ಚಿಕ್ಕನಾಯಕನಹಳ್ಳಿ : ಹೊಯ್ಸಳಕಟ್ಟೆ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಎಚ್.ಎನ್.ನಾಗರಾಜ್ ಗ್ರಾಮಸ್ಥರೊಬ್ಬರಿಂದ ಎರಡು ಸಾವಿರದ ನೂರ ಐವತ್ತು ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೋಲೀಸರ ಬಲೆಗೆ ಬಿದ್ದಿದ್ದಾರೆ.
ಹೊಯ್ಸಳಕಟ್ಟೆ ಗ್ರಾಮದ ನಿವಾಸಿಯೊಬ್ಬರ ಬಾಬ್ತು ನಿವೇಶನಕ್ಕೆ ಇ ಸ್ವತ್ತು ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಪಿರ್ಯಾದಿದಾರ ಎಸಿಬಿಗೆ ದೂರು ನೀಡಿದ್ದರು. ಸೆ. 8 ಬುಧವಾರ ಬೆಳಗ್ಗೆ 11.25 ಸಮಯದಲ್ಲಿ ತಾ.ಪಂ ಕಚೇರಿಯ ಸಮೀಪ ಖಾಸಗಿ ಅಂಗಡಿ ಮಳಿಗೆಗಳ ಮುಂಭಾಗದಲ್ಲಿ ಹಣ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಪೋಲೀಸರು ಹಣ ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪಿಡಿಓ ತಮ್ಮನ್ನು ಬಿಟ್ಟುಬಿಡುವಂತೆ ಕೇಳಿತ್ತಿದ್ದರು ಎಂದು ತಿಳಿದು ಬಂದಿದೆ.
ತುಮಕೂರು ಎಸಿಬಿ ಘಟಕದ ಡಿವೈಎಸ್‌ಪಿ ಮಲ್ಲಿಕಾರ್ಜುನ ಚುಕ್ಕಿ ನೇತೃತ್ವದಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ವೀರೇಂದ್ರ, ವಿಜಯಲಕ್ಷ್ಮೀ ಸಿಬ್ಬಂದಿಗಳಾದ ಗಿರೀಶ್‌ಕುಮಾರ್, ಯಶೋಧ, ರಮೇಶ್, ಮಹೇಶ್‌ಕುಮಾರ್, ನರಸಿಂಹರಾಜು, ಮೋಹನ್‌ಕುಮಾರ್, ಚಂದ್ರಶೇಖರ್, ಮತ್ತಿತರರು ದಾಳಿಯಲ್ಲಿ ಭಾಗವಹಿಸಿದ್ದರು.