ಭಾರತೀಯ ಜೈನ ಸಂಘಟನ್ ತುಮಕೂರು ಜಿಲ್ಲಾ ಶಾಖೆ ಆರಂಭ
ತುಮಕೂರು: ಭಾರತೀಯ ಜೈನ ಸಂಘಟನೆಯ ತುಮಕೂರು ಜಿಲ್ಲಾ ಶಾಖೆಯ ಉದ್ಘಾಟನೆ ಇಂದು ತುಮಕೂರಿನ ಗಾಂಧಿನಗರದಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು.
ಭಾರತೀಯ ಜೈನ ಸಂಘಟನ್ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷ ವಿನೋದ್ ಪರ್ಮಾರ್, ಪ್ರಧಾನ ಕಾರ್ಯದರ್ಶಿ ಪ್ರತೀಕ್ ಜೈನ್ ಅವರುಗಳ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ 10 ತಾಲೂಕುಗಳಲ್ಲಿಯೂ ಸಂಘವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಇಂದು ಸಂಘದ ಉದ್ಘಾಟನೆ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ವಿನೋದ್ ಪರ್ಮಾರ್,ಭಾರತೀಯ ಜೈನ ಸಂಘಟನ್ ಬಹಳ ಹಳೆಯ ಸಂಘಟನೆ ಯಾಗಿದ್ದು,ಆಯಾಯ ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಸಮುದಾಯದ ಜನರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ.ಪ್ರಸ್ತುತ ರಾಜ್ಯ ಸರಕಾರ ಕರ್ನಾಟಕವನ್ನು ಕೋವಿಡ್ ಮುಕ್ತ ರಾಜ್ಯವಾಗಿಸಲು ಹಗರಲಿರುಳು ದುಡಿಯುತ್ತಿದೆ.ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಭಾರತೀಯ ಜೈನ ಸಂಘÀಟನ್ ಸರಕಾರದೊಂದಿಗೆ ಕೈಜೋಡಿಸಲು ಕೋರಿದೆ.ಇದರ ಭಾಗವಾಗಿ ಕರ್ನಾಟಕÀದ ಅಂದಾಜು 30 ಜಿಲ್ಲೆಗಳ 30 ಸಾವಿರ ಹಳ್ಳಿಗಳನ್ನು ಕೋವಿಡ್ ಮುಕ್ತವಾಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಭಾರತೀಯ ಜೈನ ಸಂಘಟನ್ ಮುಂದಾಗಿದೆ ಎಂದರು.
ತುಮಕೂರು ಜಿಲ್ಲೆಯ 10 ತಾಲೂಕುಗಳಲ್ಲಿಯೂ ಭಾರತೀಯ ಜೈನ ಸಂಘಟನ್‌ಯ ಶಾಖೆಗಳೊಂದಿಗೆ ಸೇರಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಜನರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸುವುದು. ಕೋವಿಡ್ ಲಸಿಕೆ ಹಾಕುವ ಕೇಂದ್ರಗಳ ಮಾಹಿತಿ,ಅಗತ್ಯ ಲಸಿಕೆಗಳ ಪ್ರಮಾಣ ಇವುಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ,ಸಮರ್ಪಕವಾಗಿ ಲಸಿಕೆ ಆಭಿಯಾನ ಮುಂದುವರೆಸಲು ಸರಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದೆ ಎಂದು ಅಧ್ಯಕ್ಷ ವಿನೋದ್ ಪಾರ್ಮಾರ್ ತಿಳಿಸಿದರು.
ಈ ವೇಳೆ ಭಾರತೀಯ ಜೈನ ಸಂಘಟನ್ ರಾಜ್ಯ ಉಪಾಧ್ಯಕ್ಷ ವಿನೋದ್ ಪೂರ್ವಾಲ್,ರಾಜ್ಯ ವೀಕ್ಷಕರಾದÀ ಓಂ ಪ್ರಕಾಶ್‌ಜೀ,ಲೂನಾವತ್,ಬೆಂಗಳೂರು ವಿಭಾಗದ ಮಾರ್ಗದರ್ಶಕರಾದ ಉತ್ತಮಜೀ ಭಂಟಿಯಾ,ತುಮಕೂರು ಜೈನ್ ಸಮಾಜದ ಮುಖಂಡರಾದ ಪಿ.ಪಿ.ಮಲ್,ಉಮೇಶ್‌ಜಿ,ಸುರೇಂದ್ರಜಿ,ರಾಜ್‌ಕುಮಾರ್ ಪಾಲರೇಶ,ಸಂದೀಪ್ ಜೈನ್,ಅಭಯ್ ಜೈನ್ ಮತ್ತಿತರರು ಪಾಲ್ಗೊಂಡಿದ್ದರು.