
ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿ ಶಿಂಷಾ ನದಿ ಸೇರುವ ಮೂಲಕ ನೀರು ಪೋಲಾಗುತ್ತಿದೆ. ಮಂಗಳ ಜಲಾಶಯ ತುಂಬಿಸಲು ಸಾದ್ಯವಾಗುತ್ತಿಲ್ಲ ಕೂಡಲೇ ಸರ್ಕಾರ ಮಾರ್ಕೋನಹಳ್ಳಿ ಡ್ಯಾಂ ನಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮಾಡುವುದರ ಜೊತೆಗೆ ಮಂಗಳಾ ಜಲಾಶಯ ತುಂಬಿಸಿ ರೈತರು ಬೆಳೆಬೆಳೆಯಲು ಅವಕಾಶ ಕಲ್ಪಿಸಬೇಕು ಇಲ್ಲದಿದ್ದರೆ ಸೆ.13 ರಂದು ಯಡಿಯೂರು ಹೇಮಾವತಿ ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕಿನ ಅಮೃತೂರು ಹೋಬಳಿ ಮಂಗಳಾ ಜಲಾಶಯದ ಹತ್ತಿರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪತ್ರಿಕಾ ಗೋಷ್ಠಿ ಧೀಮಂತ ರಾಜಕಾರಣಿ ವೈ.ಕೆ. ರಾಮಯ್ಯ ನವರು ಶಾಸಕರಾಗಿದ್ದಾಗಲೇ ಮಾರ್ಕೋನಹಳ್ಳಿಯಿಂದ ಮಂಗಳ ಜಲಾಶಯಕ್ಕೆ ನೀರು ಹರಿಸುವ ಯೋಜನೆ ರೂಪಿಸಿದ್ದರು, ಅಂದು ಜಲಾಶಯದಿಂದ ನೀರು ವ್ಯರ್ಥವಾಗಿ ಹೊರ ಹೋಗುತ್ತಿರುವ ಬಗ್ಗೆ ಸಮೀಕ್ಷೆ ನಡೆಸಿದಾಗ ಮಾರ್ಕೋನಹಳ್ಳಿ ಜಲಾಶಯ ತುಂಬಿ ಹನ್ನೊಂದುವರೆ ಟಿ.ಎಂ.ಸಿ ನೀರು ಪೋಲಾಗುತ್ತಿರುವುದು ಗಮನಕ್ಕೆ ಬಂದಾಗ ಮಂಗಳಾ ಜಲಾಶಯದ ಸಾಮಥ್ರ‍್ಯ ಒಂದುವರೆ ಟಿ.ಎಂ.ಸಿ. ಇರುವುದರಿಂದ ಮಂಗಳಾ ಡ್ಯಾಂಗೆ ನೀರು ಹರಿಸುವುದರಿಂದ ಯಾರಿಗೂ ಸಮಸ್ಯೆ ಇಲ್ಲಾ, ನೀರು ಪೋಲಾಗುವ ಬದಲು ಮಂಗಳ ಡ್ಯಾಂ ಸೇರಿದರೆ ರೈತರಿಗೆ ಉಪಯೋವಾಗಲಿದೆ ಎಂದು ಅಂದೇ ವೈ.ಕೆ.ಆರ್ ಕನಸು ಕಂಡಿದ್ದರು.
ನAತರದ ದಿನಗಳಲ್ಲಿ ರಾಜ್ಯ ರೈತ ಸಂಘ ಈ ಯೋಜನೆಯನ್ನು ಕೈಗೆತ್ತಿಕೊಂಡು ಹೋರಾಟ ಮಾಡುತ್ತಲೇ ಬಂದಿದೆ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಈ ಯೋಜನೆ ಕೈಗೆತ್ತಿಕೊಳ್ಳಿ ಎಂದ ಅವರು ಶಾಸಕ ಡಾ|| ರಂಗನಾಥ್‍ಗೆ ಮಾರ್ಕೋನಹಳ್ಳಿ, ಮಂಗಳಾ ಮತ್ತು ದೊಡ್ಡಕೆರೆ ಅಚ್ಚುಕಟ್ಟುದಾರರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲಾ, ಕಾಳಜಿ ಇದ್ದಿದ್ದರೆ ನೀರಾವರಿ ಇಲಾಖೆಯ ಸುಮಾರು 40 ಕೋಟಿ ಅನುದಾನವನ್ನ ಜಿ.ಪಂ., ಪಿಡಬ್ಲ್ಯುಡಿ ಇಲಾಖೆಯ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡುತ್ತಿರಲಿಲ್ಲ, ಗುತ್ತಿಗೆದಾರರ ಜೇಬು ಭರ್ತಿ ಮಾಡುವ ಉದ್ದೇಶದಿಂದ ಈರೀತಿ ಮಾಡಿದ್ದಾರೆ, ಅದೇ ಹಣವನ್ನ ಲಿಂಕ್‌ಕೆನಾಲ್‌ಗೆ ಬಳಸಿಕೊಳ್ಳಬಹುದಿತ್ತು ಬರೀ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ ಹೆಚ್ಚು ದಿನ ಇದುಉಳಿಯುವುದಿಲ್ಲ ಮುಂದಿನ ದಿನಗಳಲ್ಲಿ ಮತದಾರರು ದಿಟ್ಟ ಉತ್ತರ ನೀಡುತ್ತಾರೆ ಕಾದು ನೋಡಲಿ.
ನಾಗಮಂಗಲತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುವುದನ್ನ ತಡೆಯುತ್ತಿದ್ದೇನೆ ಎಂಬ ನಾಟಕವಾಡಿ ಅದ್ಯಾವ ಮುಖ ಇಟ್ಟುಕೊಂಡು ನಾಗಮಂಗಲ ತಾಲ್ಲೂಕಿನಲ್ಲಿ ನಡೆಯುವ ಕಾಮಗಾರಿಗೆ ಗುದ್ದಲಿ ಪೂಜೆಗೆ ಹೋಗಿದ್ದರೋ ಅವರೇ ಉತ್ತರಿಸಬೇಕು, ಸೀಫೇಜ್ ನೀರನ್ನ ಡ್ಯಾಂಗೆ ಅಲರ್ಟ್ ಮಾಡಿಸಲು ಇವರ್ಯಾರು ಕುಡಿಯುವ ನೀರಿಗೆ ರಿಜರ್ವ್ ಮಾಡಿಸಿ ತಾಲ್ಲೂಕಿನ ದೊಡ್ಡಕೆರೆಯ ಅಚ್ಚುಕಟ್ಟುದಾರರಿಗೆ ನಾಮ ಹಾಕಿದಂತೆ ,ಮಾರ್ಕೋನಹಳ್ಳಿ ರೈತರಿಗೂ ನಾಮಹಾಕಲು ಹೊರಟಿದ್ದಾರೆ, ಇದರಿಂದ ಎರಡು ತಾಲ್ಲೂಕಿನ ರೈತರಿಗೆ ಅನ್ಯಾಯವಾಗುತ್ತದೆ ಯಾವ ಶಕ್ತಿ ಶಾಸಕರನ್ನ ಹಿಡಿದಿಟ್ಟುಕೊಂಡಿದೆಯೋ ತಿಳಿದಿಲ್ಲಾ ಇಷ್ಟೆಲ್ಲಾ ರೈತರಿಗೆ ಅನ್ಯಾಯವಾದರೂ ಶಾಸಕರು ಮಾತ್ರ ಬಾಯಿ ಮುಚ್ಚಿಕೊಂಡಿದ್ದಾರೆ ಎಂದರು.
ತಾಲ್ಲೂಕು ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ ಮಾರ್ಕೋನಹಳ್ಳಿ ನೀರು ಶಿಂಷಾ ನದಿ ಪಾಲಾಗುವುದು ಬೇಡ ಮಂಗಳ ಡ್ಯಾಂ ಸೇರಿದರೆ 19 ಹಳ್ಳಿಗಳ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ, ನಾಗಮಂಗಲ ತಾಲ್ಲೂಕಿಗೆ ಕುಡಿಯುವ ನೀರು ಬೇಕಾದರೆ ಎನ್.ಬಿ.ಸಿ. ಎಸ್.ಬಿ.ಸಿ ನಾಲೆಗಳಿವೆ ಸೂಳೆಕೆರೆ, ದಾಸನಕೆರೆಗಳಿವೆ ಅಲ್ಲಿಂದ ನೀರು ತೆಗೆದುಕೊಂಡು ಹೋಗಬಹುದು ಮಾರ್ಕೋನಹಳ್ಳಿ ಅಚ್ಚುಕಟ್ಟುದಾರರಿಗೆ ಅನ್ಯಾಯ ಮಾಡಿ ನಾಗಮಂಗಲಕ್ಕೆ ನೀರು ಕೊಡುವ ಉದ್ದೇಶವೇನು, ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಆಧುನಿಕ ಭಗೀರಥ ಎಂದು ಕರೆಸಿಕೊಳ್ಳುವ ಶಾಸಕರು ಎಲ್ಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.