ತುಮಕೂರು: ತುಮಕೂರು ನಗರದಲ್ಲಿ ನಡೆಯುತ್ತಿ ರುವ ರಸ್ತೆ ಕಾಮಗಾರಿಗಳು ಸಂಪೂರ್ಣ ಕಳಪೆ ಯಿಂದ ಕೂಡಿದ್ದು, ಟೆಂಡರ್ ಸಲ್ಲಿಸಿದ ಮೊತ್ತಕ್ಕೂ, ವರ್ಕ ಆಡರ್ ನೀಡಿರುವ ಮೊತ್ತಕ್ಕೂ ಸಾಕಷ್ಟು ವೆತ್ಯಾಸವಿದ್ದು, ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆ ಇರುವುದರಿಂದ ಇಡೀ ಯೋಜನೆಯನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸುವಂತೆ ಪಾಲಿಕೆ ಯ ವಿರೋಧಪಕ್ಷದ ನಾಯಕ ಜೆ.ಕುಮಾರ್ ಒತ್ತಾಯಿಸಿದ್ದಾರೆ.
ನಗರಪಾಲಿಕೆಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ನಡೆಯುತ್ತಿದೆ.ಒಂದು ಕೆಲಸವೂ ಪೂರ್ಣಗೊಂಡಿಲ್ಲ. ಅಲ್ಲದೆ ಮುಂದಿನ ದಿನಗಳಲ್ಲಿ ಇದನ್ನು ನಿರ್ವಹಿಸಬೇಕಾದ ಪಾಲಿಕೆಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆರ್.ಟಿ.ಇ ಮೂಲಕ ಮನವಿ ಸಲ್ಲಿಸಿದರೂ ಸಮರ್ಪಕ ಉತ್ತರವನ್ನು ಅಧಿಕಾರಿಗಳು ನೀಡುತ್ತಿಲ್ಲ.ಪ್ರಶ್ನಿಸಿದರೆ,ಜಿಲ್ಲಾಧಿಕಾರಿಗಳು ಪೊಲೀಸರ ಕಾವಲಿನಲ್ಲಿ ಕೆಲಸ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ.ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಗುತ್ತಿಗೆದಾರರು ಮತ್ತು ಸ್ಮಾರ್ಟ್ಸಿಟಿ ಅಧಿಕಾರಿಗಳ ನಡುವೆ ಅವ್ಯವಹಾರ ನಡೆದಿರುವ ಶಂಕೆಇದೆ. ಹಾಗಾಗಿ ಇಡೀ ಯೋಜನೆಯನ್ನೇ ಲೋಕಾಯುಕ್ತ ತನಿಖೆಗೆ ಒಳಪಡಿಸುವುದು ಸೂಕ್ತ ಎಂದರು.
4ನೇ ವಾರ್ಡಿನ ಸದಸ್ಯ ಮಹೇಶ್ ಮಾತನಾಡಿ, ತುಮಕೂರಿನ ಹೃದಯ ಭಾಗದಲ್ಲಿರುವ ವಿವೇಕಾನಂದ ರಸ್ತೆ ಕಾಮಗಾರಿ ಎಂಟು ತಿಂಗಳಾ ದರೂ ಮುಗಿದಿಲ್ಲ.ಅನಗತ್ಯವಾಗಿ ಜಲ್ಲಿ ಹಾಕಿ ಸಾರ್ವಜನಿಕರ ತೆರಿಗೆ ಹಣವನ್ನು ಪೊಲು ಮಾಡ ಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ರಸ್ತೆ ಸರಿಯಾಗದ ಕಾರಣ ಅಂಗಡಿಗಳ ಮಾಲೀಕರು ವ್ಯಾಪಾರ,ವಹಿವಾಟು ಇಲ್ಲದೆ,ಬಾಡಿಗೆ ಕಟ್ಟಲು ಪರದಾಡುವಂತಹ ಸ್ಥಿತಿ ಇದೆ.ಅಲ್ಲದೆ 14 ಕೋಟಿ ರೂ ಖರ್ಚು ಮಾಡಿದರೂ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಕಾಮಗಾರಿಯ ಸೆಲ್ಲರ್ ರೆಡಿ ಮಾಡಿಲ್ಲ. ಅನಗತ್ಯವಾಗಿ ಒಂದೇ ಕಾಮಗಾರಿಗೆ ಪದೇ ಪದೇ ಎಸ್ಟಿಮೆಂಟ್ ಕಾಸ್ಟ್ ಹೆಚ್ಚಳ ಮಾಡಿ, ಮನಬಂದAತೆ ಹಣ ಖರ್ಚು ಮಾಡಲಾಗುತ್ತಿದೆ. ಸ್ಮಾರ್ಟ್ಸಿಟಿ ಎಂಬುದು ತುಮಕೂರು ನಗರದ ಜನತೆಗೆ ಒಂದು ಶಾಪವಾಗಿದೆ ಎಂದರು. ಸದಸ್ಯರ ಈ ಅಭಿಪ್ರಾಯವನ್ನು ಮೇಯರ್ ಆದಿಯಾಗಿ ಬಹುತೇಕ ಸದಸ್ಯರು ಮೇಜು ಕುಟ್ಟಿ ಅನುಮೋಧಿಸಿದರು.
2019-20ನೇ ಸಾಲಿನ ಆಸ್ತಿ ತೆರಿಗೆ ಮುಂದು ವರೆಸಲು ನಿರ್ಣಯ:ಕೇಂದ್ರ ಸರಕಾರದ ಮಾರ್ಗ ದರ್ಶನದಂತೆ ರಾಜ್ಯ ಸರಕಾರ ಪಾಲಿಕೆಗಳ ವ್ಯಾಪ್ತಿ ಯಲ್ಲಿರುವ ಬರುವ ಖಾಲಿ ನಿವೇಶನಗಳ ಎಸ್.ಆರ್.ದರದ ಶೇ25ರನ್ನು ಪರಿಗಣಿಸಿ,ಅದರ ಮೇಲೆ ಶೇ0.25 ರಷ್ಟು ತೆರಿಗೆ ವಿಧಿಸಿ,2021ರ ಫೆಬ್ರವರಿ ಯಿಂದ ಜಾರಿ ಮಾಡಲಾಗಿದೆ.ಆದರೆ ಕೋರೋನ ಸಂದರ್ಭದಲ್ಲಿ ಇದು ಜನಸಾಮಾನ್ಯರಿಗೆ ಅತ್ಯಂತ ಹೊರೆಯಾಗಿದೆ. ಅಲ್ಲದೆ ಸದರಿ ವಿಚಾರವನ್ನು ಅಧಿಕಾರಿಗಳು ತೆರಿಗೆ ನಿರ್ಧರಣೆ ಸ್ಥಾಯಿಸಮಿತಿಯ ಮುಂz ಯಾಗಲಿ, ಸಾಮಾನ್ಯ ಸಭೆಯಲ್ಲಾಗಲಿ ಚರ್ಚಿಸದೆ, ಮೇಯರ್ ಅವರಿಂದ ಘಟನೋತ್ತರ ಮಂಜೂರಾತಿ ಪಡೆದು, ಏಕಾಎಕಿ ಜಾರಿಗೆ ತಂದಿದೆ.ಇದರಿAದ ಶೇ10ರಷ್ಟು ತೆರಿಗೆ ಹೆಚ್ಚಳವಾಗಿದೆ. ಹಾಗಾಗಿ ಸದರಿ ಆದೇಶವನ್ನು ರದ್ದುಗೊಳಿಸಿ,ಈ ಹಿಂದಿನAತೆಯೇ ತೆರಿಗೆ ಕಟ್ಟಿಸಿಕೊಳ್ಳುವಂತೆ ಪಾಲಿಕೆ ಸದಸ್ಯರು ಪಕ್ಷ ಬೇಧ ಮೆರೆತು ನಿರ್ಣಯ ಕೈಗೊಂಡರು.ಸರಕಾರದ ನಿರ್ದೇಶನದಂತೆ ಎಷ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಳ ಮಾಡಬೇಕೆಂಬುದನ್ನು ಸಮಿತಿ ರಚಿಸಿ, ತೀರ್ಮಾನ ಕೈಗೊಂಡು ಸರಕಾರಕ್ಕೆ ಪರಿಷ್ಕರಣೆಗೆ ಕಳುಹಿಸಲು ಸಭೆ ಒಪ್ಪಿಗೆ ನೀಡಿತ್ತು.
ಅಧಿಕೃತ ಖಾತೆಗಳನ್ನು ಅಸೇಸ್‌ಡ್ ಖಾತೆಗಳಾಗಿ ಮುಂದುವೆರಸಲು ಒತ್ತಾಯ: ನಗರದಲ್ಲಿ ಈ ಹಿಂದೆ ಆಯುಕ್ತರಾಗಿದ್ದವರು, ರವಿನ್ಯೂ ಜಾಗದಲ್ಲಿ ಭೂ ಪರಿವರ್ತನೆಯಾಗದೆ, ಟೂಡಾದಿಂದ ಅನುಮೋಧನೆ ಪಡೆಯದ ನಿವೇಶನಗಳನ್ನು ಅಸೇಸ್‌ಡ್ ಖಾತೆಗಳಾಗಿ ಮಾಡಿದ್ದಾರೆ. ಪ್ರಸ್ತುತ ಸರಕಾರದ ನಿಯಮದ ಪ್ರಕಾರಣ ಇದು ಕಾ ನೂನು ಬಾಹಿರವಾಗಿರುತ್ತದೆ. ಹಾಗಾಗಿ ಸುಮಾರು 29 ಸಾವಿರ ನಿವೇಶನಗಳ ಮಾಲೀಕರು ತೊಂ ದರೆಗೆ ಒಳಗಾಗಲಿದ್ದಾರೆ. ಆದ್ದರಿಂದ ಈ ಹಿಂದೆ ಅಧಿಕಾರಿಗಳು ಮಾಡಿದ ತಪ್ಪಿಗಾಗಿ ಜನಸಾಮಾನ್ಯರಿಗೆ ತೊಂದರೆ ನೀಡುವುದು ಬೇಡ. ಇದುವರೆಗೂ ಟೂಡಾ ಅನುಮೋಧನೆ ಪಡೆಯದೆಯೂ ಫಾರಂ ನಂಬರ್ 3 ಪಡೆದಿರುವ ನಿವೇಶನಗಳ ಮಾಲೀ ಕರನ್ನು ಅಸೇಸ್‌ಡ್ ಖಾತೆಗಳೆಂದು ಪರಿಗಣಿಸಲು ಅವಕಾಶ ಕಲ್ಪಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ, ನಿರ್ಣಯ ಕೈಗೊಳ್ಳಲಾಯಿತು.
ರಾಯಗಾಲುವೆಗಳ ತಡೆಗೋಡೆ ತೆರವಿಗೆ ಒತ್ತಾಯ: ತುಮಕೂರು ನಗರದಲ್ಲಿರುವ ಅಮಾನಿಕೆರೆಗೆ ದೇವ ರಾಯನ ದುರ್ಗ ಸೇರಿದಂತೆ ಹಲವು ಕಡೆಗಳಿಂದ ಸುಮಾರು 6 ರಾಯಗಾಲುವೆಗಳಿದ್ದು, ಎಲ್ಲವನ್ನು ಸ್ಮಾರ್ಟ್ಸಿಟಿಯವರು ಮುಚ್ಚಿದ್ದಾರೆ.ಹೀಗಾಗಿ ಜೋರು ಮಳೆ ಬಂದರೆ ಕಾಲುವೆಯ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಆಪಾಯ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ತಡೆ ಹಾಕಿರುವ ರಾಯ ಗಾಲುವೆಗಳನ್ನು ತೆರವುಗೊಳಿಸುವಂತೆ 23ನೇ ವಾರ್ಡಿನ ಸದಸ್ಯ ನರಸಿಂಹಮೂರ್ತಿ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸ್ಮಾರ್ಟ್ಸಿಟಿ ಎಂ.ಡಿ. ರಂಗಸ್ವಾಮಿ,ಅಮಾನಿಕೆರೆಗೆ ಕೊಳಚೆ ನೀರು ಸೇರುತಿದ್ದ ಹಿನ್ನೆಲೆಯಲ್ಲಿ ಅದನ್ನು ಬೇರೆಡೆಗೆ ಕಳುಹಿ ಸಲು ಪ್ರತ್ಯೇಕ ಡೈನೇಜ್ ಮಾಡಲಾಗುತ್ತಿದೆ. ಸದರಿ ಡ್ರೆöÊನೇಜ್ ಕೆಲಸ ಮುಗಿದ ತಕ್ಷಣ ರಾಯಗಾಲುವೆಗಳಿಗೆ ಹಾಕಿರುವ ತಡೆಯನ್ನು ತೆರವು ಗೊಳಿಸಲಾಗುವುದು. ಅಲ್ಲದೆ ಬೆಳಗುಂಬ ರಸ್ತೆಯ ಅಭಿವೃದ್ದಿ ಕಾರ್ಯ ವೇಗದಲ್ಲಿ ನಡೆಯುತಿದ್ದು, ಅಕ್ಟೋಬರ್ ಅಂತ್ಯದೊಳಗೆ ಕೋತಿ ತೋಪಿನಿಂದ ಹನುಮಂತಪುರದ ಸೇತುವೆ ವರೆಗೆ ಕಾಮಗಾರಿ ಪೂರ್ಣಗೊಳಿಸಿ ಜನಸಂಚಾರಕ್ಕೆ ಮುಕ್ತಗೊಳಿಸಲಾಗುವುದು.ಇದೇ ರೀತಿ ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದರು
ಸಭೆಯ ಅಧ್ಯಕ್ಷತೆಯನ್ನು ಮೇಯರ್ ಬಿ.ಜಿ.ಕೃಷ್ಣಪ್ಪ ವಹಿಸಿದ್ದರು. ಪಾಲಿಕೆ ಆಯುಕ್ತರಾದ ರೇಣಕಾ, ಉಪಮೇಯರ್ ನಾಜೀಮಾ ಬಿ, ಸಂಸದ ಜಿ.ಎಸ್.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.