೆ ಯಾಗದಿರುವುದು ಅಧಿಕಾರಿಗಳ ನಿರ್ಲಕ್ಷ ಹಾಗೂ ಇಲಾಖೆ ಜಡ್ಡು ಇಡಿದಿರುವುದಕ್ಕೆ ನೈಜ ಸಾಕ್ಷಿ ಎಂದು ಕೆಲವು ರೈತರ ಆರೋಪವಾಗಿದೆ.
ನಂಜುಂಡಪ್ಪ ಹಾಗೂ ಪವಿತ್ರ ಎಂಬುವರು ತಂದೆ-ತಾಯಿ ಹೆಸರಿನಲ್ಲಿರುವ ಜಮೀನನ್ನು ಮಕ್ಕಳ ಹೆಸರಿಗೆ ಪೌತಿ ಖಾತೆ ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಲ್ಲಾಗಿದ್ದು, ಅರ್ಜಿದಾರರ ತಾತ ಬಜ್ಜಣ್ಣ ಅಜ್ಜಿ ಶಿವಲಿಂಗಮ್ಮ ನಿಧನರಾಗಿ 20-25 ವರ್ಷಕಳೆದಿದ್ದು, ಇವರ ಮಕ್ಕಳಾದ ರಾಜಪ್ಪ ಮತ್ತು ಪರಮಶಿವಯ್ಯ ಎಂಬುವ ಮಕ್ಕಳಿದ್ದು, ಇವರಿಬ್ಬರಿಗೂ ಅಸ್ತಿ ವಿಭಾಗವಾಗಿ ತಮ್ಮ ತಮ್ಮ ಪಾಡಿಗೆ ವ್ಯವಸಾಯ ಮಾಡಿಕೊಳ್ಳುತಿದ್ದಾರೆ, ಇದರ ಮದ್ಯ ಮೊದಲನೇ ಮಗ ರಾಜಪ್ಪ ಮಗನೇ ನಂಜುಡಪ್ಪನ್ನಾಗಿದ್ದು, ಇವರ ತಂದೆ ರಾಜಪ್ಪ ಸೂಮಾರು ವರ್ಷಗಳ ಹಿಂದೆ ಸಾವಿಗಿಡಾಗಿದ್ದು ತಾಯಿ ಸರೋಜಮ್ಮ ಕಳೆದ 3 ವರ್ಷಗಳ ಹಿಂದೆ ಸಾವಿಗಿಡಾದರು. ಇವರ ಪೌತಿ ಅಧಾರದ ಮೇಲೆ ಅವರ ಮಕ್ಕಳಾದ ನಂಜುಂಡಪ್ಪ ಹಾಗೂ ತಂಗಿ ಪವಿತ್ರ ಹೆಸರಿಗೆ ಪೌತಿ ಖಾತೆ ಮಾಡುವಂತೆ ಕಳೆದ 3 ವರ್ಷಗಳಿಂದ ಕಂದಾಯ ಇಲಾಖೆ ನಾಡಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ ಎಂದು ಅರ್ಜಿದಾರರು ಕಂದಾಯ ಇಲಾಖೆಯ ನಾಡಕಚೇರಿ ಉಪತಹಶೀಲ್ದಾರ್, ಅರ್ ಐ ಹಾಗೂ ವಿ ಎ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೂತನ ತಹಶೀಲ್ದಾರ್ ಗಮನ ಹರಿಸುವರೇ
ನೂತನವಾಗಿ ಆಗಮಿಸಿದ ತಹಶೀಲ್ದಾರ್ ನಾಹಿದಾ ಜಮ್ ಜಮ್ ಬಂದ ದಿನದಿಂದಲ್ಲೇ ಕಂದಾಯ ಇಲಾಖೆಗೆ ಬಿಸಿ ಮುಟ್ಟಿಸಿದ್ದು, ಹಲವು ನೌಕರರಿಗೆ ಖಡಕ್ ವಾರ್ನಿಂಗ್ ನೀಡಿರುವುದಲ್ಲದೆ, ಸಾರ್ವಜನಿಕರ ಕೆಲಸ ತ್ವರಿತ ಗತಿಯಲ್ಲಿ ನೆಡೆಯ ಬೇಕು, ಕಡತಾ ಮೂಲೆ ಸೇರಿದರೆ ನಾನು ಸಹಿಸುವುದಿಲ್ಲಾ ,ಸಾರ್ವಜನಿಕರನ್ನ ಅನಾವಶ್ಯಕವಾಗಿ ಅಲೆದಾಡುವುದನ್ನ ಮೂದಲು ನಿಲ್ಲಿಸ ಬೇಕು, ನನಗೆ ಅದಿಕಾರಿಗಳ ಮೇಲೆ ಪದೇ ಪದೇ ಅರೋಪ ಕೇಳಿ ಬಂದರೆ ನಾನು ಸಹಿಸೂದಿಲ್ಲ ಶಿಸ್ತು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಅದಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿರುವುದಲ್ಲದೆ, ಕಂದಾಯ ಇಲಾಖೆಯಲ್ಲಿ ಮದ್ಯವರ್ತಿಗಳ ಹಾವಳಿಗೆ ಸಹ ಬ್ರೇಕ್ ಹಾಕಿರುವ ನಿಟ್ಟಿನಲ್ಲಿ ಕಾರ್ಯಪೌವೃತರಾಗಿರುವ ತಹಶೀಲ್ದಾರ್ ನಾಡ ಕಚೇರಿಗಳ ಕಶ್ಮಲವನ್ನೂ ತೊಳೆಯುವ ಜೊತೆಗೆ ಅರ್ಜಿದಾರರ ಸಮಸ್ಯೆಯನ್ನೂ ನಿರ್ವಹಿಸಿ ಕೊಡಬೇಕೆಂದು  ಅರ್ಜಿದಾರರು ಹಾಗೂ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker