ಹಿಂದಿ ದಿವಸ್ ರದ್ದತಿಗೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ
ತುಮಕೂರು : ಕೇಂದ್ರ ಸರ್ಕಾರವು ಒತ್ತಾಯಪೂರ್ವಕವಾಗಿ ದೇಶಾದ್ಯಂತ ಹಿಂದಿ ದಿವಸ್ ಆಚರಣೆ ಮಾಡುವ ಮೂಲಕ ಎಲ್ಲ ರಾಜ್ಯಗಳಿಗೂ ಅವಮಾನ ಮಾಡುವ ಮಾಡುತ್ತಿದೆ ಹಾಗೂ ಸ್ಥಳೀಯ ಭಾಷೆಗೆ ಮಾನ್ಯತೆ ನೀಡದೆ ಪೂರ್ವಕವಾಗಿಯೇ ದೇಶಾದ್ಯಂತ ಹಿಂದಿ ದಿವಸ್ ಆಚರಣೆ ಮಾಡಲು ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದ್ದು ಕೂಡಲೇ ಹಿಂದಿ ದಿವಸ್ ಆಚರಣೆಯನ್ನು ರದ್ದುಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಟಿ ಎ.ನಾರಾಯಣಗೌಡ ಬಣ) ವತಿಯಿಂದ ತುಮಕೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಕಚೇರಿಯ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಗೌಡ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಕರವೇ ತುಮಕೂರು ಜಿಲ್ಲಾಧ್ಯಕ್ಷರಾದ ಮಂಜುನಾಥ್ ಗೌಡ ಮಾತನಾಡಿ ಕೇಂದ್ರ ಸರ್ಕಾರವು ಆಚರಣೆ ಮಾಡುತ್ತಿರುವ ಹಿಂದಿ ದಿವಸ್ ಕನ್ನಡ ವಿರೋಧಿಯಾಗಿ ಹಿಂದಿ ದಿವಸ್ ಆಚರಣೆಯನ್ನು ಮಾಡಲಾಗುತ್ತಿದ್ದು ಕೂಡಲೇ ರದ್ದುಪಡಿಸಬೇಕು ಒತ್ತಾಯಪೂರ್ವಕವಾಗಿ ಕನ್ನಡ ನಾಡು-ನುಡಿ ಸಂಸ್ಕೃತಿಗೆ ವಿರುದ್ದವಾಗಿ ಇಂತಹ ಹಿಂದಿ ದಿವಸ್ ಆಚರಣೆಯನ್ನು ಮಾಡಲಾಗುತ್ತಿದೆ ಇದನ್ನು ಕೂಡಲೇ ರದ್ದು ಮಾಡಬೇಕು ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬ್ಯಾಂಕ್ ಸಿಬ್ಬಂದಿಗಳು ಕಡ್ಡಾಯವಾಗಿ ಕನ್ನಡ ಕಲಿತು ಬ್ಯಾಂಕ್ನ ಗ್ರಾಹಕರೊಂದಿಗೆ ಸಮನ್ವಯ ಸಾಧಿಸುವಂತೆ ಎಚ್ಚರ ವಹಿಸಬೇಕು ಎಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಗರಾಧ್ಯಕ್ಷ ಉಪ್ಪರಹಳ್ಳಿ ಕುಮಾರ್, ಚೆಲುವರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಲೀಲಾವತಿ, ಯುವ ಘಟಕದ ಅಧ್ಯಕ್ಷರಾದ ಕುಂಭಯ್ಯ, ಪ್ರಕಾಶ್, ಕಾರ್ತಿಕ್ ಯಶೋದ ,ಜಯಶ್ರೀ ಸೇರಿದಂತೆ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಜರಿದ್ದರು.