ಕೊರಟಗೆರೆ : ರಾಜ್ಯ ಸರ್ಕಾರವು ರೈತ ಕುಟುಂಬದ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ,ಸವಲತ್ತುಗಳನ್ನು ನೀಡಿದರೆ ಅವರ ಜೀವನ ಆರ್ಥಿಕ ಭದ್ರತೆಯಿಂದ ಕೂಡಿರುತ್ತದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಅವರು ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ದಮಗನಯ್ಯನಪಾಳ್ಯ ಗ್ರಾಮದಲ್ಲಿ ಮುತುರಾಯಸ್ವಾಮಿ ಮತ್ತು ವೆಂಕಟರವಣಸ್ವಾಮಿ ದೇವರ ಆರತಿ ಮತ್ತು ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಆದರಲ್ಲೂ ರೈತಮಹಿಳೆಯರು ಸ್ರೀಶಕ್ತಿ ಸಂಘಗಳ ಮುಖಾಂತರ ಉಳಿತಾಯದ ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ,ವವ್ಯಸಾಯದೊಂದಿಗೆ ಹೈನುಗಾರಿಕೆಯನ್ನು ಮಾಡಿ ಆರ್ಥಿಕ ದೃಡತೆಯೊಂದಿಗೆ ಸಮಾಜದಲ್ಲಿ ಸ್ವಾವಲಂಭಿಗಳಾಗಿದ್ದಾರೆ, ಅದರೆ ಬಯಲು ಸೀಮೆಯ ಭಾಗದ ರೈತರು ಮಳೆ ಆಶ್ರಿತ ಕೃಷಿಗೆ ಅವಲಂಭಿತರಾಗ್ಗಿದು ವರುಣನ ಅಸಮತೂಲನ ಮಳೆಯಿಂದ ಮಾಡಿರುವ ಕೃಷಿ ಕಾರ್ಯವೂ ಕುಂಠಿತವಾಗುತ್ತದೆ, ಇದಕ್ಕಾಗಿಯೇ ಬಯಲು ಸೀಮೆಯ ಪ್ರದೇಶಗಳಿಗೆ ಎತ್ತಿನಹೊಳೆ ಕುಡಿಯುವನೀರನನ್ನು ತಾಲೂಕಿನ 39 ಕೆರೆಗಳಿಗೆ ಹರಿಸಲು ಯೋಜನೆ ತ್ವರಿತ ಕಾಮಗಾರಿಗಳಿಗೆ ಆಗ್ರಹಿಸಲಾಗುತ್ತಿದ್ದೆ, ತಾಲೂಕಿನ ಕೋಳಾಲ ಹೋಬಳಿಯ ಬೈರಗೋಂಡ್ಲು ಬಳಿ ಬೃಹತ್ ಬಫರ್ ಡ್ಯಾಂನ್ನು ನಿರ್ಮಿಸಲಾಗುವುದು, ಇದರಿಂದ ಸಾವಿರಾರು ಎಕರೆ ಭೂಪ್ರದೇಶವು ಅಂತರ್‌ಜಲ ಹೆಚ್ಚಲಿದ್ದು ಕೃಷಿ ಉತ್ತಮಗೋಳ್ಳುತದೆ ಎಂದರು. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರವು ಸಮಾನಂತರ ನ್ಯಾಯಯುತಬೆಲೆಯನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿಕಳೆದು ಕೊಂಡ ರೈತರಿಗೆ ನೀಡಬೇಕಾಗರುವುದನ್ನು ತಪ್ಪಿಸಿಕೋಳ್ಳಲು ಡ್ಯಾಂ ಸ್ಥಳಾಂತರ ಮಾಡುವಬಗ್ಗೆ ಕೇಳಿಬರುತ್ತಿದ್ದು,ಈ ರೀತಿ ಮಾಡಲು ಸರ್ಕಾರ ಅಲೋಚಿಸಿದರೆ ಡ್ಯಾಂ ನಿರ್ಮಾಣಕ್ಕೆ ರೈತರೊಂದಿಗೆ ಹೋರಾಡುವುದರೊಂದಿಗೆ ಧರಣಿನಡೆಸಲಾಗುವುದು ಎಂದು ತಿಳಿಸಿದರು.
ದಮಗಲಯ್ಯನಪಾಳ್ಯದ ಗ್ರಾಮದ ಜನರಿಗೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕುಡಿಯವ ನೀರಿನ ಹೇಮಾವತಿನೀರನ್ನು ನೀಡಲು ಎಲ್ಲಾ ಕ್ರಮ ಕೈಗೋಳ್ಳಲಾಗಿದೆ,ಗ್ರಾಮದ ಸಮುದಾಯ ಭವನಕ್ಕೆ 10ಲಕ್ಷ, ಶುದ್ಧ ನೀರಿನ ಘಟಕ,ಸ್ರೀಶಕ್ತಿ ಭವನ,ಸೇರಿದಂತೆ ಎಲ್ಲಾರೀತಿಯ ಮೂಲ ಭೂತ ಸೌರ‍್ಯಳನ್ನು ನೀಡಲಾಗುವುದು,ಕ್ಷೇತ್ರದ ಎಲ್ಲಾ ಗ್ರಾಮಗಳ ಮೂಲಭೂತ ಸೌರ‍್ಯಗಳಿಗೆ ಆದ್ಯತೆ ನೀಡಿ,ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಶ್ರಮ,ಅನುಧಾನ ಒದಗಿದುವ ಕೆಲಸವನ್ನು ನಿರಂತರವಾಗಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಅರಕೆರೆಶಂಕರ್,ಕೋಡ್ಲಹಳ್ಳಿ ಅಶ್ವಥನಾರಾಯಣ,ಮಾಜಿಅದ್ಯಕ್ಷ ರಾಮಚಂದ್ರಪ್ಪ,ಯುವ ಕಾಂಗ್ರೆಸ್ ಅದ್ಯಕ್ಷ ವಿನಯ್ ಕುಮಾರ್,ಗ್ರಾಮಪಂಚಯಿತಿ ಸದಸ್ಯರಾದಕೆ.ಎಲ್.ಎಮ್ ಮಂಜು,ಗೀತಮ್ಮ,ಕೋಕಿಲ ಸಂದೀಪ್, ಮುಖಂಡರಾದ ಚಂದ್ರಶೇಖರ ಗೌಡ,ಮಂಜುಳ ಆರಾದ್ಯ,ಹುಲೀಕುಂಟೆ ಪ್ರಸಾದ್,ಎಂಎನ್‌ಜೆ ಮಂಜುನಾಥ್,ಮರುಗಪ್ಪ.ಮೂಡ್ಲಗಿರಿಯಪ್ಪ,ಕೃಷ್ಣಮೂರ್ತಿ,ಶೈಲಜ,ಮಂಜುನಾಥ ಸೇರಿದಂತೆ ಇತರರು ಹಾಜರಿದ್ದರು.