ಜಿಲ್ಲೆತುಮಕೂರು
Trending

ದಲಿತರ ಶೋಷಣೆ ಸಹಿಸುವುದಿಲ್ಲ : ಎಸ್ಪಿ ರಾಹುಲ್‌ಕುಮಾರ್

ತುಮಕೂರಿನ ಎಸ್ಪಿ ಕಚೇರಿಯಲ್ಲಿ ದಲಿತರ ಕುಂದು ಕೊರತೆ ಸಭೆ

ತುಮಕೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರಕರಣದಲ್ಲಿ ಕೌಂಟರ್ ಪ್ರಕರಣ ದಾಖಲಿಸದಂತೆ ಹೇಳಲು ಕಾನೂನು ರೀತ್ಯ ಅವಕಾಶವಿಲ್ಲ ಹಾಗಾಗಿ ತನಿಖಾಧಿಕಾರಿಯೇ ಎರಡು ಪ್ರಕರಣಗಳನ್ನು ವಿಚಾರಣೆ ನಡೆಸಬೇಕು ಎಂದು ಎಸ್ಪಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ದಲಿತ ಮುಖಂಡರು ಕೌಂಟರ್ ಪ್ರಕರಣಗಳನ್ನು ದಾಖಲಿಸದಂತೆ ಒತ್ತಾಯ ಮಾಡುತ್ತಿರುವುದು ಸರಿಯಲ್ಲ.ಕಾನೂನು ರೀತ್ಯ ಒಬ್ಬರೇ ಎರಡು ಪ್ರಕರಣಗಳ ತನಿಖೆ ಮಾಡಲು ಸೂಚಿಸಲಾಗುವುದು ಎಂದರು.
ದಲಿತ ಮುಖಂಡರ ಮೇಲೆ ರೌಡಿಶೀಟರ್ ತೆಗೆಯುತ್ತಿರುವ ಬಗ್ಗೆ ದೂರುಗಳಿದ್ದು, ಜಿಲ್ಲೆಯಲ್ಲಿ ಮೂರು ಸಾವಿರ ರೌಡಿಶೀಟರ್ ಗಳಿದ್ದು,ಶೇಕಡವಾರು ಪ್ರಕರಣಗಳ ಆಧಾರದ ಮೇಲೆ ರೌಡಿಶೀಟರ್ ಪಟ್ಟಿಯಿಂದ ಕೈಬಿಡಲು ಸೂಚಿಸಲಾಗಿದೆ.ಅಪರಾಧ ಪ್ರಮಾಣದ ಆಧಾರದ ಮೇಲೆ ಪಟ್ಟಿಯಿಂದ ಕೈ ಬಿಡಲಾಗುವುದು ಎಂದು ಹೇಳಿದರು.

ಪೊಲೀಸ್ ಠಾಣೆಗಳಲ್ಲಿ ದಲಿತರನ್ನ ಸೌಜನ್ಯದಿಂದ ಮಾತನಾಡಿಸುತ್ತಿಲ್ಲ ಎಂದು ದಲಿತ ಮುಖಂಡರು ಎಸ್ಪಿ ಅವರ ಗಮನಕ್ಕೆ ತಂದಾಗ,ಈ ಬಗ್ಗೆ ಕ್ಷಮೆ ಕೇಳುವುದನ್ನು ಬಿಟ್ಟರೆ ಬೇರೆ ಏನು ಮಾಡಲು ಸಾಧ್ಯವಿಲ್ಲ,ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ,ಎಸ್ಪಿಯಾಗಿ ನಿಮ್ಮೊಂದಿಗೆ ವರ್ತಿಸುತ್ತೇನೆ ಎಂಬುದು ಕಿರಿಯ ಅಧಿಕಾರಿಗಳು ನೋಡಿ ಕಲಿತುಕೊಳ್ಳುತ್ತಾರೆ ಎಂದು ಎಸ್ಪಿ ರಾಹುಲ್ ಕುಮಾರ್ ಭರವಸೆ ನೀಡಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಬಕಾರಿ ಪ್ರಕರಣಗಳಲ್ಲಿ ಪೊಲೀಸರು ಎಸ್ಸಿ,ಎಸ್ಟಿ ಸಮುದಾಯದವರ ಮೇಲೆಯೇ ಪ್ರಕರಣ ದಾಖಲಿಸುತ್ತಿದ್ದಾರೆ.ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು, ದಲಿತ ಸಮುದಾಯದವರ ಮೇಲೆ ದಾಖಲಾಗಿರುವ ಪ್ರಕರಣ ಬಗ್ಗೆ ಎಸ್ಪಿ ಕಚೇರಿಗೆ ಮಾಹಿತಿ ನೀಡಬೇಕು ಎಂದು ಡಿವೈಎಸ್ಪಿಗಳಿಗೆ ಸೂಚಿಸಿದ ಅವರು, ದಲಿತರ ಮೇಲೆ ಪ್ರಕರಣ ದಾಖಲಾದ ನಂತರ ಮಾಹಿತಿಯನ್ನು ತುರ್ತಾಗಿ ನೀಡುವಂತೆ ಸೂಚಿಸಿದರು.
ದಲಿತರಿಗೆ ಅನ್ಯಾಯವಾದರೆ ಪ್ರತಿಭಟಿಸುವುದು ಸ್ವಾಗತಾರ್ಹ.ಆದರೆ ದಲಿತ ಮುಖಂಡರೇ ದಲಿತ ಶೋಷಣೆಗೆ ಮುಂದಾದರೆ ಅಂತಹ ಪ್ರಕರಣಗಳನ್ನು ಸಹಿಸುವುದಿಲ್ಲ. ಪ್ರಕರಣದ ಪರ ಮತ್ತು ವಿರುದ್ದ ಇಬ್ಬರು ಇಲ್ಲಿಯೇ ಇದ್ದಾಗ,ನಾನು ಯಾರನ್ನು ಪ್ರಶ್ನಿಸಲಿ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿ ಎಸ್ಪಿ ಅವರು,ದಲಿತ ಸಂಘಟನೆಗಳ ಹೆಸರಿನಲಿ ದಲಿತರನ್ನೇ ಶೋಷಿಸುವ ಸಂಘಟನೆಯ ಮುಖಂಡರ ವಿರುದ್ದ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳುವುದಲ್ಲದೆ, ಮುಂದಿನ ಸಭೆಗೆ ಬಾರದಂತೆ ನೊಟೀಷ್ ನೀಡುವುದಾಗಿ ಎಚ್ಚರಿಕೆ ನೀಡಿದರು.
ಪಾವಗಡದ ಹಳ್ಳಿಯೊಂದರಲ್ಲಿ ಜನರ ಉಪಯೋಗಕ್ಕೆಂದು ನಿರ್ಮಿಸಿದ ಸಮುದಾಯ ಭವನವನ್ನು ದೇವಾಲಯವಾಗಿ ಪರಿವರ್ತಿಸಿ,ದಲಿತ ಸಮುದಾಯದ ಅಸ್ಪೃಷ್ಯರನ್ನು ಭವನದ ಒಳಗೆ ಪ್ರವೇಶ ನೀಡುತ್ತಿಲ್ಲ ಎಂಬ ದೂರು ಬಂದಿದೆ. ಈಗಾದರೆ ಹೇಗೆ, ಮೊದಲು ನಿಮ್ಮಲ್ಲಿ ಒಗ್ಗಟ್ಟು ಮೂಡಬೇಕು. ನಿಜವಾಗಿಯೂ ದಲಿತರು ಎಂಬ ಕಾಳಜಿ ಇದ್ದರೆ ಮೊದಲು ಅಸ್ಪೃಷ್ಯರು ಭವನದ ಒಳಗೆ ಕರೆದುಕೊಂಡು ಹೋಗಿ, ನಂತರ ನಿಮ್ಮ ಉಳಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಎಂದು ಎಸ್ಪಿ ರಾಹುಲ್‌ಕುಮಾರ್ ಶಹಾಪುರ್ ವಾಡ್ ಸಲಹೆ ನೀಡಿದರು.
ಸರಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಿಗೆ ಎಲ್ಲಾ ಸಮುದಾಯದವರಿಗೆ ಮುಕ್ತ ಅವಕಾಶ ಎಂಬ ನಾಮಫಲಕವಿದ್ದರೂ ಕೆಲವು ಕಡೆಗಳಲ್ಲಿ ಸ್ಥಳೀಯ ಅಸ್ಪೃಷ್ಯ ಸಮುದಾಯಕ್ಕೆ ಸೇರಿದವರನ್ನು ದೇವಾಲಯದ ಒಳಗೆ ಪ್ರವೇಶ ನೀಡುತ್ತಿಲ್ಲ.ಇದು ನಿಜಕ್ಕೂ ಅಮಾನಕರ,ಪ್ರಶ್ನಿಸಿದರೆ ಗುಂಪು ಗಲಭೆಗಳಾಗುವ ಸಾಧ್ಯತೆ ಇರುತ್ತದೆ.ಹಾಗಾಗಿ ದೇವಾಲಯ ದ ಪೂಜಾರಿಗಳೇ ನಮ್ಮನ್ನು ಒಳಗೆ ಕರೆದು,ನಾವು ತೆಗೆದುಕೊಂಡು ಹೋಗಿರುವ ಹಣ್ಣು,ಕಾಯಿಗಳನ್ನು ಒಡೆದು,ದೇವರ ಮುಂದಿಟ್ಟು ಪೂಜೆ ಮಾಡಿಕೊಡುವಂತೆ ಎಲ್ಲಾ ದೇವಾಲಯಗಳ ಪೂಜಾರಿಗಳಿಗೆ ಸೂಚನೆ ನೀಡುವಂತೆ ದಲಿತ ನಾರಾಯಣ್ ಎಸ್ಪಿ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರಾಹುಲ್‌ಕುಮಾರ್ ಶಹಪೂರವಾಡ್, ಶೀಘ್ರವೇ ಎಲ್ಲಾ ದೇವಾಲಯ ಗಳ ಪೂಜಾರಿಗಳನ್ನು ಕರೆದು ಸೂಕ್ತ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಎಎಸ್ಪಿ ಉದೇಶ್, ಡಿವೈಎಸ್ಪಿ ಶ್ರೀನಿವಾಸ್, ಜಿಲ್ಲೆಯ ವಿವಿಧ ಉಪವಿಭಾಗಗಳ ಡಿವೈಎಸ್ಪಿಗಳು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker